ಹೆಬ್ಬಾಲೆ, ಮೇ 4: ಇಲ್ಲಿಗೆ ಸಮೀಪದ ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಅಳುವಾರ ಮಂಗಳೂರು ವಿ.ವಿ.ಯ ಸ್ನಾತಕೋತ್ತರ ಕೇಂದ್ರದ ವಿಜ್ಞಾನ ಸಂಕೀರ್ಣದ ಆವರಣದಲ್ಲಿ ನಡೆದ ಸಾಂಸ್ಕøತಿಕ ಮತ್ತು ಕ್ರೀಡಾ ಉತ್ಸವ ಕಾರ್ಯಕ್ರಮವನ್ನು ಏಕಲವ್ಯ ಪ್ರಶಸ್ತಿ ಪುರಸ್ಕøತ ತೀತಮಾಡ ಅರ್ಜುನ್ ದೇವಯ್ಯ ಉದ್ಘಾಟಿಸಿದರು.

ಪ್ರತಿಯೊಬ್ಬರಿಗೂ ಒಂದು ಗುರಿ ಇರಬೇಕು. ಇಂದು ಸಮಾಜದಲ್ಲಿ ಗುರಿ ಇಲ್ಲದೆ ಸಾಯುವವರು ಹೆಚ್ಚಾಗಿದ್ದಾರೆ. ಇಂದಿನ ಯುವ ಶಕ್ತಿ ಸಾಧನೆಯತ್ತ ಸಾಗುವ ರಥಚಕ್ರಗಳಂತೆ ಮುನ್ನುಗ್ಗಬೇಕಾಗಿದೆ. ಹಿಂದಿನ ಹಾದಿಯನ್ನು ಮುಂದೆ ಕಾಣುವ ಒಳಿತಿಗೆ ಬಳಸಿಕೊಳ್ಳಬೇಕಿದೆ. ಮನುಷ್ಯ ಏನೆಲ್ಲಾ ವಿಚಾರ ಮಾಡುತ್ತಾನೋ ಅದನ್ನೆಲ್ಲಾ ಮಾಡಲು ಸಾಧ್ಯವಿಲ್ಲ. ಪದವಿಗಳು, ಸ್ಥಾನ-ಮಾನಗಳು ಬೇಕಾದಷ್ಟು ಸಿಗಬಹುದು, ಆದರೆ ಅರ್ಹ ಪದವಿಗಳು, ಸ್ಥಾನ-ಮಾನಗಳು ಸಿಗುವದು ಕಷ್ಟ ಎಂದು ಹೇಳಿದರು.

ಸ್ವಾತಂತ್ರ್ಯ ಬಂದು 70 ವರ್ಷಗಳಾಗುತ್ತಾ ಬಂದರೂ ನಾವು ಮಾಡಿರುವ ಸಾಧನೆ ಏನು ಎಂದು ಎಲ್ಲರೂ ಆಲೋಚಿಸಬೇಕಿದೆ. ತತ್ವ ಸಿದ್ಧಾಂತ ಮತ್ತು ವಿಚಾರಗಳು ನಮ್ಮ ಜೀವನವನ್ನು ಬದಲಾಯಿಸುವದಿಲ್ಲ. ನಾವೇ ನಮ್ಮ ಬದುಕನ್ನು ಸರಿಯಾದ ರೀತಿಯಲ್ಲಿ ರೂಪಿಸಿಕೊಳ್ಳಬೇಕಿದೆ. ಸಮಾಜವನ್ನು, ನಮ್ಮ ಸುತ್ತಮುತ್ತ ಇರುವವರನ್ನು ತಿದ್ದಲು ಸಾಧ್ಯವಿಲ್ಲ. ನಮ್ಮನ್ನು ನಾವು ತಿದ್ದಿಕೊಳ್ಳಬಹುದು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿ.ವಿ. ಕುಲಪತಿ ಕೆ. ಭೈರಪ್ಪ ಮಾತನಾಡಿ ಕೊಡಗಿನಲ್ಲಿ ಉತ್ತಮ ಕ್ರೀಡಾಪಟುಗಳಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಪಂಜಾಬಿನ ಪಟಿಯಾಲ ವಿಶ್ವವಿದ್ಯಾನಿಲಯ ಮೊದಲನೇ ಸ್ಥಾನದಲ್ಲಿದ್ದರೂ ಮಂಗಳೂರು ವಿಶ್ವವಿದ್ಯಾನಿಲಯ ಎರಡನೇ ಸ್ಥಾನದಲ್ಲಿದೆ. ಹಾಗೆಯೇ ಸಾಂಸ್ಕøತಿಕ ಕಾರ್ಯಕ್ರಮಗಳ ಪ್ರತಿಭೆ ಪ್ರದರ್ಶನದಲ್ಲಿ ನಮ್ಮ ದೇಶದ ಎಲ್ಲಾ ವಿಶ್ವವಿದ್ಯಾನಿಲಯಗಳನ್ನು ಮೀರಿ ಮೊದಲನೇ ಸ್ಥಾನದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವಿದೆ. ಇದಕ್ಕೆ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯ ಕೊಡುತ್ತಿರುವ ಪ್ರೋತ್ಸಾಹವೇ ಕಾರಣ. ಈ ನಿಟ್ಟಿನಲ್ಲಿ ಕ್ರೀಡೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಆರ್ಥಿಕ ಕೊರತೆಯಾಗದಂತೆ ಮುಂದಿನ ವರ್ಷಗಳಲ್ಲಿ ಮತ್ತಷ್ಟು ಅನುದಾನದ ನೆರವು ನೀಡುವದಾಗಿ ಹೇಳಿದರು.

ವಿದ್ಯಾರ್ಥಿಗಳ, ಪ್ರಾಧ್ಯಾಪಕರ, ಪ್ರತಿಭೆ ಪ್ರದರ್ಶನಕ್ಕೆ ಅವಕಾಶ ವಾಗುವಂತೆ ತ್ರೈಮಾಸಿಕ ಪತ್ರಿಕೆಯೊಂದನ್ನು ವಿಶ್ವವಿದ್ಯಾನಿಯ ದಿಂದ ಪ್ರಕಟಿಸುವ ಉದ್ದೇಶವಿದೆ. ಮುಂದಿನ ವ್ಯಾಸಂಗ ವರ್ಷದಿಂದ ಎಂ.ಬಿ.ಎ., ಎಂ.ಸಿ.ಎ., ಎಂ.ಜೆ.ಎ., ಮತ್ತು ರಸಾಯನಶಾಸ್ತ್ರ, ಕೋರ್ಸ್ ಗಳನ್ನು ಪ್ರಾರಂಭಿಸಲಾಗು ವದು ಅದರ ಜೊತೆಗೆ ವಿದೇಶೀ ವಿಜ್ಞಾನಿಗಳನ್ನು ಕರೆಸಿ ಉಪನ್ಯಾಸ ಕಾರ್ಯಕ್ರಮಗಳನ್ನು ಏಪರ್ಡಿಸಲಾಗು ವದು ಎಂದರು.

ವೇದಿಕೆಯಲ್ಲಿ ಕೇಂದ್ರದ ಪ್ರಬಾರ ನಿರ್ದೇಶಕಿ ಡಾ. ಸಬಿಹಾ ಭೂಮಿಗೌಡ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ನೌಷಾದ್, ಅಂಕಿತಾ, ದೀಕ್ಷಿತ್, ಜೋನಲ್ ಅನಿಶಾ ನಜರತ್ ಇದ್ದರು. ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಡಾ. ಚಂದ್ರಶೇಖರ ಗ, ಜೋಶಿ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು, ವಿದ್ಯಾರ್ಥಿ ಪುನೀತ್ ಕಾರ್ಯಕ್ರಮ ನಿರೂಪಿಸಿದರು.