ಕುಶಾಲನಗರ, ಜು. 2: ಕುಶಾಲನಗರದ ತಾವರೆಕೆರೆ ಬಳಿಯ ಮಣಿಕಂಠ ಮಿಲ್‍ನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ತೇಗದ ಮರದ ನಾಟಾಗಳನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಂಡ ಘಟನೆ ನಡೆದಿದೆ.

ಕುಶಾಲನಗರ ವಲಯ ಅರಣ್ಯಾಧಿಕಾರಿ ಎಂ.ಎಸ್. ಚಿಣ್ಣಪ್ಪ ನೇತೃತ್ವದಲ್ಲಿ ಮಿಲ್ ಮೇಲೆ ಧಾಳಿ ನಡೆಸಿದ ಅರಣ್ಯ ಇಲಾಖಾ ಸಿಬ್ಬಂದಿಗಳು, ಖಾಸಗಿ ಕಾಫಿ ತೋಟವೊಂದರಿಂದ ಕಡಿದು ಸಂಗ್ರಹಿಸಿಟ್ಟಿದ್ದ ರೂ. 7.5 ಲಕ್ಷ ಮೌಲ್ಯದ ಅಂದಾಜು 60 ರಿಂದ 70 ಸಿಎಫ್‍ಟಿ ತೇಗದ ಮರವನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಿಲ್ ಮಾಲೀಕ ಹಾಗೂ ತೋಟದ ಮಾಲೀಕರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಎಂ.ಎಸ್. ಚಿಣ್ಣಪ್ಪ ಮಾಹಿತಿ ನೀಡಿದ್ದಾರೆ.

ಕಾರ್ಯಾಚರಣೆ ಸಂದರ್ಭ ವಲಯ ಉಪ ಅರಣ್ಯ ಸಂರಕ್ಷಣಾಧಿ ಕಾರಿ ರಂಜನ್, ಸಿಬ್ಬಂದಿಗಳಾದÀ ವಂಕಟೇಶ್, ನಾರಾಯಣ ಇದ್ದರು.