ಮಡಿಕೇರಿ, ಜೂ. 18: ಮಡಿಕೇರಿ ವಿದ್ಯುತ್ ಉಪ-ಕೇಂದ್ರದಿಂದ ಹೊರಹೋಗುವ ಕೋಟೆ ಫೀಡರ್‍ನಲ್ಲಿ “ಕೇಂದ್ರ ಸರ್ಕಾರದ “ತ್ವರಿತ ವಿದ್ಯುತ್ ಜಾಲದ ಸಮಗ್ರ ಅಭಿವೃದ್ಧಿ ಯೋಜನೆ ಮತ್ತು ಸುಧಾರಣಾ” ಕಾಮಗಾರಿ ಪ್ರಗತಿಯಲ್ಲಿದೆ. ಈ ಕಾಮಗಾರಿಯನ್ನು ತುರ್ತಾಗಿ ಪೂರ್ಣಗೊಳಿಸಬೇಕಿದೆ. ಆದ್ದರಿಂದ ತಾ. 19ರಂದು (ಇಂದು) ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ಕೋಟೆ ಫೀಡರ್ ವ್ಯಾಪ್ತಿಯ ಇಂಡಸ್ಟ್ರಿಯಲ್ ಏರಿಯಾ ಮತ್ತು ಕಾಲೇಜು ರಸ್ತೆ, ಸುತ್ತಮುತ್ತಲಿನವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.