ಶ್ರೀಮಂಗಲ, ಜೂ. 11: ಬಿರುನಾಣಿ ಪಟ್ಟಣದಲ್ಲಿ ರಸ್ತೆಯ ಎರಡೂ ಬದಿಯಲ್ಲಿ ವಾಹನ ನಿಲುಗಡೆಗೆ ಡಾಂಬರು ಹಾಕಿ ಸೌಲಭ್ಯ ಕಲ್ಪಿಸಿರುವದನ್ನು ಜಿ.ಪಂ. ಸದಸ್ಯೆ ಅಪ್ಪಂಡೇರಂಡ ಭವ್ಯ ಉದ್ಘಾಟಿಸಿದರು.

ವೀರಾಜಪೇಟೆ ತಾ.ಪಂ.ನಿಂದ ಎಸ್ಕೊ ಯೋಜನೆಯಡಿ ರೂ. 6 ಲಕ್ಷ ಅನುದಾನ ಕಾಮಗಾರಿ ಮಾಡಲಾಗಿದೆ ಎಂದು ಗ್ರಾ.ಪಂ. ಸದಸ್ಯೆ ಬುಟ್ಟಿಯಂಡ ನಾಣಯ್ಯ ಈ ಸಂದರ್ಭ ಮಾಹಿತಿ ನೀಡಿದರು. ಬಿರುನಾಣಿ ಪಟ್ಟಣದಲ್ಲಿ ರಸ್ತೆ ಅಗಲೀಕರಣ ಮಾಡಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ರಸ್ತೆಯ ಎರಡೂ ಬದಿಗೆ ಡಾಂಬರು ಹಾಕಲು ಈ ಅನುದಾನವನ್ನು ಬಳಸಿಕೊಳ್ಳಲಾಗಿದೆ ಎಂದರು. ಈ ಸಂದರ್ಭ ತಾ.ಪಂ. ಉಪಾಧ್ಯಕ್ಷ ನೆಲ್ಲೀರ ಚಲನ್ ಕುಮಾರ್, ಬಿಜೆಪಿ ಹಿರಿಯ ಮುಖಂಡ ಬೊಟ್ಟಂಗಡ ಎಂ. ರಾಜು, ಬಿರುನಾಣಿ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಅಣ್ಣಳಮಾಡ ರಾಯ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗ್ರಾ.ಪಂ. ಅಧ್ಯಕ್ಷ ಬುಟ್ಟಿಯಂಡ ನಾಣಯ್ಯ, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಜಪ್ಪು ಮುತ್ತಪ್ಪ, ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಬಲ್ಯಮೀದೇರಿರ ಸಿ. ನಾಣಯ್ಯ, ಗ್ರಾ.ಪಂ. ಸದಸ್ಯರಾದ ಬೊಟ್ಟಂಗಡ ಗಿರೀಶ್, ಕಾಯಪಂಡ ಸುನಿಲ್, ಬಿ.ಸಿ. ಕೊರಗಪ್ಪ, ಶಾರದಾ, ಕಾಳಿಮಾಡ ಪುಷ್ಪ ಮತ್ತಿತರರು ಹಾಜರಿದ್ದರು.