ಮಡಿಕೇರಿ, ಜೂ. 11: ಪ್ರಸಕ್ತ (2016-17) ಸಾಲಿನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ಮಡಿಕೇರಿ, ಕುಶಾಲನಗರ, ವೀರಾಜಪೇಟೆ, ಸೋಮವಾರಪೇಟೆ, ಗೋಣಿಕೊಪ್ಪ ಬಸ್ ನಿಲ್ದಾಣಗಳಲ್ಲಿ ಆಯಾ ಶಾಲಾ-ಕಾಲೇಜುಗಳ ಮುಖ್ಯಸ್ಥರುಗಳ ಮೂಲಕ ಬಸ್ ಪಾಸ್ ಅರ್ಜಿ ವಿತರಿಸುವ ವ್ಯವಸ್ಥೆ ಮಾಡಿದೆ.

ವಿದ್ಯಾರ್ಥಿಗಳು ಸಂಬಂಧಿಸಿದ ಪಾಸಿನ ದರಗಳನ್ನು ಶಾಲಾ ಮುಖ್ಯಸ್ಥರಲ್ಲಿ ನೀಡಿ ಮುಖ್ಯಸ್ಥರು ಸಂಚಾರಿ ನಿಯಂತ್ರಕರಿಂದ ಪಾಸ್ಸನ್ನು ತೆಗೆದುಕೊಂಡು ತಮ್ಮ ಶಾಲಾ ವಿದ್ಯಾರ್ಥಿಗಳಿಗೆ ನೀಡುವ ವ್ಯವಸ್ಥೆ ಮಾಡಲಾಗಿದೆ, ತಾ. 10 ರಿಂದ ತಿಳಿಸಿದ ಸಂಚಾರಿ ಕೇಂದ್ರಗಳಲ್ಲಿ ಪಾಸಿಗೆ ಸಂಬಂಧಿಸಿದ ಅರ್ಜಿಗಳನ್ನು ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ.

ವಿವರ ಇಂತಿದೆ: 1 ರಿಂದ 7 ನೇ ತರಗತಿಯವರೆಗೆ - ಉಚಿತ (ಸಂಸ್ಕರಣಾ ಶುಲ್ಕ ಮತ್ತು ಅಪಘಾತ ಪರಿಹಾರ ಧನ) ರೂ. 130), ಹೈಸ್ಕೂಲ್ ಹುಡುಗರಿಗೆ - 10 ತಿಂಗಳಿಗೆ ರೂ. 730 (ಸಂಸ್ಕರಣ ಶುಲ್ಕ ಮತ್ತು ಅಪಘಾತ ಪರಿಹಾರ ಧನ ರೂ. 130 ಸೇರಿ), ಹೈಸ್ಕೂಲ್ ಹುಡುಗಿಯರಿಗೆ 10 ತಿಂಗಳಿಗೆ ರೂ. 530, ಕಾಲೇಜು/ಡಿಪ್ಲೋಮ- 10 ತಿಂಗಳಿಗೆ ರೂ. 1,030, ಐ.ಟಿ.ಐ. 12 ತಿಂಗಳಿಗೆ ರೂ. 1,280 (ಸಂಸ್ಕರಣ ಶುಲ್ಕ ಮತ್ತು ಅಪಘಾತ ಪರಿಹಾರ ಧನ ರೂ. 140 ಸೇರಿ), ವೃತ್ತಿಪರ ಕೋರ್ಸ್-10 ತಿಂಗಳಿಗೆ ರೂ. 1,530 (ಸಂಸ್ಕರಣ ಶುಲ್ಕ ಮತ್ತು ಅಪಘಾತ ಪರಿಹಾರ ಧನ ರೂ. 140 ಸೇರಿ), ಬಸ್ ಪಾಸ್‍ಗಳನ್ನು ಪ್ರಥಮ ಹಂತದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ನೀಡಲಾಗುವದು.

ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ನಂತರದ ಕಾಲೇಜುಗಳಿಗೆ ಬಸ್ ಪಾಸ್ ವಿತರಿಸುವ ದಿನಾಂಕವನ್ನು ಸದ್ಯದಲ್ಲಿಯೇ ತಿಳಿಸಲಾಗುವದು ಎಂದು ಕ.ರಾ.ರ.ಸಾ.ಸಂ. ಪುತ್ತೂರು ವಿಭಾಗ ಮಡಿಕೇರಿ ಘಟಕ ವ್ಯವಸ್ಥಾಪಕಿ ಗೀತಾ ಕೋರಿದ್ದಾರೆ.