ಗೋಣಿಕೊಪ್ಪಲು, ಜ. 25: ಕಸವನ್ನು ಎಲ್ಲೆಂದರಲ್ಲಿ ಬಿಸಾಡುವದು, ಹಾದಿ ಬದಿಯಲ್ಲಿ ಮಲ-ಮೂತ್ರ ವಿಸರ್ಜನೆ ಮಾಡುವದು, ಬಹುತೇಕ ನಗರ ಪ್ರದೇಶದಲ್ಲಿ ಮೂಗು ಮುಚ್ಚಿಕೊಂಡೇ ಓಡಾಡಬೇಕಾದ ಅನಿವಾರ್ಯತೆ, ಪ್ರಜ್ಞಾವಂತ ನಾಗರಿಕರೆನಿಸಿ ಕೊಂಡವರ ಸಣ್ಣ-ಸಣ್ಣ ಕೆಟ್ಟ ಕೆಲಸಗಳು ಕಣ್ಣಿಗೆ ಕಾಣಿಸಿಯೂ ಕಾಣದಂತೆ ನಿದ್ರಿಸುತ್ತಿರುವ ಸಮಾಜದ ನಡುವೆ 20 ವರ್ಷದ ಯುವಕ ನೋರ್ವ ‘ಕಸ ಮುಕ್ತ ಕೊಡಗು’ ಓಟ ಆರಂಭಿಸಿದ್ದಾನೆ. ಈ ಓಟ ಕೇವಲ ಒಂದು ದಿನಕ್ಕೆ ಸೀಮಿತವಲ್ಲ. ನಮ್ಮ ಜನತೆಯನ್ನು ಎಚ್ಚರಿಸುವ ನಿಟ್ಟಿನಲ್ಲಿ ನಿರಂತರ ‘ಓಟ’ ನನ್ನದು ಎಂದು ಪೂನಾದಲ್ಲಿ ತಾಂತ್ರಿಕ ಶಿಕ್ಷಣ ಹೊಂದುತ್ತಿರುವ ಗೋಣಿಕೊಪ್ಪಲಿನ ಮುಕ್ಕಾಟಿರ ಗಣಪತಿ-ಭವಾನಿ (ಗಿತಾರ್) ದಂಪತಿ ಪುತ್ರ ದೇವಯ್ಯ ದೃಢ ವಿಶ್ವಾಸದಿಂದ ಹೇಳುತ್ತಾನೆ.

ಚುಮು ಚುಮು ಚಳಿಯ ನಡುವೆ 6 ಗಂಟೆ ಸುಮಾರಿಗೆ ವೀರಾಜಪೇಟೆಯ ನಾಯಡ ವಾಸು ನಂಜಪ್ಪ ಹಾಗೂ ಗೋಣಿಕೊಪ್ಪಲು ಪೆÇಲೀಸ್ ವೃತ್ತ ನಿರೀಕ್ಷಕ ಪಿ.ಕೆ.ರಾಜು ಅವರು ಜಂಟಿಯಾಗಿ ‘ಕಸ ಮುಕ್ತ ಕೊಡಗು’ ಯುವಕನ ಓಟದ ಅಭಿಯಾನಕ್ಕೆ ಚಾಲನೆ ನೀಡಿದರು.

ಕೊಡಗಿನ ಶ್ರೀಮಂತ ಪರಿಸರ ಉಳಿಯಬೇಕಾದರೆ ಏನನ್ನಾದರೂ ಮಾಡಲೇ ಬೇಕಾಗಿದೆ. ಇಲ್ಲಿನ ನಿರಂತರ ಮರಹನನ, ಫ್ಲಾಸ್ಟಿಕ್ ತ್ಯಾಜ್ಯದೊಂದಿಗೆ ಇದೀಗ ಕೊಡಗು ಪ್ರವಾಸಿ ತಾಣವಾಗಿ ಅಭಿವೃದ್ಧಿ ಹೊಂದುತ್ತಿದ್ದು ಇಲ್ಲಿಗೆ ಬರುವ ಪ್ರವಾಸಿಗರಲ್ಲಿಯೂ ಜಾಗೃತಿ ಮನೋಭಾವ ಮೂಡಿಸುವ ಅಗತ್ಯವಿದೆ. ಆದ್ದರಿಂದಾಗಿ ಗೋಣಿಕೊಪ್ಪಲು-ಮೈಸೂರು ನಡುವೆ ಸುಮಾರು 96 ಕಿ.ಮೀ.ರಸ್ತೆ ಓಟದ ಮೂಲಕ ಅರಿವು ಮೂಡಿಸಲು ಮುಂದಾಗಿದ್ದೇನೆ ಎಂದು ಮುಕ್ಕಾಟಿರ ದೇವಯ್ಯ ತಿಳಿಸಿದರು. ಯುವಕ ದೇವಯ್ಯಗೆ ಸ್ಪೂರ್ತಿ ತುಂಬಲು ಕಾಲ್ಸ್ ಶಾಲೆಯ ಸುಮಾರು 25 ವಿದ್ಯಾರ್ಥಿಗಳು, ಕಾಪ್ಸ್ ಶಾಲೆಯ ಸುಮಾರು 50 ವಿದ್ಯಾರ್ಥಿಗಳು ಗೋಣಿಕೊಪ್ಪಲು ಎಪಿಎಂಸಿ ಆವರಣದವರೆಗೂ ಓಡಿ ಪೆÇ್ರೀತ್ಸಾಹ ನೀಡಿದರು.

