ಗೋಣಿಕೊಪ್ಪಲು, ನ. 16: ವೆಸ್ಟ್ ನೆಮ್ಮಲೆಯ ಸರ್ಕಾರಿ ಶಾಲಾ ಅತಿಥಿ ಶಿಕ್ಷಕಿ ಪ್ರಮಿಳಾ ಅವರ ಹತ್ಯೆಯನ್ನು ಎಸ್‍ಎನ್‍ಡಿಪಿ ಜಿಲ್ಲಾಧ್ಯಕ್ಷ ವಾಸು ಖಂಡಿಸಿದ್ದಾರೆ. ಕೊಡಗು ಗ್ರಾಮೀಣ ಭಾಗದಲ್ಲಿ ಇತ್ತೀಚೆಗಿನ ವರ್ಷದಲ್ಲಿ ನಡೆದ ಹೇಯ ಕೃತ್ಯ ಇದಾಗಿದೆ. ಪ್ರಕರಣದ ಆರೋಪಿ ಸ್ಥಳೀಯ ವ್ಯಕ್ತಿಯೇ ಆಗಿರುವದು ನಿಜಕ್ಕೂ ಅಕ್ಷಮ್ಯ. ಕೊಡಗು ಮಹಿಳೆಯರಿಗೆ ಸುರಕ್ಷಿತ ಪ್ರದೇಶ ಎಂದು ಖ್ಯಾತಿ ಹೊಂದಿದ್ದು. ಇದರಿಂದಾಗಿ ನಿಜಕ್ಕೂ ಮಹಿಳೆಯರು ಭಯಪಡುವಂತಾಗಿದೆ. ಆರೋಪಿಗೆ ಗಲ್ಲು ಶಿಕ್ಷೆ ಸಿಗುವ ನಿಟ್ಟಿನಲ್ಲಿ ಹೋರಾಟ ಮಾಡಬೇಕಾಗಿದೆ. ಪ್ರಮಿಳಾ ಅವರ ಇಬ್ಬರು ಪುಟ್ಟ ಮಕ್ಕಳ ಭವಿಷ್ಯದ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡಬೇಕಾಗಿದೆ ಎಂದು ಅವರು ಒತ್ತಾಯಿಸಿದ್ದಾರೆ.

ನಿನ್ನೆ ಶವಾಗಾರ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಗೋಣಿಕೊಪ್ಪಲು ಗ್ರಾ.ಪಂ. ಮಹಿಳಾ ಸದಸ್ಯರು, ಜಿಲ್ಲಾ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಪರಶುರಾಮ್, ವಿಭಾಗೀಯ ಸಂಚಾಲಕ ಕೃಷ್ಣಪ್ಪ ಪಾಲ್ಗೊಂಡಿದ್ದರು. ಗೋಣಿಕೊಪ್ಪಲು ಗ್ರಾ.ಪಂ. ಅಧ್ಯಕ್ಷೆ ಸೆಲ್ವಿ, ಕಾರ್ಯದರ್ಶಿ ರಾಜೇಶ್ ಮುಂತಾದವರು ಇದ್ದರು.

ಹತ್ಯೆ ಆರೋಪಿ ತೋಟ ಕಾರ್ಮಿಕ

ಘಟನೆ ನಡೆದ ಸ್ಥಳ ಶ್ರೀಮಂಗಲ ಪೆÇಲೀಸ್ ಠಾಣಾ ವ್ಯಾಪ್ತಿಯಿಂದ ಸುಮಾರು 6 ಕಿ.ಮೀ. ದೂರವಿದೆ. ಆರೋಪಿ ಹರೀಶ್ ವೆಸ್ಟ್ ನೆಮ್ಮಲೆಯ ಚಟ್ಟಂಗಡ ಸಜನ್ ಸೋಮಣ್ಣ ಅವರ ಲೈನ್ ಮನೆಯಲ್ಲಿ ವಾಸವಿದ್ದು, ತೋಟ ಕಾರ್ಮಿಕನಾಗಿ ಕಳೆದ ಒಂದು ವರ್ಷಕ್ಕೂ ಮೇಲ್ಪಟ್ಟು ಕೆಲಸ ನಿರ್ವಹಿಸುತ್ತಿದ್ದಾನೆ ಎನ್ನಲಾಗಿದೆ. ಹತ್ಯೆ ಘಟನೆ ಬೆಳಕಿಗೆ ಬರುತ್ತಿದ್ದಂತೆ ಕೃತ್ಯದ ಹಿಂದೆ ಮೂವರು, ನಾಲ್ವರು ಇರಬಹುದು. ಅಸ್ಸಾಂ ಅಥವಾ ಬಾಂಗ್ಲಾದೇಶಿಯ ಕಾರ್ಮಿಕ ವರ್ಗದ ಕೈವಾಡ ಎಂದೆಲ್ಲಾ ಗುಲ್ಲೆದ್ದಿತ್ತು. ಆದರೆ, ಆರೋಪಿಯ ಯಡವಟ್ಟು, ಮೊಬೈಲ್ ಬಿಟ್ಟು ಓಡಿದ್ದು ಶೀಘ್ರ ಬಂಧನಕ್ಕೆ ಕಾರಣವಾಗಿದೆ.

