ನಾಪೆÇೀಕ್ಲು, ಜು. 12: ರಾಜ್ಯ ಸಚಿವ ಕೆ.ಜೆ. ಜಾರ್ಜ್ ಮತ್ತು ಪೆÇಲೀಸ್ ಹಿರಿಯ ಅಧಿಕಾರಿಗಳ ಕಿರುಕುಳದಿಂದ ಆತ್ಮಹತ್ಯೆ ಮಾಡಿ ಕೊಂಡ ಡಿವೈಎಸ್‍ಪಿ ಮಾದಪಂಡ ಕೆ.ಗಣಪತಿ ಪ್ರಕರಣ ವನ್ನು ಸಿಬಿಐಗೆ ಒಪ್ಪಿಸುವಂತೆ ನಾಪೆÇೀಕ್ಲು ಕೊಡವ ಸಮಾಜ ಆಗ್ರಹಿಸಿದೆ. ಈ ಬಗ್ಗೆ ಮಾತನಾಡಿದ ಕೊಡವ ಸಮಾಜದ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ, ಮಾದಪಂಡ ಗಣಪತಿ ಸೇರಿದಂತೆ ಜಿಲ್ಲೆಯಲ್ಲಿ ನಿಷ್ಠಾವಂತ ಅಧಿಕಾರಿ ಗಳಿಗೆ ನೆಲೆಯಿಲ್ಲದಂತಾಗಿದೆ. ಗಣಪತಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮಾಧ್ಯಮದ ಮುಂದೆ ತನಗೆ ಕಿರುಕುಳ ನೀಡುತ್ತಿರುವ ವ್ಯಕ್ತಿಗಳ ಹೆಸರು ಹೇಳಿದ್ದಾರೆ. ನಂತರ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಆದರೂ ಸರಕಾರ ನೈಜ ಆರೋಪಿಗಳನ್ನು ಮರೆಮಾಚಿ ಪ್ರಕರಣವನ್ನು ಬೇರೆಡೆಗೆ ತಿರುಚುತ್ತಿರುವದು ಕಂಡು ಬರುತ್ತಿದೆ. ಆದುದರಿಂದ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವದರ ಮೂಲಕ ನೈಜ ಆರೋಪಿಗಳಿಗೆ ಕಾನೂನು ಶಿಕ್ಷೆ ಒದಗಿಸಿಕೊಡಬೇಕೆಂದು ಅವರು ಒತ್ತಾಯಿಸಿದರು. ಕಳೆದೆರಡು ವರ್ಷಗಳಲ್ಲಿ ರಾಜ್ಯದಲ್ಲಿ ನಿಷ್ಠಾವಂತ ಅಧಿಕಾರಿಗಳು ರಾಜಕೀಯ ಒತ್ತಡದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸರಕಾರಿ ಅಧಿಕಾರಿಗಳಿಗೇ ರಕ್ಷಣೆ ಇಲ್ಲ ಎಂದಾದಲ್ಲಿ ಸಾರ್ವಜನಿಕರ ಪಾಡೇನು? ಎಂದು ಪ್ರಶ್ನಿಸಿದ ಅವರು ಸರಕಾರ ವೈಫಲ್ಯವಾಗಿದ್ದು, ಇದನ್ನು ನಾಪೆÇೀಕ್ಲು ಕೊಡವ ಸಮಾಜ ಖಂಡಿಸುತ್ತದೆ ಎಂದು ಹೇಳಿದ್ದಾರೆ.

ಕೊಡವ ಸಮಾಜದ ಪದಾಧಿಕಾರಿಗಳಾದ ಎಂ.ಎ. ಅಯ್ಯಪ್ಪ, ಎ.ಎಸ್. ಅಯ್ಯಪ್ಪ, ಸಿ.ಎಸ್. ಚಿಣ್ಣಪ್ಪ, ಬಿ.ಬೆಲ್ಲು ಬೆಳ್ಯಪ್ಪ, ಕೆ.ಸಿ. ಪೂವಯ್ಯ, ಮಾದಪ್ಪ ಮತ್ತಿತರರು ಇದ್ದರು.