ಮಡಿಕೇರಿ, ಡಿ. 24: ರಸ್ತೆ ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವ ರಕ್ಷಕ ಪ್ರಶಸ್ತಿಯ ಬಗ್ಗೆ ರಸ್ತೆ ಅಪಘಾತದಂತಹ ಸಂಕಷ್ಟದ ಸಂದರ್ಭದಲ್ಲಿ ಗಾಯಾಳುಗಳಿಗೆ ತಕ್ಷಣ ಚಿಕಿತ್ಸೆ ಒದಗಿಸಲು ಜೀವ ಉಳಿಸಲು ನೆರವಾಗುವ ಸಾರ್ವಜನಿಕರಿಗೆ ಜೀವರಕ್ಷಕ ಪ್ರಸಸ್ತಿ ನೀಡಿ ಗೌರವಿಸುವ ನಿಟ್ಟಿನಲ್ಲಿ ಜೀವರಕ್ಷಕ ಪ್ರಶಸ್ತಿ ಸ್ಥಾಪಿಸಲಾಗಿದೆ.ಜೀವರಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲು ದಯಾಳು ಮತ್ತು ಉಪಕಾರಿ-ನಾಮಕರಣ ವ್ಯಕ್ತಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ರಸ್ತೆ ಅಪಘಾತದ ಗಾಯಾಳುಗಳಿಗೆ ನೆರವಾಗಲು ಶ್ರಮಿಸಿದ ಯಾವದೆ ವಯಸ್ಸಿನ, ಯಾವದೇ ರಾಷ್ಟ್ರೀಯತೆಯ ವ್ಯಕ್ತಿ ಅರ್ಜಿ ಸಲ್ಲಿಸಬಹುದು. ರಸ್ತೆ ಅಪಘಾತ ಗಾಯಾಳುಗಳಿಗೆ ನೆರವಾದ ಅಥವಾ ಜೀವವುಳಿಸಲು ಶ್ರಮಿಸಿದ ಘಟನೆಗೆ ಸಾಕ್ಷಿಯಾದವರೂ ಕೂಡ ಅ ವ್ಯಕ್ತಿಯನ್ನು ನಾಮಕರಣ ಮಾಡಬಹುದು. ಅರ್ಜಿ ಸಲ್ಲಿಸಲು ತಾ. 28 ರಂದು ಕೊನೆಯಾಗಿದ್ದು ಹೆಚ್ಚಿನ ಮಾಹಿತಿ ಮತ್ತು ಅರ್ಜಿಯನ್ನು ಎಲ್ಲಾ ಜಿಲ್ಲಾ, ತಾಲೂಕು, ಸ.ಆ. ಕೇಂದ್ರಗಳ ಆರೋಗ್ಯ ಮಿತ್ರರನ್ನು ಅಥವಾ ಜಿಲ್ಲಾ ಸಮನ್ವಯಾಧಿಕಾರಿ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಡಗು (ದೂರವಾಣಿ ಸಂಖ್ಯೆ 7259003403) ಅಥವಾ ಶಾಂತಮ್ಮ ದೂರವಾಣಿ ಸಂಖ್ಯೆ 9686110161 ವಿಷಯ ನಿರ್ವಾಹಕರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಂದ ಪಡೆಯಬಹುದು ಎಂದು ಜಿಲ್ಲಾ ಸಮನ್ವಯಾಧಿಕಾರಿ ಡಿ.ಸಿ. ತೇಜಸ್ ತಿಳಿಸಿದ್ದಾರೆ.