ಮಡಿಕೇರಿ, ಜೂ. 12: ಮಡಿಕೇರಿ - ಮೈಸೂರು ಹೆದ್ದಾರಿಯ ಸಿಂಕೋನ ಬಳಿ ಲಾರಿ (ಕೆಎ 19 ಎಬಿ 1373) ಹಾಗೂ ಕಾರು (ಕೆಎ 03, ಎಂಡಬ್ಲ್ಯು 6488) ಮುಖಾಮುಖಿ ಡಿಕ್ಕಿಯಾಗಿ ಕಾರು ಸಂಪೂರ್ಣ ಜಖಂಗೊಂಡು ಕಾರಿನಲ್ಲಿದ್ದ ಐವರಿಗೆ ಸಣ್ಣಪುಟ್ಟ ಗಾಯವಾಗಿದೆ.

ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಬಿಹಾರ ಮೂಲದವರಾದ ಮಡಿಕೇರಿಯಲ್ಲಿ ಪ್ರವಾಸವನ್ನು ಮುಗಿಸಿ ಹಿಂತಿರುಗುವಾಗ ಸಿಂಕೋನ ಬಳಿ ಘಟನೆ ನಡೆದಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ದೀಪಕ್‍ಕುಮಾರ್, ಸ್ವಾಗತ, ಗಿರಿ, ದಿವ್ಯಕುಮಾರಿ, ನಪೂರ್ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.