ನಾಪೆÇೀಕ್ಲು, ಜು. 12: ಬೆಳಿಗ್ಗೆ ವೀರಾಜಪೇಟೆಯಿಂದ ಹೊರಟು ಕುಂಜಿಲ-ನೆಲಜಿ ಗ್ರಾಮದ ಮೂಲಕ 8.30 ಗಂಟೆಗೆ ನಾಪೆÇೀಕ್ಲುವಿನ ಮೂಲಕ ಮಡಿಕೇರಿಗೆ ತೆರಳುತ್ತಿದ್ದ ಖಾಸಗಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಿರುವ ಹಿನ್ನೆಲೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಸಮಸ್ಯೆಯಾಗಿದ್ದು, ಕೂಡಲೇ ಬಸ್ ಸಂಚಾರವನ್ನು ಆರಂಭಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಈ ರಸ್ತೆಯಲ್ಲಿ ಬೆಳಿಗ್ಗೆ 8 ಗಂಟೆ ಸಮಯಕ್ಕೆ ಮಾತ್ರ ಬಸ್ ಇದ್ದು, ಈ ಬಸ್ ಸಂಜೆ 6 ಗಂಟೆಗೆ ಇದೇ ರಸ್ತೆಯಲ್ಲಿ ವಾಪಸ್ಸಾಗುತಿತ್ತು.

ಕುಂಜಿಲ ಮತ್ತು ನೆಲಜಿ ಗ್ರಾಮಗಳ ಶಾಲಾ-ಕಾಲೇಜು ವಿದ್ಯಾರ್ಥಿಗಳು, ನೌಕರರು ಮತ್ತು ಕುಂಜಿಲ ಗ್ರಾಮದವರು ಕಕ್ಕಬೆವರೆಗೆ ಕಾಲ್ನಡಿಗೆಯಲ್ಲಿ ಸಾಗಿ ಬಸ್‍ನಲ್ಲಿ ಸಂಚರಿಸಬೇಕು. ಇದು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ಹೆಂಗಸರಿಗೆ, ವೃದ್ಧರಿಗೆ ತಾಸದ್ರಾಯಕ ಕೆಲಸವಾಗಿದೆ.

ಇನ್ನಾದರೂ ಈ ಭಾಗದ ಜನರ ಕಷ್ಟಕ್ಕೆ ಬಸ್ ಮಾಲೀಕರು ಸ್ಪಂದಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.

ಸಾರಿಗೆ ಬಸ್ ನೀಡಿ: ಖಾಸಗಿ ಬಸ್ ಸಂಚಾರ ಸ್ಥಗಿತಗೊಳಿಸಿರುವ ಹಿನ್ನೆಲೆ ಜನರ ಸಂಚಾರಕ್ಕೆ ರಾಜ್ಯ ಸಾರಿಗೆ ಬಸ್ ಸಂಚಾರ ಆರಂಭಿಸುವಂತೆಯೂ ಗ್ರಾಮಸ್ಥರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಮಳೆಗಾಲವಾಗಿರುವ ಕಾರಣ ಎಲ್ಲರಿಗೂ ಸಮಸ್ಯೆಯಾಗಿದೆ. ಖಾಸಗಿ ಬಸ್ ಸಂಚಾರ ಆರಂಭಿಸದಿದ್ದರೆ, ರಾಜ್ಯ ಸಾರಿಗೆ ಸಂಸ್ಥೆ ಬಸ್ ಈ ಮಾರ್ಗವಾಗಿ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಕೋರಿದ್ದಾರೆ.