ಪ್ರಮಿಳಾ ತಂದೆ ಕುಮಾರ್‍ಗೆ ಮೂರು ನಾಲ್ಕು ಎಕರೆ ಕಾಫಿ ತೋಟವಿದ್ದು ಸುಸ್ಥಿಯಲ್ಲಿ ಇದ್ದರು ಎನ್ನಲಾಗಿದೆ. ಪ್ರಮಿಳಾ ಹಿರಿಯ ಪುತ್ರಿ ಪೂಜಾಗೆ 6 ವರ್ಷ, ಪೂಜಾಳ ಸಹೋದರನಿಗೆ ನಾಲ್ಕೂವರೆ ವರ್ಷ. ಇವರ ಮನೆಯ ಅನತಿ ದೂರದಲ್ಲಿಯೇ ಆರೋಪಿ ವಾಸವಿರುವ ಲೈನ್ ಮನೆ ಇದೆ. ಉಳುವಂಗಡ ಪ್ರಥ್ವಿ ಎಂಬವರ ತೋಟದ ಸಮೀಪದ ಕಾಡಿನಲ್ಲಿಯೇ ಕೃತ್ಯ ನಡೆದಿದೆ. ಆರೋಪಿ ಚಿರಪರಿಚಿತನಾಗಿದ್ದು, ಉದ್ಧೇಶಪೂರ್ವಕವಾಗಿಯೇ ಕೃತ್ಯವೆಸಗಿದ್ದಾನೆ. ಆದರೆ, ಈಕೆ ಯಾವದೇ ಚುಡಾವಣೆ ಬಗ್ಗೆ ಪೆÇೀಷಕರಲ್ಲಿ ಈವರೆಗೂ ಹೇಳಿಕೊಂಡಿಲ್ಲ. ಆರೋಪಿ ಈ ಹಿಂದೆ ಯಾವದಾದರೂ ಕೃತ್ಯದಲ್ಲಿ ಶಾಮೀಲಾಗಿರಬಹುದೆ ಎಂಬ ಬಗ್ಗೆ ಪೆÇಲೀಸರ ತನಿಖೆಯಿಂದ ಬಹಿರಂಗವಾಗಬೇಕಿದೆ.

ಮಡಿಕೇರಿಯ ಡಾ. ರವಿಕುಮಾರ್ ಅವರು ಶವ ಪರೀಕ್ಷೆ ನಡೆಸಿದ್ದು, ತಲೆ ಹಾಗೂ ಮುಖದ ಭಾಗಕ್ಕೆ ಮಾರಣಾಂತಿಕ ಹಲ್ಲೆ ನಡೆದ ಹಿನ್ನೆಲೆ ಸಾವನ್ನಪ್ಪಿರುವದು ಖಚಿತವಾಗಿದೆ. ಶವಸಂಸ್ಕಾರ ಸಂದರ್ಭ ಅತ್ಯಾಚಾರ ನಡೆದ ಬಗ್ಗೆ ಪೂರಕ ಸಾಕ್ಷಿಗಾಗಿ ಕೆಲವು ಅಂಶಗಳನ್ನು ದೃಢಪಡಿಸಲು ಪ್ರಾಥಮಿಕವಾಗಿ ಮೈಸೂರು ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ತಪಾಸಣೆಗೆ ಒಳಪಡಲಿದೆ. ನಂತರ ಬೆಂಗಳೂರು ಪ್ರಯೋಗಾಲಯದಲ್ಲಿ ಡಿಎನ್‍ಎ ಪರೀಕ್ಷೆ ನಡೆಯಲಿದ್ದು, ಆರೋಪಿಯನ್ನು ಶಿಕ್ಷೆಗೆ ಗುರಿಪಡಿಸಲು ಇದು ಪ್ರಮುಖ ಸಾಕ್ಷಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.