ಸುಳ್ಯ, ಡಿ. 11: ನಮ್ಮ ಸಂಸ್ಕøತಿ ಮತ್ತು ಸಂಸ್ಕಾರಗಳ ಹಿಂದೆ ವೈಜ್ಞಾನಿಕ ಹಿನ್ನೆಲೆ ಇದೆ. ಆದರೆ ನಮ್ಮ ಸಂಸ್ಕøತಿಯಲ್ಲಿರುವ ಕೆಲವೊಂದು ಅವೈಜ್ಞಾನಿಕ ಸಂಪ್ರದಾಯಗಳ ಬಗ್ಗೆ ಮರು ಚಿಂತನೆ ನಡೆಸಬೇಕಾದ ಅನಿವಾರ್ಯತೆಯಿದೆ ಎಂದು ಬೆಂಗಳೂರಿನ ದ.ಕ. ಮತ್ತು ಕೊಡಗು ಗೌಡ ಸಮಾಜದ ಅಧ್ಯಕ್ಷ ಪದ್ಮಾ ಕೋಲ್ಚಾರ್ ಹೇಳಿದ್ದಾರೆ.

ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಮತ್ತು ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘದ ಆಶ್ರಯದಲ್ಲಿ ಸುಳ್ಯದ ಕೊಡಿಯಾಲಬೈಲಿನ ಗೌಡ ಸಮುದಾಯ ಭವನದಲ್ಲಿ ನಡೆದ ಎರಡು ದಿನಗಳ ರಾಜ್ಯಮಟ್ಟದ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು. ತಮ್ಮತನವನ್ನು ಉಳಿಸಲು ಭಾಷೆ ಮತ್ತು ಸಂಸ್ಕøತಿ ಬೇಕು. ಸಮುದಾಯಕ್ಕೆ ಒಂದು ಭಾಷೆಯನ್ನು ಸೃಷ್ಠಿಸಲು ಹಿರಿಯರು ಎಷ್ಟು ಪ್ರಯತ್ನ ನಡೆಸಿರಬಹುದು ಎಂಬುದರ ಕಲ್ಪನೆ ಯುವ ಜನಾಂಗಕ್ಕೆ ಅಗತ್ಯವಾಗಿ ಇರಬೇಕು. ಆಂಗ್ಲರ ಭಾಷೆಗೆ ಅಡಿಯಾಳಾಗಿರುವ ನಾವು ಇಂದು ಕೃಷಿ ಸಂಸ್ಕøತಿಯಿಂದ ದೂರ ಸರಿಯುತ್ತಿದ್ದೇವೆ. ಇದರ ಪರಿಣಾಮವಾಗಿ ನಮ್ಮ ಸಂಸ್ಕøತಿಯ ಒಂದೊಂದೇ ಕೊಂಡಿ ಕಳಚಿಕೊಳ್ಳುತ್ತಿದ್ದೇವೆ ಎಂದು ಅವರು ಹೇಳಿದರು.

ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಕೊಲ್ಯದ ಗಿರೀಶ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಸ್.ಎನ್.ಮನ್ಮಥ, ಪುಷ್ಪಾವತಿ ಬಾಳಿಲ, ಎಪಿಎಂಸಿ ಅಧ್ಯಕ್ಷ ಜಾಕೆ ಮಾಧವ ಗೌಡ, ನಗರ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ವೆಂಕಪ್ಪ ಗೌಡ, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷ ಡಾ.ಹರಪ್ರಸಾದ್ ತುದಿಯಡ್ಕ, ಕೊಡಗು ಗೌಡ ಸಮಾಜದ ಒಕ್ಕೂಟದ ಅಧ್ಯಕ್ಷ ದಂಬೆಕೋಡಿ ಆನಂದ, ಮಡಿಕೇರಿ ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ, ಅರಂತೋಡು ಪಾಪ್ಯುಲರ್ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ಪಿ.ಬಿ.ದಿವಾಕರ ರೈ, ಉದ್ಯಮಿ ಅಬ್ಬಾಸ್ ಹಾಜಿ ಕಟ್ಟೆಕಾರ್ಸ್, ಪ್ರಗತಿಪರ ಕೃಷಿಕ ವಿಲಿಯಂ ಲಸ್ರಾದೋ ಅತಿಥಿಗಳಾಗಿದ್ದರು.

