ಮಡಿಕೇರಿ, ಜು. 2: ಕೊಡಗು ಜಿಲ್ಲೆಗೆ 2016-17ನೇ ಸಾಲಿಗೆ ಯೋಜನಾ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗೆ ಸೇರಿದಂತೆ ಒಟ್ಟು ರೂ. 10013.79 ಲಕ್ಷ ಅನುದಾನ ನಿಗದಿಯಾಗಿದ್ದು, ಈ ಪೈಕಿ ರಾಜ್ಯದ ಪಾಲು ರೂ. 8884.79 ಲಕ್ಷ ಹಾಗೂ ಕೇಂದ್ರ ಪಾಲು

ರೂ. 1129 ಲಕ್ಷ ಆಗಿರುತ್ತದೆ. ಈ ಅನುದಾನದಲ್ಲಿ ಜಿ.ಪಂ. ಕಾರ್ಯಕ್ರಮಗಳಿಗೆ ರೂ. 5,195.41 ಲಕ್ಷ, ತಾ.ಪಂ. ಕಾರ್ಯಕ್ರಮಗಳಿಗೆ ರೂ. 3,722.38 ಲಕ್ಷ ಹಾಗೂ ಗ್ರಾ.ಪಂ. ಕಾರ್ಯಕ್ರಮಗಳಿಗೆ ರೂ. 1096 ಲಕ್ಷ ಅನುದಾನ ನಿಗದಿಯಾಗಿರುತ್ತದೆ. 2015-16ನೇ ಸಾಲಿಗೆ ಜಿಲ್ಲೆಗೆ ಯೋಜನಾ ಕಾರ್ಯಕ್ರಮಗಳಿಗೆ ಒಟ್ಟು ರೂ. 8834.49 ಲಕ್ಷ ನಿಗದಿಯಾಗಿದ್ದು, ಪ್ರಸಕ್ತ ಸಾಲಿಗೆ ರೂ. 1,179.30 ಲಕ್ಷ ಅನುದಾನ ಹೆಚ್ಚುವರಿಯಾಗಿ ನಿಗದಿಯಾಗಿದೆ. ಶಿಕ್ಷಣ ಇಲಾಖೆಗೆ ಜಿ.ಪಂ. ಯೋಜನಾ ಕಾರ್ಯಕ್ರಮಗಳಿಗೆ ಒಟ್ಟಾರೆಯಾಗಿ ರೂ. 1,459.60 ಲಕ್ಷ ನಿಗದಿಪಡಿಸಲಾಗಿದ್ದು, ಪ್ರಮುಖವಾಗಿ ಸಾರ್ವತ್ರಿಕ ಶಿಕ್ಷಣದ ಉತ್ತೇಜನಕ್ಕಾಗಿ ಅಕ್ಷರ ದಾಸೋಹ ಕಾರ್ಯಕ್ರಮ ಜಾರಿಗೊಳಿಸಿದ್ದು, ಈ ಕಾರ್ಯಕ್ರಮಕ್ಕೆ ರೂ. 1,314.04 ಲಕ್ಷ ಅನುದಾನ, ಲೋಕ ಶಿಕ್ಷಣ ಕಾರ್ಯಕ್ರಮಕ್ಕಾಗಿ ರೂ. 8 ಲಕ್ಷ ಅನುದಾನ ನಿಗದಿಪಡಿಸಲಾಗಿದೆ. ಯುವಜನ ಸೇವೆ ಹಾಗೂ ಕ್ರೀಡಾ ಇಲಾಖೆಗೆ ಜಿ.ಪಂ. ಯೋಜನಾ ಕಾರ್ಯಕ್ರಮಗಳಿಗೆ ವಾರ್ಷಿಕವಾಗಿ ರೂ. 121 ಲಕ್ಷ ಅನುದಾನ ನಿಗದಿಪಡಿಸಿದ್ದು, ಇದರಡಿ ಪೊನ್ನಂಪೇಟೆಯ ಕ್ರೀಡಾ ಶಾಲೆ ನಿರ್ವಹಣೆ ಮತ್ತು ಇತರೆ ವೆಚ್ಚಗಳಿಗಾಗಿ ರೂ. 