ನಾಪೋಕ್ಲು, ಡಿ. 24: ಇಲ್ಲಿಗೆ ಸಮೀಪದ ಬೇತು ಗ್ರಾಮದ ಪ್ರಶಾಂತಕೇರಿಯ ಹುತ್ತರಿ ಊರೋರ್ಮೆ ಕಾರ್ಯಕ್ರಮ ಕೇರಿಯ ಅಧ್ಯಕ್ಷ ಕಲಿಯಂಡ ಕಾಳಪ್ಪ ಅವರ ಮನೆಯಲ್ಲಿ ಜರುಗಿತು. ಈ ಸಂದರ್ಭ ಕಲಿಯಂಡ ಸಾಬು ಅಯ್ಯಣ್ಣ , ಚೋಕಿರ ಪೊನ್ನಪ್ಪ, ಚೀಯಕಪೂವಂಡ ದೇವಿದೇವಯ್ಯ, ಹಾಗೂ ನೆರೆಯಂಡಮ್ಮಂಡ ಕೆ.ಪ್ರಭು ದುಡಿಕೊಟ್ಟ್ ಪಾಟ್‍ನೊಂದಿಗೆ ಹುತ್ತರಿ ಹಾಡನ್ನು ಹಾಡಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಚಂಗೇಟಿರ ಅಚ್ಚಯ್ಯ, ಮಂಡೀರ ಸೋಮಣ್ಣ, ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.