ಅಕಾಡೆಮಿಯ ರಿಜಿಸ್ಟ್ರಾರ್ ಉಮರಬ್ಬ, ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ದಿನೇಶ್ ಮಡಪ್ಪಾಡಿ, ಶ್ರೀ ವೆಂಕಟ್ರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಚಂದ್ರ ಕೋಲ್ಚಾರ್, ಸಮಾವೇಶದ ನಿರ್ದೇಶಕ ಡಾ.ಎನ್.ಎ.ಜ್ಞಾನೇಶ್, ಅಕಾಡೆಮಿ ಸದಸ್ಯರಾದ ಸದಾನಂದ ಮಾವಜಿ, ಡಾ.ಪೂವಪ್ಪ ಕಣಿಯೂರು, ಮದುವೆಗದ್ದೆ ಭೋಜಪ್ಪ ಗೌಡ, ಯಶವಂತ ಕುಡೆಕಲ್ಲು, ಪಿ.ಎಸ್.ಕಾರ್ಯಪ್ಪ, ಡಾ. ಕೋರನ ಸರಸ್ವತಿ,

(ಮೊದಲ ಪುಟದಿಂದ) ಮಂದ್ರಿರ ಜಿ.ಮೋಹನ್‍ದಾಸ್, ಅಣ್ಣಾಜಿ ಗೌಡ ಪೈಲೂರು, ಸಂಗೀತ ರವಿರಾಜ್, ಗೌಡ ಯುವ ಸೇವಾ ಸಂಘದ ಕಾರ್ಯದರ್ಶಿ ಮೋಹನ್‍ರಾಂ ಸುಳ್ಳಿ, ಡಾ.ಎನ್.ಎ.ಜ್ಞಾನೇಶ್, ದಾಮೋದರ ನಾರ್ಕೋಡು, ಮತ್ತಿತರರು ಉಪಸ್ಥಿತರಿದ್ದರು.

ಪಿ.ಸಿ.ಜಯರಾಮ ಸ್ವಾಗತಿಸಿ ಚಂದ್ರಶೇಖರ ಪೇರಾಲು ವಂದಿಸಿದರು. ಭವಾನಿಶಂಕರ ಅಡ್ತಲೆ ಮತ್ತು ಚಂದ್ರಮತಿ.ಕೆ.ನಿರೂಪಿಸಿದರು.

ವಿಚಾರಗೋಷ್ಠಿ

ಸಮ್ಮೇಳನದಲ್ಲಿ ಮೂರು ವಿಚಾರಗೋಷ್ಠಿಗಳು ನಡೆಯಿತು. ಅರೆಭಾಷಿಕ ಸಮುದಾಯದ ಗತಿ-ಸ್ಥಿತ್ಯಂತರ ಎಂಬ ನಡೆದ ವಿಚಾರಗೋಷ್ಠಿಯಲ್ಲಿ ಅರೆಭಾಷೆಯ ಇತಿಹಾಸ ಕುರಿತು ಡಾ.ಪೂವಪ್ಪ ಕಣಿಯೂರು ಮತ್ತು ಅರೆಭಾಷೆಯ ಗ್ರಾಮೀಣ ಸೊಗಡು ಎಂಬ ವಿಷಯದಲ್ಲಿ ಕೆ.ಆರ್.ಗಂಗಾಧರ್ ಪ್ರಬಂಧ ಮಂಡಿಸಿದರು. ಸಂಶೋಧಕ ಅನಂತರಾಜ್ ತೆಂಕಿಲ ಅಧ್ಯಕ್ಷತೆ ವಹಿಸಿದ್ದರು. ಡಾ.ಎನ್.ಎ.ಜ್ಞಾನೇಶ್ ಸ್ವಾಗತಿಸಿ ಪಿ.ಎಸ್.ಗಂಗಾಧರ ವಂದಿಸಿದರು. ಸಂಜೀವ ಕುದ್ಪಾಜೆ ನಿರೂಪಿಸಿದರು.