ಮೂರ್ನಾಡುವಿನ ಮಾಜಿ ಲಯನ್ಸ್ ಕ್ಲಬ್ ಅಧ್ಯಕ್ಷ, ಹಾಲಿ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಡುವಂಡ ಅರುಣ್ ಅಪ್ಪಣ್ಣ, ಗೋ-ಗ್ರೀನ್ ಮೂರ್ನಾಡುವಿನ ಗೌತಮ್, ಕರುಂಬಯ್ಯ ಅವರೂ ಸೈಕಲ್ ಮೂಲಕ ಯುವಕ ದೇವಯ್ಯನೊಂದಿಗೆ ಮೈಸೂರುವರೆಗೆ ಸಾಥ್ ನೀಡುವದಾಗಿ ಇದೇ ಸಂದರ್ಭ ಅಭಿಪ್ರಾಯಪಟ್ಟರು.

ಕ್ಲೀನ್ ಕೊಡಗು ಮತ್ತು ಕೂರ್ಗ್ ವೆಲ್‍ನೆಸ್ ಪ್ರತಿಷ್ಠಾನ ಇಂದಿನ ರಸ್ತೆ ಓಟವನ್ನು ಆಯೋಜಿಸಿದ್ದು ನಿಕ್ಕಿ ಪೆÇನ್ನಪ್ಪ, ಪ್ರಶಾಂತ್, ಗೋಣಿಕೊಪ್ಪಲಿನ ಚರ್ಮರೋಗ ತಜ್ಞ ಡಾ. ಅಳಮೇಂಗಡ ಬೆಳ್ಳಿಯಪ್ಪ ಅವರ ಪತ್ನಿ ರೋಶಿತಾ ಮುಂತಾದವರ ದೊಡ್ಡ ತಂಡವೇ ಕೊಡಗನ್ನು ಕಸ ಮುಕ್ತ ಮಾಡುವ ನಿಟ್ಟಿನಲ್ಲಿ ಕೈಜೋಡಿಸಿದೆ.

ಕೊಡಗು ವನ್ಯ ಜೀವಿ ಸಂಘದ ಅಧ್ಯಕ್ಷ ಕರ್ನಲ್ ಮುತ್ತಣ್ಣ, ಲೋಪಾಮುದ್ರ ಆಸ್ಪತ್ರೆ ಮಾಲೀಕ ಡಾ. ಅಮೃತ್ ನಾಣಯ್ಯ, ದಂತ ವೈದ್ಯರಾದ ಡಾ. ಆಶಿಕ್ ಚಂಗಪ್ಪ, ವೆಟರನ್ ಓಟಗಾರ ಭೀಮಯ್ಯ, ಪಾಲಿಬೆಟ್ಟದ ಬಿ.ವಿ. ಮಂದಣ್ಣ, ಗೋಣಿಕೊಪ್ಪಲು ಪ್ರೌಢಶಾಲಾ ಅಧ್ಯಕ್ಷ ಪಟ್ರಪಂಡ ಚಿಣ್ಣಪ್ಪ, ಆಪ್‍ಟೆಕ್ ಮಾಲೀಕ ಕೆ.ಸಿ. ನಂಜಪ್ಪ, ಕೆ. ಚಿಣ್ಣಪ್ಪ, ಕಾಪ್ಸ್ ಶಿಕ್ಷಕರಾದ ಟೀನಾ ಮಾಚಯ್ಯ, ಕೆ.ಎನ್. ಮಿಲನ್, ಕಾಲ್ಸ್‍ನ ದೀಪಕ್ ಹಾಗೂ ಗೋಣಿಕೊಪ್ಪಲಿನ ನಿಕ್ಕಿ ಮುಂತಾದವರು ಯುವಕ ದೇವಯ್ಯ ಪ್ರಯತ್ನ ಸಾರ್ಥಕತೆಗಾಗಿ ಹಸ್ತಲಾಘವ ಮಾಡಿ ಶುಭಹಾರೈಸಿದರು.

- ಟಿ.ಎಲ್. ಶ್ರೀನಿವಾಸ್