ಮಡಿಕೇರಿ, ಜೂ. 8: ಕೊಡಗು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಡಿ ಗ್ರೂಪ್ ನೌಕರರನ್ನು ನೆÉೀಮಕಾತಿ ಮಾಡದೆ ಸ್ವಚ್ಛತಾ ಸಿಬ್ಬಂದಿಗಳನ್ನು ಜೀತದಾಳುಗಳಂತೆ ದುಡಿಸಿ ಕೊಳ್ಳಲಾಗುತ್ತಿದೆಯೆಂದು ಕೊಡಗು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿಗಳ ಸಂಘ ಆರೋಪಿಸಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಾ. 23 ರಂದು ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಗುವದೆಂದು ಸಂಘದ ಅಧ್ಯಕ್ಷ ಪಿ.ಆರ್. ಭರತ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಮಡಿಕೇರಿ, ವೀರಾಜಪೇಟೆ, ಸೋಮವಾರಪೇಟೆ, ಶನಿವಾರಸಂತೆ, ಗೊಣಿಕೊಪ್ಪÀ, ಪಾಲಿಬೆಟ್ಟ, ನಾಪೆÀÇೀಕ್ಲು, ಕುಶಾಲನಗರ, ಕುಟ್ಟ ವ್ಯಾಪ್ತಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ದುಡಿಯುತ್ತಿರುವ ಸ್ವಚ್ಛತಾ ಸಿಬ್ಬಂದಿಗಳು ಮೂಲಭೂತ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಆಡಳಿತ ವ್ಯವಸ್ಥೆ ನಿರ್ಲಕ್ಷ್ಯ ವಹಿಸಿದೆಯೆಂದು ಆರೋಪಿಸಿದರು. ಜನಸಂಖ್ಯೆಗೆ ಅನುಗುಣವಾಗಿ “ಡಿ” ಗ್ರೂಪ್ ನೌಕರರನ್ನು ನೇಮಕ ಮಾಡದೆ ಸ್ವಚ್ಛತಾ ಸಿಬ್ಬಂದಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ. ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ 15 ವರ್ಷಗಳ ಹಿಂದಿನ ಜನಸಂಖ್ಯೆಗೆ ಅನುಗುಣವಾಗಿ 31 ಮಂದಿ “ಡಿ” ಗ್ರೂಪ್ ನೌಕರರು ಇರಬೇಕಾಗಿತ್ತು. ಆದರೆ, ಕೇವಲ 5 ಮಂದಿ ಕಾರ್ಯ ನಿರ್ವಹಿಸುತ್ತಿದ್ದು, ಇವರು ಕೂಡ ನಿವೃತ್ತಿಯ ದಿನಗಳನ್ನು ಎಣಿಸುತ್ತಿದ್ದಾರೆ. ವೀರಾಜಪೇಟೆ ಆಸ್ಪತ್ರೆಯಲ್ಲಿ 20 ಮಂದಿ ಡಿ ಗ್ರೂಪ್ ನೌಕರರಿಗೆ ಬದಲಾಗಿ ಕೇವಲ 6 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೇ ಪರಿಸ್ಥಿತಿ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿ ಇದ್ದು, ಸರ್ಕಾರ ಕೆÉೀವಲ ಗುತ್ತಿಗೆ ಆಧಾರದಲ್ಲಿ ಸ್ವಚ್ಛತಾ ಸಿಬ್ಬಂದಿಗಳನ್ನು ನೇಮಕ ಮಾಡಿ, ಕೆಲಸದ ಒತ್ತಡವನ್ನು ಹೇರುತ್ತಿದೆ ಯೆಂದು ಭರತ್ ಆರೋಪಿಸಿದರು.

ಸರ್ಕಾರ ಸ್ವಚ್ಛತಾ ಸಿಬ್ಬಂದಿಗಳಿಗೆ 10 ಸಾವಿರ ರೂ. ವೇತನ ನಿಗದಿ ಮಾಡಿದರೆ, ಗುತ್ತಿಗೆದಾರರು 5 ರಿಂದ 6 ಸಾವಿರ ರೂ. ಮಾತ್ರ ನೀಡುತ್ತಿದ್ದಾರೆ.

ಬೇಡಿಕೆಗಳು : ಸ್ವಚ್ಛತಾ ಸಿಬ್ಬಂದಿಗಳಿಗೆ ಮಾಸಿಕ ವೇತನ ರೂ. 15 ಸಾವಿರ ನೀಡಬೇಕು. ಗುತ್ತಿಗೆ ಆಧಾರದ ನೇಮಕಾತಿ ಪದ್ಧತಿಯನ್ನು ಕೈಬಿಡಬೇಕು. ಆಸ್ಪತ್ರೆಯ ಮೂಲಕವೆ ಸಿಬ್ಬಂದಿಗಳಿಗೆ ವೇತನ ನೀಡಬೇಕು, ಡಿ ಗ್ರೂಪ್ ನೌಕರರ ಸಂಖ್ಯೆಗೆ ಅನುಗುಣವಾಗಿ ಸ್ವಚ್ಛತಾ ಸಿಬ್ಬಂದಿ ಗಳನ್ನು ನೆÉೀಮಿಸಬೇಕು. ವರ್ಷಕ್ಕೆ 2 ಜೊತೆ ಸಮವಸ್ತ್ರ, ಗ್ಲೌಸ್, ರೈನ್ ಕೋಟ್, ಶೂ ಮತ್ತಿತರ ಸಾಮಗ್ರಿ ಗಳನ್ನು ನೀಡಬೇಕು. ವೇತನವನ್ನು 5ನೇ ತಾರೀಖಿನ ಒಳಗೆ ವಿತರಿಸಬೇಕು. ಪಿಎಫ್ ಅನ್ನು ಪಾವತಿಸದ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿರುವ ಎಲ್ಲಾ ಸ್ವಚ್ಛತಾ ಸಿಬ್ಬಂದಿಗಳನ್ನು ಡಿ ಗ್ರೂಪ್ ನೌಕರ ರೆಂದು ಪರಿಗಣಿಸಿ ಖಾಯಂ ಗೊಳಿಸ ಬೇಕೆಂದು ಸಂಘ ಒತ್ತಾಯಿ ಸಿದೆ. ಪತ್ರಿಕಾಗೋಷ್ಠಿಯಲ್ಲಿ ಕಾರ್ಯ ದರ್ಶಿ ಹೆಚ್.ಕೆ. ಜಾನಕಿ, ಉಪಾಧ್ಯಕ್ಷೆ ರಾಜಿನಿ ಹಾಗೂ ಪದಾಧಿಕಾರಿ ಸದಾಶಿವ ಉಪಸ್ಥಿತರಿದ್ದರು.