‘ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಸ್ಥಿತ್ಯಂತರ-ಸಾಧ್ಯತೆ ವಿಚಾರಗೋಷ್ಠಿಯಲ್ಲಿ ಸೃಜನಶೀಲ ಸಾಹಿತ್ಯ ಎಂಬ ವಿಷಯದಲ್ಲಿ ಡಾ.ಎನ್.ವಿ.ಕರುಣಾಕರ ನಿಡಿಂಜಿ, ಅರೆಭಾಷೆ ಜಾನಪದ ಸಾಹಿತ್ಯ ಎಂಬ ವಿಷಯದಲ್ಲಿ ವಿಶ್ವನಾಥ ಬದಿಕಾನ ಪ್ರಬಂಧ ಮಂಡಿಸಿದರು. ಗೋಪಾಲ ಪೆರಾಜೆ ಅಧ್ಯಕ್ಷತೆ ವಹಿಸಿದ್ದರು. ಡಾ.ಕೋರನ ಸರಸ್ವತಿ ಸ್ವಾಗತಿಸಿ, ಚಿದಾನಂದ ಕೆ.ವಂದಿಸಿದರು. ಕುಡೆಕಲ್ಲು ಸಂತೋಷ್ ಮತ್ತು ಕಿಶೋರ್‍ಕುಮಾರ್ ಕಿರ್ಲಾರ ನಿರೂಪಿಸಿದರು.

ಸಾಮಾಜಿಕ ಸ್ಥಿತ್ಯಂತರ-ಸಮಕಾಲಿನ ಸ್ಪಂದನೆ ಎಂಬ ವಿಚಾರಗೋಷ್ಠಿಯಲ್ಲಿ ಕೌಟುಂಬಿಕ ಸಂಸ್ಕøತಿ ಮತ್ತು ಮೌಲ್ಯ ಎಂಬ ವಿಷಯದಲ್ಲಿ ಎಂ.ಬಿ.ಸದಾಶಿವ, ಕೃಷಿ ಪಲ್ಲಟ ಎಂಬ ವಿಷಯದಲ್ಲಿ ಸೀತಾರಾಮ ಕೇವಳ ಪ್ರಬಂಧ ಮಂಡಿಸಿದರು. ಪ್ರೊ.ದಂಬೆಕೋಡಿ ಸುಶೀಲ ಸುಬ್ರಮಣಿ ಅಧ್ಯಕ್ಷತೆ ವಹಿಸಿದ್ದರು. ಪಿ.ಎಸ್.ಕಾರ್ಯಪ್ಪ ಸ್ವಾಗತಿಸಿ, ಜಯರಾಮ ದೇರಪ್ಪಜ್ಜನಮನೆ ವಂದಿಸಿದರು. ಅಣ್ಣಾಜಿ ಗೌಡ ಮತ್ತು ಶಶಿಧರ ಎಂ.ಜೆ. ನಿರೂಪಿಸಿದರು.

ಹಿರಿಯ ಕವಿ ಕುತ್ಯಾಳ ನಾಗಪ್ಪ ಗೌಡ ಅಧ್ಯಕ್ಷತೆಯಲ್ಲಿ ಅರೆಭಾಷೆ ಕವಿಗೋಷ್ಠಿ ನಡೆಯಿತು. ಸಂಗೀತಾ ರವಿರಾಜ್ ಸ್ವಾಗತಿಸಿ, ವಿನುತಾ ಪಾತಿಕಲ್ಲು ವಂದಿಸಿದರು. ಡಾ.ಅನುರಾಧಾ ಕುರುಂಜಿ ನಿರೂಪಿಸಿದರು.