ಮಡಿಕೇರಿ ನ.16 : ಕೊಡವ ಬುಡಕಟ್ಟು ಜನಾಂಗಕ್ಕೆ ಸಂವಿಧಾನದ 340 ಮತ್ತು 342ನೇ ವಿಧಿಯಡಿ ರಾಜ್ಯಾಂಗದ ಖಾತ್ರಿ ನೀಡಬೇಕೆಂದು ಒತ್ತಾಯಿಸಿ ಕಳೆದ 16 ವರ್ಷಗಳಿಂದ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಡೆಸಿದ ಹೋರಾಟಕ್ಕೆ ಫಲ ದೊರೆತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಕೊಡವರ ಸಮಗ್ರ ‘ಕುಲಶಾಸ್ತ್ರ’ ಅಧ್ಯಯನ ಆರಂಭಗೊಂಡಿದೆ ಎಂದು ಸಿಎನ್‍ಸಿ ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.16 ರಿಂದ ಮೂರು ತಿಂಗಳ ಕಾಲ ನಡೆಯುವ ಕೊಡವರ ಸಮೀಕ್ಷಾ ಕಾರ್ಯ ವೀರಾಜಪೇಟೆ ತಾಲೂಕಿ ನಿಂದ ಆರಂಭಗೊಂಡಿದೆ ಎಂದರು. ಕಳೆದ ಹದಿನಾರು ವರ್ಷಗಳಿಂದ ಸಿಎನ್‍ಸಿ ಸಂಘಟನೆ ನಡೆಸಿದ ಶಾಂತಿಯುತ ಹೋರಾಟಕ್ಕೆ ಸ್ಪಂದನೆ ದೊರಕಿದ್ದು, ಕುಲಶಾಸ್ತ್ರ ಅಧ್ಯಯನ ತಂಡ ಮನೆ ಮನೆ ಸಮೀಕ್ಷೆ ನಡೆಸುವ ಸಂದರ್ಭ ಕೊಡವರು ಅಗತ್ಯ ಸಹಕಾರ ನೀಡಬೇಕೆಂದರು.

ಮೊದಲ ಹಂತ ವೀರಾಜಪೇಟೆ ತಾಲೂಕು, ಎರಡನೇ ಹಂತ ಮಡಿಕೇರಿ ತಾಲೂಕು ಹಾಗೂ ಮೂರನೇ ಹಂತದಲ್ಲಿ ಸೋಮವಾರಪೇಟೆ ತಾಲೂಕಿನಲ್ಲಿ ಸಮೀಕ್ಷೆ ನಡೆಯಲಿದೆ. ಕೊಡವರು ಒಂದು ಜಾತಿಯಲ್ಲವೆಂದು ಅಭಿಪ್ರಾಯಪಟ್ಟ ನಾಚಪ್ಪ, ವಿಶಿಷ್ಟವಾದ ಬುಡಕಟ್ಟು ಸಮುದಾಯವಾಗಿದೆ ಎಂದÀರು. ಕೊಡವ ಭಾಷೆಯನ್ನು ಮಾತೃ ಭಾಷೆಯೆಂದು ತಿಳಿದಿರುವವರು ಮಾತ್ರವಲ್ಲದೆ, ಕೊಡವ ಭಾಷೆಯನ್ನು ಬಳಸುವವರ ಸಂಖ್ಯೆಯೂ ದೊಡ್ಡ ಪ್ರಮಾಣದಲ್ಲಿದೆ. 2003 ರಲ್ಲಿ ಬೋಡೋ, ಸಂತಾಲಿ ಹಾಗೂ ಗೂರ್ಖಾ ಭಾಷೆಗಳನ್ನು 8ನೇ ಷೆಡ್ಯೂಲ್‍ಗೆ ಸೇರಿಸಲಾಗಿದೆ. ಸುಮಾರು 38 ಭಾಷೆಗಳನ್ನು ಇದೇ ರೀತಿ 8ನೇ ಷೆಡ್ಯೂಲ್‍ಗೆ ಸೇರಿಸುವ ಚಿಂತನೆಯಿದ್ದು, ಇವುಗಳಲ್ಲಿ ಕೊಡವ ಭಾಷೆ 19ನೇ ಸ್ಥಾನದಲ್ಲಿದೆ ಎಂದು ನಾಚಪ್ಪ ಮಾಹಿತಿ ನೀಡಿದರು. ಕೊಡವ ಮತ್ತು ತುಳು ಭಾಷೆಗಳು ಸೇರಿದಂತೆ ಒಟ್ಟು 38 ಭಾಷೆಗಳು 8ನೇ ಷೆಡ್ಯೂಲ್‍ಗೆ ಸೇರ್ಪಡೆಗೊಳ್ಳಲು ಅರ್ಹತೆ ಪಡೆದಿವೆ ಎಂಬದನ್ನು ಗುರುತಿಸಿ ಶಿಫಾರಸ್ಸಿನ ವರದಿ ನೀಡಲಾಗಿದೆ ಎಂದು ನಾಚಪ್ಪ ಹೇಳಿದರು.

