ಮಡಿಕೇರಿ, ಡಿ. 2: ಬಿರುನಾಣಿಯ ಮರೆನಾಡು ಪ್ರೌಢಶಾಲೆಯ ವಾರ್ಷಿಕೋತ್ಸವ ತಾ. 5 ರಂದು ಬೆಳಿಗ್ಗೆ 10 ಗಂಟೆಗೆ ಕ್ರೀಡೋತ್ಸವದೊಂದಿಗೆ ಆರಂಭಗೊಳ್ಳಲಿದ್ದು, ಧ್ವಜಾರೋಹಣವನ್ನು ಮರೆನಾಡು ಪ್ರೌಢಶಾಲೆಯ ಅಧ್ಯಕ್ಷ ಕಾಳಿಮಾಡ ಎ. ಮುತ್ತಣ್ಣ ನೆರವೇರಿಸಲಿದ್ದಾರೆ.ಉಪಾಧ್ಯಕ್ಷ ಬೊಟ್ಟಂಗಡ ಬಿ. ಮಾಚಯ್ಯ ಗೌರವ ರಕ್ಷೆ ಸ್ವೀಕರಿಸಲಿದ್ದಾರೆ. ಕ್ರೀಡಾಕೂಟದ ಉದ್ಘಾಟನೆಯನ್ನು ಗೌರವ ಕಾರ್ಯದರ್ಶಿ ಕಾಯಪಂಡ ಎಸ್. ಮಧು ಮೋಟಯ್ಯ ನೆರವೇರಿಸಲಿದ್ದಾರೆ. ವಿಜ್ಞಾನ ವಸ್ತು ಪ್ರದರ್ಶನವನ್ನು ಕುಪ್ಪಣಮಾಡ ಬೇಬಿ ನಂಜಮ್ಮ ಉದ್ಘಾಟಿಸಲಿದ್ದಾರೆ. ಕಲಾ ವಸ್ತು ಪ್ರದರ್ಶನವನ್ನು ವೀರಾಜಪೇಟೆ ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಬೊಟ್ಟಂಗಡ ಬಿ. ಮುತ್ತಪ್ಪ ನೆರವೇರಿಸಲಿದ್ದಾರೆ. ವೃತ್ತಿ ಶಿಕ್ಷಣ ವಸ್ತು ಪ್ರದರ್ಶನವನ್ನು ಮಲ್ಲೇಂಗಡ ಎಂ. ಪೆಮ್ಮಯ್ಯ, ಸ್ತಬ್ಧಚಿತ್ರ ಉದ್ಘಾಟನೆಯನ್ನು ಕಾಯಪಂಡ ಸುನಿಲ್ ಮಾಚಯ್ಯ ನೆರವೇರಿಸಲಿದ್ದಾರೆ. ಕ್ರೀಡಾಕೂಟದ ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಲಿಟ್ಲ್ ಏಂಜಲ್ ಪಬ್ಲಿಕ್ ಶಾಲೆಯ ಬೊಟ್ಟಂಗಡ ಎಂ. ಕುಶಾಲಪ್ಪ ಪಾಲ್ಗೊಳ್ಳಲಿದ್ದಾರೆ.

ಸಭಾ ಕಾರ್ಯಕ್ರಮ

ಅಪರಾಹ್ನ 2 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮರೆನಾಡು ಪ್ರೌಢಶಾಲೆಯ ಅಧ್ಯಕ್ಷ ಕಾಳಿಮಾಡ ಎ. ಮುತ್ತಣ್ಣ, ಶಾಲೆಯ ಸ್ಥಾಪಕ ಸದಸ್ಯ ಕುಪ್ಪುಡೀರ ಐ. ಕಾಳಪ್ಪ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಪೊನ್ನಂಪೇಟೆ ಅಪ್ಪಚ್ಚ ಕವಿ ವಿದ್ಯಾಲಯದ ಉಪಾಧ್ಯಕ್ಷ ಕಾಳಿಮಾಡ ಎಂ. ಮೋಟಯ್ಯ, ಪ್ರಧಾನ ಭಾಷಣಕಾರರಾಗಿ ಮೈಸೂರಿನ ಮಹಾಜನ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಎಂ.ಜಿ. ಪ್ರಭುದೇವ ಹಾಗೂ ಗೌರವ ಅತಿಥಿಗಳಾಗಿ ಜಿ.ಪಂ. ಸದಸ್ಯೆ ಅಪ್ಪಂಡೇರಂಡ ಭವ್ಯ, ವೀರಾಜಪೇಟೆ ತಾ.ಪಂ. ಉಪಾಧ್ಯಕ್ಷ ನೆಲ್ಲಿರ ಯು. ಚಲನ್ ಕುಮಾರ್, ವೀರಾಜಪೇಟೆ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಕೆ. ಪಾಂಡು ಹಾಗೂ ಬಿರುನಾಣಿ ಗ್ರಾ.ಪಂ. ಅಧ್ಯಕ್ಷ ತಂಬಿ ನಾಣಯ್ಯ ಪಾಲ್ಗೊಳ್ಳುವರು.