ಕುಶಾಲನಗರ, ಜೂ. 11: ಕುಶಾಲನಗರ ರಥಬೀದಿಯಲ್ಲಿನ ಶ್ರೀ ಚೌಡೇಶ್ವರಿ ಅಮ್ಮನ ವಾರ್ಷಿಕ ಜಯಂತಿ ಕಾರ್ಯಕ್ರಮ ತಾ. 18 ರಂದು ನಡೆಯಲಿದೆ.

ದೇವಾಂಗ ಸಂಘದ ಆಶ್ರಯದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಶನಿವಾರ ಬೆಳಿಗ್ಗೆ ಗಣಪತಿ ಹೋಮ, ಧ್ವಜಾರೋಹಣ, ಕಾವೇರಿ ನದಿಯಿಂದ ಕಲಶ ತರುವ ಮೂಲಕ ಮುಖ್ಯ ಬೀದಿಯಲ್ಲಿ ಮೆರವಣಿಗೆ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ.

ಸಂಜೆ 6 ಗಂಟೆಗೆ ಮಂಗಳವಾದ್ಯದೊಂದಿಗೆ ದೀಪಾಲಂಕೃತ ಮಂಟಪದಲ್ಲಿ ದೇವಿಯ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಲಿದೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.