ಮಡಿಕೇರಿ, ಜು. 31: ಪೊನ್ನಂಪೇಟೆಯ ಕಿಗ್ಗಟ್ಟ್‍ನಾಡ್ ಕೊಡವ ಹಿತರಕ್ಷಣಾ ಬಳಗದಿಂದ ಕಳೆದ ಹಲವು ವರ್ಷಗಳಿಂದ ಸಾರ್ವತ್ರಿಕವಾಗಿ ಆಚರಿಸಿಕೊಂಡು ಬರಲಾಗುತ್ತಿರುವ ಕಕ್ಕಡ ಪದಿನೆಟ್ಟ್ ಕಾರ್ಯಕ್ರಮ ಆ. 3 ರಂದು ಜರುಗಲಿದೆ.
ಈ ಪ್ರಯುಕ್ತ ಅಂದು ಸಂಜೆ 6 ಗಂಟೆಗೆ ಪೊನ್ನಂಪೇಟೆ ಕೊಡವ ಸಮಾಜದಿಂದ ತೂಡ್ ಮೆರವಣಿಗೆ (ಪಂಜಿನ ಮೆರವಣಿಗೆ) ನಡೆಯಲಿದೆ. ಕೊಡವ ಸಮಾಜದಿಂದ ಆರಂಭಗೊಳ್ಳಲಿರುವ ಮೆರವಣಿಗೆ ಮುಖ್ಯರಸ್ತೆಯ ಮೂಲಕ ಸಾಗಿ ಬಸವೇಶ್ವರ ದೇವಸ್ಥಾನದ ಪ್ರದಕ್ಷಿಣೆಯೊಂದಿಗೆ ಮತ್ತೆ ಕೊಡವ ಸಮಾಜದಲ್ಲಿ ಸಮಾಪನಗೊಳ್ಳಲಿದೆ.
ಬಳಿಕ ಸಭಾ ಕಾರ್ಯಕ್ರಮ ಹಿತರಕ್ಷಣಾ ಬಳಗದ ಅಧ್ಯಕ್ಷ ಚಿರಿಯಪಂಡ ರಾಜಾ ನಂಜಪ್ಪ ಅವರ ಅಧ್ಯಕ್ಷತೆಯಲ್ಲಿ ಜರುಗಲಿದೆ. ಮುಖ್ಯ ಅತಿಥಿಗಳಾಗಿ ಸಿಎನ್‍ಸಿ ಅಧ್ಯಕ್ಷ ನಂದಿನೆರವಂಡ ಯು. ನಾಚಪ್ಪ, ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆಕ್‍ಮಾಡ ರಾಜೀವ್ ಬೋಪಯ್ಯ ಪಾಲ್ಗೊಳ್ಳಲಿದ್ದಾರೆ.
ಈ ಸಂದರ್ಭ ಐಸಿಎಸ್ ಪಠ್ಯಕ್ರಮದಲ್ಲಿ 10ನೇ ತರಗತಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿದ ಅಜ್ಜಮಾಡ ಬಿ. ದೇವಯ್ಯ ಹಾಗೂ ಅಂತರರಾಷ್ಟ್ರೀಯ ಹಾಕಿ ಆಟಗಾರ ಆಲೆಮಾಡ ಬಿ. ಚೀಯಣ್ಣ ಅವರನ್ನು ಸನ್ಮಾನಿಸಲಾಗುವದು. ಬಳಿಕ ಕೊಡವ ಆರ್ಕೆಸ್ಟ್ರಾದೊಂದಿಗೆ ಕಕ್ಕಡ ಹದಿನೆಂಟರ ವಿಶೇಷತೆಯಾದ ಮದ್ದ್‍ಪಾಯಸ ಹಾಗೂ ನಾಟಿಕೋಳಿಯ ಭಕ್ಷ್ಯದೊಂದಿಗೆ ಊಟೋಪಚಾರದ ವ್ಯವಸ್ಥೆ ಇದೆ.