ಮಡಿಕೇರಿ, ಮೇ 7: ಮಡಿಕೇರಿ ವಿದ್ಯಾನಗರದ ಬಳಿ ನೂತನ ಮುಳಿಯ ಸ್ಫಟಿಕ ಟೌನ್ ಹೋಂಮ್ಸ್ ಬಡಾವಣೆ ಬರಲಿದೆ. ಇಲ್ಲಿ ಸುಮಾರು 33 ಲಕ್ಷದ ರೆಡಿ ತಯಾರಿತ ಮನೆಗಳು ಬರಲಿವೆ. ಎರಡು ಮಲಗುವ ಕೋಣೆ, ಅಡುಗೆ ಮನೆ ಹಾಗೂ ಸುಸಜ್ಜಿತ ವ್ಯವಸ್ಥೆಯುಳ್ಳ ಮಾದರಿ ಮನೆಯನ್ನು ಮೊನ್ನೆದಿನ ಶಾಂತೆಯಂಡ ಕಪ್ ಹಾಕಿ ಆವರಣದಲ್ಲಿ ಉದ್ಘಾಟಿಸಲಾಗಿದ್ದು, ವೀಕ್ಷಕರಿಗೆ ಇದು ಮತ್ತಷ್ಟು ದಿನ ಅಲ್ಲೇ ಲಭ್ಯವಿದೆ ಎಂದು ಮುಳಿಯ ಮ್ಯಾನೇಜಿಂಗ್ ಡೈರೆಕ್ಟರ್ ಕೇಶವ ಪ್ರಸಾದ್ ತಿಳಿಸಿದ್ದಾರೆ.