ಕುಶಾಲನಗರ, ಜ 11: ಕುಶಾಲನಗರ ಸರಕಾರಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ 7ನೇ ಸೆಮಿಸ್ಟರ್‍ನ ಶ್ರೀನಿವಾಸ್ ರಾಷ್ಟ್ರೀಯ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಮುಂದಿನ ಸ್ಪರ್ಧೆ ಮಲೇಷಿಯಾದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯಲಿದ್ದು, ಭಾರತ ತಂಡದಲ್ಲಿ ಪಾಲ್ಗೊಳ್ಳಲಿದ್ದಾರೆ. ಸ್ಟೂಡೆಂಟ್ ಒಲಿಂಪಿಕ್ಸ್ ಅಸೋಸಿಯೇಷನ್ ಇಂಡಿಯಾ ಪ್ರಾಯೋಜಿತ ಷಟಲ್ ಬ್ಯಾಡ್ಮಿಂಟನ್ ಇತ್ತೀಚೆಗೆ ಹರ್ಯಾಣದ ರೋಹ್ಟಕ್‍ನಲ್ಲಿ ನಡೆದಿದ್ದು ಸಿಂಗಲ್ಸ್ ಮತ್ತು ಡಬಲ್ಸ್‍ನಲ್ಲಿ ಚಿನ್ನದ ಪದಕ ಗಳಿಸಿದ್ದಾನೆ. ಶ್ರೀನಿವಾಸ್ ಸಿವಿಲ್ ವಿಭಾಗದ 7ನೇ ಸೆಮ್‍ನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.