ಸುಂಟಿಕೊಪ್ಪ,ಡಿ.12: ತುಳುನಾಡಿನ ಸಂಸ್ಕøತಿ, ಭಾಷೆ, ಆಚಾರ - ವಿಚಾರಗಳನ್ನು ಮೇಳೈಸುವ ಶ್ರೀ ನಾರಾಯಣ ಗುರುಗಳ ಗಾಂಭೀರ್ಯ ದಿಂದ ಸಾಗಿದ ಮೆರವಣಿಗೆ ಸುಂಟಿಕೊಪ್ಪದಲ್ಲಿ ತುಳುನಾಡಿನ ಬಿಲ್ಲವರ ಶಿಸ್ತಿನ ಕೋಟಿಚೆನ್ನಯ್ಯ ಕ್ರೀಡಾಕೂಟಕ್ಕೆ ಸ್ಪೂರ್ತಿ ನೀಡಿತು.ಕಲಶ ಹೊತ್ತ ಹೆಂಗಳೆಯರು ತುಳು ಸಂಸ್ಕøತಿ ಬಿಂಬಿಸುವ ವಾದ್ಯಗೋಷ್ಠಿಗೆ, ವೇಷಭೂಷಣ ಗಳಿಂದ ತಾಳ ಹಾಕಿದ ಕಲ್ಲಡ್ಕದ ಗೊಂಬೆ ನೃತ್ಯ ಜನಮನ ಸೊರೆ ಗೊಂಡಿತು. ಬಿಲ್ಲವ ಸಮುದಾಂiÀ ುದವರು ಶಿಸ್ತಿನಿಂದ ಗೊಂಬೆ ನೃತ್ಯಕ್ಕೆ ತಕ್ಕಂತೆ ಹೆಜ್ಜೆಹಾಕಿ ಶ್ರೀ ನಾರಾಯಣ ಗುರುಗಳನ್ನು ನೆನಪಿಸುತ್ತಾ ಸಾಗಿದ ಮೆರವಣಿಗೆ ಸುಂಟಿಕೊಪ್ಪ ಪಟ್ಟಣದಲ್ಲಿ ತುಳು ಭಾಷಿಕರ ಸಂಸ್ಕøತಿ ಭಾಷೆ ಪರಂಪರೆಯನ್ನು ಜನಮಾನಸದಲ್ಲಿ ಉಳಿಸಲು

ಕಾರಣೀಭೂತವಾಯಿತು. ಮಾದಾಪುರ ರಸ್ತೆಯಲ್ಲಿ 2 ಕಡೆ ತಳಿರು - ತೋರಣ ಕೋಟಿಚೆನ್ನಯ್ಯರ ಬಿಲ್ಲುಬಾಣ ಗುರುತಿನ ಬಾವುಟಗಳಿಂದ ಅಲಂಕರಿಸಿದ್ದು ತುಳುನಾಡಿನ ಸಂಸ್ಕøತಿಯನ್ನು ಊರಿಗೆ ಪರಿಚಯಿಸುವಲ್ಲಿ ಶ್ರೀ ನಾರಾಯಣ ಗುರುಗಳ ತತ್ವಸಿದ್ಧಾಂತವನ್ನು ಜನರಿಗೆ ಮನವರಿಕೆ ಮಾಡಿಕೊಳ್ಳುವಲ್ಲಿ ಜಿಲ್ಲಾ ಬಿಲ್ಲವ ಸಮಾಜ ಸೇವಾ ಸಂಘ, ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ ಸುಂಟಿಕೊಪ್ಪದವರು ಪ್ರಥಮ ವರ್ಷದ ಕೋಟಿ ಚೆನ್ನಯ್ಯ ಬಿಲ್ಲವ ಕ್ರೀಡಾಕೂಟ ಸಮಾರಂಭ ಯಶಸ್ವಿಯಾಗಿಸಿತು.