55 ಲಕ್ಷ, ಕ್ರೀಡಾ ಕೂಟ ರ್ಯಾಲಿಗಳಿಗಾಗಿ ರೂ. 35 ಲಕ್ಷ, ಜಿಲ್ಲಾ ಕ್ರೀಡಾಂಗಣ ಮತ್ತು ತಾಲೂಕು ಕ್ರೀಡಾಂಗಣ ನಿರ್ವಹಣೆ ಮತ್ತು ಬಯಲು ರಂಗ ಮಂದಿರ ಹಾಗೂ ಶಾಲಾ ಆಟದ ಮೈದಾನ ಅಭಿವೃದ್ಧಿಗೆ ರೂ. 31 ಲಕ್ಷ ನಿಗದಿಪಡಿಸಲಾಗಿರುತ್ತದೆ. ವೈದ್ಯಕೀಯ ಮತ್ತು ಜನಾರೋಗ್ಯ ಇಲಾಖೆಯ ಜಿ.ಪಂ. ಯೋಜನಾ ಕಾರ್ಯಕ್ರಮಗಳಿಗೆ ರೂ. 238 ಹಾಗೂ ಕುಟುಂಬ ಕಲ್ಯಾಣ ಕಾರ್ಯಕ್ರಮಗಳಿಗೆ ರೂ. 1,092 ಲಕ್ಷಗಳ ಅನುದಾನವನ್ನು ನಿಗದಿಪಡಿಸಲಾಗಿರುತ್ತದೆ. ಆಯುಷ್ ಇಲಾಖೆ ಕಟ್ಟಡ ಕಾಮಗಾರಿಗಾಗಿ ರೂ. 15 ಲಕ್ಷ ಅನುದಾನ ನಿಗದಿಯಾಗಿರುತ್ತದೆ.

ಸಮಾಜ ಕಲ್ಯಾಣ ಇಲಾಖೆ ಪರಿಶಿಷ್ಟ ಜಾತಿ ಕಲ್ಯಾಣ ಜಿ.ಪಂ. ಯೋಜನಾ ಕಾರ್ಯಕ್ರಮಗಳಿಗೆ ರೂ. 77.50 ಲಕ್ಷ ಹಾಗೂ ಪರಿಶಿಷ್ಟ ಪಂಗಡ ಕಾರ್ಯಕ್ರಮಗಳಿಗೆ ರೂ. 48 ಲಕ್ಷ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿ.ಪಂ. ಯೋಜನಾ ಕಾರ್ಯಕ್ರಮಗಳಿಗೆ ರೂ. 195.66 ಲಕ್ಷ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ಕಾರ್ಯಕ್ರಮಗಳಿಗೆ ರೂ. 32.25 ಲಕ್ಷ ನಿಗದಿಪಡಿಸಲಾಗಿದೆ.

ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಪಂಚಾಯಿತಿ ಯೋಜನಾ ಕಾರ್ಯಕ್ರಮಕ್ಕೆ ರೂ. 20 ಲಕ್ಷ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಕಲ್ಯಾಣ ಕಾರ್ಯಕ್ರಮಕ್ಕಾಗಿ ರೂ. 8 ಲಕ್ಷ ಅನುದಾನ, ಕೃಷಿ ಇಲಾಖೆಯ ಜಿ.ಪಂ. ಯೋಜನಾ ಕಾರ್ಯಕ್ರಮಗಳಿಗೆ ರೂ. 71.01 ಲಕ್ಷ ಅನುದಾನ ಹಾಗೂ ತೋಟಗಾರಿಕೆ ಇಲಾಖೆಗೆ ರೂ. 54.99 ಲಕ್ಷ ನಿಗದಿಪಡಿಸಲಾಗಿದೆ.