ಕೊಡವ ಭಾಷೆಯನ್ನು ಸಂವಿಧಾನದ 8ನೇ ಷೆಡ್ಯೂಲ್‍ಗೆ ಸೇರ್ಪಡೆಗೊಳಿಸುವ ಸಂಬಂಧ ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರಿಂದ ಖಾಸಗಿ ಸದಸ್ಯರ ಮಸೂದೆ ಮಂಡನೆ ಆಗಲಿದ್ದು, ಬಜೆಟ್ ಅಧಿವೇಶನದಲ್ಲಿ ಚರ್ಚೆ ನಡೆಯಲಿದೆ. ಈ ಸಂಬಂಧ ನೋಟಿಫಿಕೇಶನ್ ಹೊರಡಿಸಲಾಗಿದೆ ಎಂದು ನಾಚಪ್ಪ ಹೇಳಿದರು.

ಹರಿಪ್ರಸಾದ್ ಅವರು ಕಳೆದ 20 ವರ್ಷಗಳಿಂದ ಸಿಎನ್‍ಸಿಯ ಹಕ್ಕೊತ್ತಾಯಗಳಿಗೆ ಬೆಂಬಲ ಹಾಗೂ ಮಾರ್ಗದರ್ಶನಗಳನ್ನು ನೀಡುತ್ತಾ ಬಂದಿದ್ದು, ಕೊಡಗಿನ ಭಾಷೆ, ಸಂಸ್ಕøತಿ, ಜನರ ಹೃದಯ ವೈಶಾಲ್ಯತೆಯ ಬಗ್ಗೆ ಸಂಪೂರ್ಣ ಮಾಹಿತಿ ಅವರ ಬಳಿಯಲ್ಲಿದೆ. ಕೊಡವರ ಅಸಹಾಯಕತೆ, ದೌರ್ಬಲ್ಯ ಮತ್ತು ಕ್ಷೀಣಗೊಂಡ ರಾಜಕೀಯ ನೆಲೆಯ ಬಗ್ಗೆ ಗಮನ ಹರಿಸಿರುವ ಹರಿಪ್ರಸಾದ್, ಸಿಎನ್‍ಸಿ ಬೇಡಿಕೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದಾರೆ ಎಂದರು.

ನ.1 ರಂದು ದೆಹಲಿ ಚಲೋ ಸತ್ಯಾಗ್ರಹ ನಡೆಸಿದಾಗ ಎಐಸಿಸಿ ವಕ್ತಾರ ಹಾಗೂ ಹಿರಿಯ ವಕೀಲ ಬ್ರಿಜೇಶ್ ಕಾಳಪ್ಪ ಅವರು ಕೂಡ ಭಾಗಿಯಾಗಿ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸಂಘÀಟನೆಯ ಚಂಬಂಡ ಜನ್, ಪÀÅಲ್ಲೇರ ಕಾಳಪ್ಪ, ಅರೆಯಡ ಗಿರೀಶ್ ಹಾಗೂ ಮನೋಜ್ ಮಂದಣ್ಣ ಉಪಸ್ಥಿತರಿದ್ದರು.