ಶನಿವಾರಸಂತೆ, ಜೂ. 14: ಇಲ್ಲಿಗೆ ಸಮೀಪದ ಅವರೆದಾಳು ಗ್ರಾಮದ ತಿರುವಿನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಾಲ್ವರು ಗಾಯಗೊಂಡ ಘಟನೆ ನಡೆದಿದೆ.

ಮಾರುತಿ aಕಾರ್ (ಕೆಎ 12 ಪಿ 1208)ನಲ್ಲಿ ಪ್ರಯಾಣಿಸುತ್ತಿದ್ದಾಗ ಅವರೆದಾಳು ಗ್ರಾಮದ ತಿರುವು ರಸ್ತೆಯಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದಾಗಿ ರಸ್ತೆಯ ಪಕ್ಕದ ಮೋರಿಯೊಂದಕ್ಕೆ ಡಿಕ್ಕಿಯಾಗಿ ಕಾರಿನಲ್ಲಿದ್ದ ನಾಲ್ವರಿಗೆ ಗಾಯಗಳಾಗಿದ್ದು, ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೋಮವಾರಪೇಟೆಯ ಬಿ.ಎನ್. ಪಾಲಾಕ್ಷ ಮೂರ್ತಿ ಕಾರನ್ನು ಚಲಾಯಿಸುತ್ತಿದ್ದು, ಕಾರಿನಲ್ಲಿದ್ದ ಅವರ ಪುತ್ರ ಪ್ರದೀಪ, ತಾಯಿ ಮಂಜುಳ, ನೆರೆಮನೆಯ ತಿಲಕ್ ಬಾಬು ಅವರ ಪತ್ನಿ ಮಂಜುಳ ನಾಲ್ವರಿಗೆ ಗಾಯಗಳಾಗಿದ್ದು, ಹಾಸನ ಹಾಗೂ ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರದೀಪ ಅವರಿಗೆ ಹೆಣ್ಣು ನೋಡಲು ತೆರಳಿ ಹಿಂತಿರುಗುವಾಗ ಘಟನೆ ಸಂಭವಿಸಿದೆ ಎನ್ನಲಾಗಿದೆ.