ಪಶುಸಂಗೋಪನೆ ಇಲಾಖೆಯ ಜಿ.ಪಂ. ಯೋಜನಾ ಕಾರ್ಯಕ್ರಮಗಳಿಗೆ ರೂ. 53.65 ಲಕ್ಷ ಹಾಗೂ ಮೀನುಗಾರಿಕೆ ಇಲಾಖೆಗೆ ರೂ. 53 ಲಕ್ಷ ಅನುದಾನ ನಿಗದಿಪಡಿಸಿದೆ. ಸಾಮಾಜಿಕ ಅರಣ್ಯ ಇಲಾಖೆಯ ಜಿ.ಪಂ. ಯೋಜನಾ ಕಾರ್ಯಕ್ರಮಗಳಿಗೆ ರೂ. 44 ಲಕ್ಷ, ಸಹಕಾರ ಇಲಾಖೆಗೆ ರೂ. 10.75 ಲಕ್ಷ, ಗ್ರಾಮೋದ್ಯಮ ಮತ್ತು ಸಣ್ಣ ಉದ್ಯಮಗಳಿಗೆ ರೂ. 13.99 ಲಕ್ಷ ಮತ್ತು ಕೈಮಗ್ಗ ಇಲಾಖೆಗೆ ರೂ. 5 ಲಕ್ಷ ಅನುದಾನ ನಿಗದಿಪಡಿಸಲಾಗಿದೆ. ಕೃಷಿ ಮಾರುಕಟ್ಟೆಗೆ, ಜಿ.ಪಂ. ಕಾರ್ಯಕ್ರಮಗಳಿಗೆ ರೂ. 20 ಲಕ್ಷ, ಕನ್ನಡ ಮತ್ತು ಸಂಸ್ಕøತಿ ಇಲಾಖೆಗೆ ರೂ. 15 ಲಕ್ಷ ಹಾಗೂ ರೇಷ್ಮೆ ಇಲಾಖೆಗೆ ರೂ. 2.01 ಲಕ್ಷ ನಿಗದಿಪಡಿಸಿದೆ. ಜಿಲ್ಲಾ ಪಂಚಾಯಿತಿ, ಡಿ.ಆರ್.ಡಿ.ಎ. ಆಡಳಿತ ವೆಚ್ಚ, ವೈದ್ಯಕೀಯ ವೆಚ್ಚ, ಜಿಲ್ಲಾ ಯೋಜನಾ ಘಟಕ, ಎನ್.ಆರ್.ಡಿ.ಎಂ.ಎಸ್. ಸೇರಿದಂತೆ ರೂ. 168 ಲಕ್ಷ, ಗ್ರಾಮೀಣ ಇಂಧನ ಕಾರ್ಯಕ್ರಮಗಳಿಗೆ ರೂ. 24 ಲಕ್ಷ ನಿಗದಿಪಡಿಸಿದೆ. ಜಿಲ್ಲೆಯ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿ ಒಟ್ಟು ರೂ. 325 ಲಕ್ಷ ನಿಗದಿಪಡಿಸಿದೆ. ಪಂಚಾಯತ್ ರಾಜ್ ಸಂಸ್ಥೆಗಳಿಗೆ ಅನುದಾನದಡಿ ರೂ. 1,000 ಲಕ್ಷಗಳನ್ನು ಜಿ.ಪಂ. ನೂತನ ಆಡಳಿತ ಸಂಕೀರ್ಣ ಕಚೇರಿ ಕಟ್ಟಡ ನಿರ್ಮಾಣಕ್ಕಾಗಿ ನಿಗದಿಪಡಿಸಿದೆ. ಹಾಗೂ ಜಿ.ಪಂ. ಅಭಿವೃದ್ಧಿ ಅನುದಾನ ರೂ. 20 ಲಕ್ಷವನ್ನು ಸಹ ಇದೇ ಉದ್ದೇಶಕ್ಕೆ ಬಳಸಲಾಗುವದು. 2016-17ನೇ ಸಾಲಿಗೆ ನಿಗದಿಪಡಿಸಿರುವ ಅನುದಾನಕ್ಕೆ ತಯಾರಿಸಿರುವ ಕ್ರಿಯಾ ಯೋಜನೆಗೆ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಲಾಯಿತು.