ಮಡಿಕೇರಿ, ನ. 24: ಜಗತ್ತಿನ ಅತ್ಯಂತ ಜನಾಂಗೀಯ ವೈವಿಧ್ಯತೆ ಹೊಂದಿರುವ ಭಾರತದಲ್ಲಿ ಕೊಡವರ ಹಕ್ಕು ಗೌರವಪೂರ್ವಕವಾಗಿ ಸಂರಕ್ಷಿಸಲ್ಪಡಬೇಕು. ಮಾತ್ರವಲ್ಲದೇ ಸ್ವಾಭಿಮಾನದಿಂದ ಮುಂದುವರೆ ಯಬೇಕು. ಈ ಹಿನ್ನೆಲೆಯಲ್ಲಿ 2017ರಲ್ಲಿ ಸಿಎನ್‍ಸಿ ಅಧ್ಯಕ್ಷ ನಂದಿನೆರವಂಡ ನಾಚಪ್ಪ ನೇತೃತ್ವದಲ್ಲಿ ವಿಶ್ವಸಂಸ್ಥೆಯ ಮಾನವ ಅಧಿಕಾರ ಆಯೋಗಕ್ಕೆ ಖುದ್ದಾಗಿ ಭೇಟಿ ನೀಡಿ ಜಾಗತಿಕ ಮಟ್ಟದಲ್ಲಿ ಕೊಡವರ ಹಕ್ಕಿಗಾಗಿ ಹೋರಾಟ ಮಾಡಲು ಇಂದು ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ನಡೆದ ‘ಕೊಡವ ನ್ಯಾಷನಲ್ ಡೇ’ ನಲ್ಲಿ ನಿರ್ಣಯ ಕೈಗೊಳ್ಳಲಾಯಿತು.