ಮಡಿಕೇರಿ, ಮಾ. 26: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಹಚ್ಚಿನಾಡು, ಹಮ್ಮಿಯಾಲ ಮತ್ತು ಮುಟ್ಲು ಗ್ರಾಮಸ್ಥರ ಸಹಯೋಗದಲ್ಲಿ ಕೊಡವ ಕಳಿನಮ್ಮೆ ಕಾರ್ಯಕ್ರಮವು ತಾ. 27 ರಂದು (ಇಂದು) ಬೆಳಿಗ್ಗೆ 10.30 ಗಂಟೆಗೆ ಹಮ್ಮಿಯಾಲದ ಶಾಲಾ ಆವರಣದಲ್ಲಿ ನಡೆಯಲಿದೆ.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಕೆ.ಪೊನ್ನಪ್ಪ, ಶಾಸಕ ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಸುನಿಲ್ ಸುಬ್ರಮಣಿ, ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್, ಗಾಳಿಬೀಡು ಗ್ರಾ.ಪಂ.ಅಧ್ಯಕ್ಷ ಪುದಿಯತಂಡ ಸುಭಾಷ್ ಸೋಮಯ್ಯ, ಜಿ.ಪಂ.ಸದಸ್ಯೆ ಪದ್ಮಾವತಿ, ತಾ.ಪಂ.ಸದಸ್ಯ ರಾಯ್ ತಮ್ಮಯ್ಯ, ಹಮ್ಮಿಯಾಲ ಗ್ರಾ.ಪಂ.ಸದಸ್ಯರಾದ ಮೊಣ್ಣಂಡ ರಮೇಶ್, ಮೊಣ್ಣಂಡ ಸೋಮವ್ವ, ಕೊಚ್ಚೆರ ಜಿ.ಗಂಗವ್ವ, ಪುದಿಯತಂಡ ರವಿ ಇತರರು ಭಾಗವಹಿಸಲಿದ್ದಾರೆ.