ಮೂರ್ನಾಡು-ಹೊದ್ದೂರು, ಡಿ. 25: ಇಂದಿನ ಉದ್ಯೋಗ ನೇಮಕಾತಿ ಪರೀಕ್ಷೆಗಳ ವಿಧಾನಗಳು ಬದಲಾಗಿದ್ದು, ಊಹಿಸಲು ಸಾಧ್ಯವಾಗದಂತಹ ಪ್ರಶ್ನೆಗಳನ್ನು ಕೇಳಲಾಗುತ್ತಿದೆ.

ಸ್ಪರ್ಧಾತ್ಮಕ ಯುಗದಲ್ಲಿ ಪರೀಕ್ಷೆಗಳನ್ನು ಎದುರಿಸಬೇಕಾದರೆ ಬಹಳಷ್ಟು ತಯಾರಿ, ಉತ್ತಮ ಸಲಹೆಗಳೊಂದಿಗೆ ಮುನ್ನಡೆದರೆ ಮಾತ್ರ ಯಶಸ್ವಿಯಾಗಲು ಸಾಧ್ಯವಿದೆ ಎಂದು ಕಾವೇರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಅಕ್ರಂ ಹೇಳಿದರು.

ವೀರಾಜಪೇಟೆ ವಿದ್ಯಾರತ್ನ ಎಜುಕೇಶನ್ ಟ್ರಸ್ಟ್ ಆಶ್ರಯದಲ್ಲಿ ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ತರಬೇತಿ ಕಾರ್ಯಾಗಾರ ಪೆರಂಬಾಡಿಯ ಶಂಶುಲ್ ಮಹಿಳಾ ಪದವಿ ಕಾಲೇಜಿನಲ್ಲಿ ನಡೆಯಿತು.

ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದ ಆಕಾಶ್ ದುಬೆ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗುತ್ತಿದೆ. ಪ್ರತಿಯೊಂದು ಹಳ್ಳಿಗಳಲ್ಲೂ, ರಾಷ್ಟ್ರೀಕೃತ ಬ್ಯಾಂಕ್‍ಗಳ ಶಾಖೆಗಳನ್ನು ತೆರೆಯುತ್ತಿವೆ. ಸಾಮಾನ್ಯ ಜನರು ಬ್ಯಾಂಕಿಂಗ್ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮತ್ತೊಂದೆಡೆ ಬ್ಯಾಂಕಿಂಗ್ ನೇಮಕಾತಿ ಸಂಸ್ಥೆಗಳು ಪ್ರತಿವರ್ಷ ಸಾವಿರಾರು ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದ್ದು, ಅಭ್ಯರ್ಥಿಗಳು ಈ ನೇಮಕಾತಿಯಲ್ಲಿ ಪಾಲ್ಗೊಂಡು ತಮ್ಮ ಭವಿಷ್ಯವನ್ನು ರೂಪಿಸಿ ಕೊಳ್ಳಬೇಕೆಂದರು.

ಕಾರ್ಯಕ್ರಮದಲ್ಲಿ ಶಂಶುಲ್ ಉಲೇಮಾದ ಅಧ್ಯಕ್ಷ ಬಷೀರ್, ಪ್ರಾಂಶುಪಾಲ ಸತ್ಯನಾರಾಯಣ, ಆಡಳಿತಾಧಿಕಾರಿ ನಾರಾಯಣ, ಸಂಪನ್ಮೂಲ ಶಿಕ್ಷಕಿ ನೇಹಾ ಇನ್ನಿತರರು ಪಾಲ್ಗೊಂಡಿದ್ದರು. ಉಪನ್ಯಾಸಕಿ ಯರುಗಳಾದ ಆಶಾ, ಅಂಜನಾ, ಜಬೀನಾ, ಜೆಬó, ಸಮೀರಾ, ಕವಿತಾ ಹಾಜರಿದ್ದರು. ಜೆಬಾ ಸ್ವಾಗತಿಸಿ, ಭಾನುಮತಿ ವಂದಿಸಿದರು

- ಕೂಡಂಡ ರವಿ