ಮೂಡಬಿದಿರೆ, ಸೆ. 22: ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಮೂಡಬಿದಿರೆಯ ಆಳ್ವಾಸ್ ಆಂಗ್ಲಮಾಧ್ಯಮ ಪ್ರೌಢಶಾಲೆ ಸಂಯುಕ್ತ ಆಶ್ರಯದಲ್ಲಿ ಮೂಡಬಿದಿರೆ ವಿದ್ಯಾಗಿರಿಯ ಪ್ಯಾಲೇಸ್ ಗ್ರೌಂಡ್‍ನಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಪ್ರಾಥಮಿಕ, ಪ್ರೌಢಶಾಲಾ ಫುಟ್‍ಬಾಲ್ ಪಂದ್ಯಾಟದ ಎರಡು ವಿಭಾಗಗಳಲ್ಲಿ ಕೊಡಗು ಜಿಲ್ಲೆ ಚಾಂಪಿಯನ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.
14 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ದಕ್ಷಿಣ ಕನ್ನಡ ಚಾಂಪಿಯನ್ ಪ್ರಶಸ್ತಿಯನ್ನು ಪಡೆಯಿತು. ಕೊಡಗು ದ್ವಿತೀಯ ಸ್ಥಾನ ಪಡೆಯಿತು. 17 ವರ್ಷ ವಯೋಮಿತಿ ಬಾಲಕರ ವಿಭಾಗದಲ್ಲಿ ಕೊಡಗು ಪ್ರಥಮ, ಮಂಡ್ಯ ದ್ವಿತೀಯ ಸ್ಥಾನ ಪಡೆಯಿತು. 17 ವರ್ಷ ವಯೋ ಮಿತಿಯ ಬಾಲಕಿಯರ ವಿಭಾಗದಲ್ಲಿ ಕೊಡಗು ಪ್ರಥಮ ಹಾಗೂ ದಕ್ಷಿಣ ಕನ್ನಡ ದ್ವಿತೀಯ ಸ್ಥಾನ ಪಡೆಯಿತು.
ಲೆವಿನ್ (ಮಂಗಳೂರು), ಪುಷ್ಯಾ ಕೆ.ಪಿ. (ಕೊಡಗು) ಮರ್ವಿನ್ ಜಾನ್ಸನ್ (ಗೋಲ್‍ಕೀಪರ್) ಪಂದ್ಯಾಟದಲ್ಲಿ ಉತ್ತಮ ಆಟಗಾರ ಪ್ರಶಸ್ತಿಯನ್ನು ಪಡೆದರು.