ಮಡಿಕೇರಿ, ಜೂ. 15: ಮೀನುಗಾರಿಕೆ ಇಲಾಖೆಯಿಂದ 2016-17 ನೇ ಸಾಲಿನಲ್ಲಿ ವಿವಿಧ ತಳಿಗಳ 48 ಲಕ್ಷ ಮೀನುಮರಿಗಳನ್ನು ಜಿಲ್ಲೆಯ ರೈತರಿಗೆ ವಿತರಿಸುವ ಗುರಿ ಹೊಂದಿದೆ. ಪ್ರತಿ ವರ್ಷದಂತೆ 2016-17 ಸಾಲಿನಲ್ಲಿ ಮೀನುಗಾರಿಕೆ ಇಲಾಖೆಯಿಂದ ಸರ್ಕಾರ ನಿಗಧಿಪಡಿಸಿದ ದರಗಳಲ್ಲಿ ಬಿತ್ತನೆಗೆ ಯೋಗ್ಯವಾದ, ಮೀನುಮರಿಗಳನ್ನು ಲಭ್ಯತೆಗನುಗುಣವಾಗಿ ವಿತರಿಸಲಾಗುವದು.

ಆಸಕ್ತ ಕೃಷಿಕರು ತಮ್ಮ ಬೇಡಿಕೆಯನ್ನು ಸಂಬಂಧÀಪಟ್ಟ ತಾಲೂಕಿನ ಮೀನುಗಾರಿಕಾ ಸಹಾಯಕ ನಿರ್ದೇಶಕರ ಕಚೇರಿಗಳಲ್ಲಿ ನೋಂದಾಯಿಸಿ ಕೊಳ್ಳಬೇಕಾಗಿ ಕೋರಿದೆ. ಮೀನು ಮಾರಾಟ ಮಾಡುವವರು ದ್ವಿಚಕ್ರ, ತ್ರಿಚಕ್ರವಾಹನ ಮತ್ತು ನಾಲ್ಕು ಚಕ್ರವಾಹನ ಖರೀದಿಗಾಗಿ ಮತ್ಸ್ಯವಾಹಿನಿ ಯೋಜನೆಯಡಿ ಸಹಾಯಧನ ನೀಡಲಾಗುವದು. ಪರಿಶಿಷ್ಟ ಜಾತಿ-ಪಂಗಡ ಕ್ಕೆ ಸೇರಿದ ಫಲಾನುಭವಿಗಳಿಗೆ ಅರ್ಧ ಏಕರೆ ಮೀನು ಕೃಷಿ ಕೊಳ ನಿರ್ಮಾಣ ಮಾಡಲು ರೂ. 90 ಸಾವಿರ ಸಹಾಯಧನ ನೀಡಲಾಗುವದು.

ಮೀನು ಕೃಷಿಕರಿಗೆ ಅಗತ್ಯವಿರುವ ಸಲಕರಣೆ ಕಿಟ್ಟುಗಳು ಮತ್ತು ಫೈಬರ್ ಗ್ಲಾಸ್ ಹರಿಗೋಲುಗಳನ್ನು 2016-17 ನೇ ಸಾಲಿಗೆ ಶೇ. 100 ಸಹಾಯಧನದಲ್ಲಿ ವಿತರಿಸಲಾಗುವದು. ಇಲಾಖೆಯಿಂದ ಖರೀದಿಸಿದ ಮೀನುಮರಿಗಳಿಗೆ ಶೇ. 50 ಸಹಾಯಧನ ನೀಡುವ ಯೋಜನೆಯನ್ನು ಈ ಸಾಲಿಗೂ ಮುಂದುವರೆಸಲಾಗಿದೆ.

ಅಲ್ಲದೇ ಇಲಾಖೆಯಿಂದ ಜಿಲ್ಲಾ ಪಂಚಾಯಿತಿ, ರಾಜ್ಯವಲಯ ಯೋಜನೆಯಡಿ ಮೀನುಗಾರಿಕೆ ಬಗ್ಗೆ ಪ್ರಸಕ್ತ ಸಾಲಿಗೂ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವದು. ಮೀನು ಕೃಷಿಕರು ಈ ಎಲ್ಲಾ ಯೋಜನೆಗಳ ಉಪಯೋಗ ಪಡೆದುಕೊಳ್ಳಬೇಕಾಗಿ ವಿ. ಸಹಾಯಧನ ಬಯಸುವ ಮೀನು ಕೃಷಿಕರು ಅರ್ಜಿಗಳನ್ನು ಮೀನುಗಾರಿಕೆ ಸಹಾಯಕ ನಿರ್ದೇಶಕರು, ಮಡಿಕೇರಿ, ದೂ.ಸಂ. (08272) 222801, ಸೋಮವಾರಪೇಟೆ, (08276) 281051, ಮೀನುಗಾರಿಕೆ ಸಹಾಯಕ ನಿರ್ದೇಶಕರು ಪೊನ್ನಂಪೇಟೆ ದೂ.ಸಂ (08274) 261477, ಮೀನುಗಾರಿಕೆ ಸಹಾಯಕ ನಿರ್ದೇಶಕರು, ಹಾರಂಗಿ 9480701088 ಕಚೇರಿಗಳಿಂದ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ತಾ. 30 ರೊಳಗೆ ಸಲ್ಲಿಸುವಂತೆ ಮೀನುಗಾರಿಕೆ ಸಹಾಯಕ ನಿರ್ದೇಶಕ ಕೆ.ಟಿ. ದರ್ಶನ್ ಕೋರಿದ್ದಾರೆ.