ಚೆಟ್ಟಳ್ಳಿ, ಅ. 10: ಕುಶಾಲನಗರದ ಅರಣ್ಯ ಇಲಾಖೆ ಇಂದು ಮುಂಜಾನೆ ಮಿಂಚಿನ ಕಾರ್ಯಾಚರಣೆ ನಡೆಸಿ ಸುಮಾರು ರೂ. 6 ಲಕ್ಷ ಮೌಲ್ಯದ ಬೀಟೆ ಮರ ಹಾಗೂ ಸ್ವರಾಜ್ ಮಜ್ದಾ ವಾಹನವನ್ನು ವಶಪಡಿಸಿ ಕೊಂಡಿದ್ದಾರೆ.

ಸುಂಟಿಕೊಪ್ಪಲಿನ ಆಶಿಕ್ ಎಂಬವರಿಗೆ ಸೇರಿದ ರೂ.6 ಲಕ್ಷ ಬೆಲೆ ಬಾಳುವ ಮರವನ್ನು ಸುಂಟಿಕೊಪ್ಪದ ಫಯಾಜ್ ಎಂಬವರ ಸ್ವರಾಜ್ ಮಜ್ದಾ ವಾಹನದಲ್ಲಿ ಮುಂಜಾನೆ 4.30ರ ವೇಳೆಗೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾಗ ಸುಳಿವರಿತ ಅರಣ್ಯಾಧಿಕಾರಿಗಳು ಕುಶಾಲನಗರದ ಕೊಪ್ಪದ ತನಿಖಾ ಠಾಣೆಯಲ್ಲಿ ಕಾರ್ಯಚರಣೆ ನಡೆಸಿ ಸೆರೆ ಹಿಡಿಯಲಾಯಿತು. ಕಾನೂನು ಕ್ರಮ ಕೈಗೊಂಡಿದ್ದಾರೆ.

ಬೀಟೆಮರವನ್ನು ಸುಂಟಿಕೊಪ್ಪ ಹತ್ತಿರದ ಕೆದಕಲ್ಲಿನಿಂದ ಮೈಸೂರಿಗೆ ಸಾಗಿಸಲು ಯತ್ನಿಸಿದ್ದಾರೆನ್ನಲಾಗಿದೆ. ಕಾರ್ಯಾಚರಣೆಯಲ್ಲಿ ವಲಯಾರಣ್ಯಾಧಿಕಾರಿ ಕೆ.ನೆಹರು, ಉಪವಲಯ ಅರಣ್ಯಾಧಿಕಾರಿಗಳಾದ ಕನ್ನಂಡ ರಂಜನ್, ಶಿವರಾಂ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.