ನಾಪೆÉÇೀಕ್ಲು, ಡಿ. 23: ನಾಪೆÉÇೀಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂದಿರಾ ನಗರದಲ್ಲಿ ಸುಮಾರು ರೂ. 3.50 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಕಾಂಕ್ರೀಟ್ ರಸ್ತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎ. ಇಸ್ಮಾಯಿಲ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಇಂದಿರಾ ನಗರದಲ್ಲಿ ಸುಮಾರು 150 ಕ್ಕೂ ಹೆಚ್ಚು ಮನೆಗಳಿದ್ದು, ಇದು ಸರಕಾರದಿಂದ ನೀಡಿದ ನಿವೇಶನವಾಗಿದೆ. ಇಲ್ಲಿ ಅಡ್ಡ ರಸ್ತೆಗಳನ್ನು ಪೂರ್ಣ ಪ್ರಮಾಣದಲ್ಲಿ ನಿರ್ಮಿಸಿ ಅನುಕೂಲ ಕಲ್ಪಿಸಲಾಗುವದು ಎಂದರು. ಈ ವಿಭಾಗದಲ್ಲಿ ಮುಂದೆ ಬಾಕಿ ಇರುವ ಎಲ್ಲಾ ರಸ್ತೆ ಕಾಮಗಾರಿಯನ್ನು ಹಂತ ಹಂತವಾಗಿ ಮಾಡಲು ಕ್ರಮ ಕೈಗೊಳ್ಳಲಾಗುವದು ಎಂದು ಭರವಸೆ ನೀಡಿದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯ ಪಿ.ಎಂ. ರಷೀದ್, ಸದಸ್ಯೆ ವನಜಾಕ್ಷಿ, ಶಹನಾಜ್, ಗುತ್ತಿಗೆದಾರರಾದ ಟಿ.ಎ. ಉಂಬಾಯಿ, ಪಿ.ಎಂ. ಅಜೀಜ್, ಮಹಮ್ಮದ್ ಅಲಿ, ಅಶ್ರಫ್, ನಾಣಿ ಮತ್ತಿತರರು ಇದ್ದರು.