ಮಡಿಕೇರಿ, ಜೂ. 12: ಸೋಮವಾರಪೇಟೆ-ಮಡಿಕೇರಿ ರಸ್ತೆಯ ಕಾಜೂರು ಬಸ್ ನಿಲ್ದಾಣದಲ್ಲಿ ಗಿಡವೊಂದು ಸದ್ದಿಲ್ಲದೆ ತನ್ನಿಷ್ಟಕ್ಕೆ ತಾನೇ ಬೆಳೆದು ಮರವಾಗುತ್ತಿದೆ... ಇದರಲ್ಲೇನೂ ಮಹಾ ಅಂತಿರ? ಗಿಡ ಬೆಳೆದು ಮರವಾಗುತ್ತಿರುವದು ಬಸ್ ನಿಲ್ದಾಣದ ಪಕ್ಕದಲ್ಲಿ ಅಲ.್ಲ ಅದೂ ಬೆಳೆದಿರುವದು ನಿಲ್ದಾಣದ ಹೆಂಚಿನ ಮೇಲೆ!!! ಅದೂ ಈಗಾಗಲೇ ಮೂರರಿಂದ ನಾಲ್ಕು ಆಡಿ ಎತ್ತರಕ್ಕೆ ಬೆಳೆದಿದೆ. ಇದು ಹೆಸರಿಗೆ ಮಾತ್ರ ಬಸ್ ನಿಲ್ದಾಣ. ಮೇಲ್ಛಾವಣಿ ಉದುರಿ ಹೋಗುತ್ತಿದೆ. ಇದರ ಒಳ ಪ್ರವೇಶಿಸಿಸಲು ಶಿರಸ್ತ್ರಾಣ ಇರುವದು ಅವಶ್ಯಕ. 4-5 ಕೀ.ಮಿ. ನಡೆದುಕೊಂಡು ಬರುವ ಪ್ರಯಾಣಿಕರಿಗೆ ಬಿಸಿಲು, ಮಳೆಗೆ ಆಸರೆ ಆಗಬೇಕಿದ್ದ ನಿಲ್ದಾಣ ತನ್ನ ತ್ರಾಣ ಕಳೆದುಕೊಂಡಿದೆ .ಈ ನಿಲ್ದಾಣವು ರಾಜಕಾರಣಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿರುವದನ್ನು ಅರಿತ ಗಿಡ ತನ್ನಷ್ಟಕ್ಕೆ ತಾನು ಬೆಳೆದು ಮರವಾಗಿ ತಂಪು ಗಾಳಿ -ನೆರಳು ನೀಡಲು ತಯಾರಾಗುತ್ತಿದೆಯೆ???

- ಜಿ.ಕೆ. ಅವಿಲಾಶ್, ಕಾಜೂರು.