ಬೆಂಗಳೂರು ಆ.19 : ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಐಡಿ ಪೆÇಲೀಸರು ಮಾಜಿ ಸಚಿವ ಕೆಜೆ ಜಾರ್ಜ್ ಹಾಗೂ ಐಪಿಎಸ್ ಅಧಿಕಾರಿ ಎ.ಎನ್.ಪ್ರಸಾದ್ ನೋಟಿಸ್ ಜಾರಿ ಮಾಡಿದ್ದಾರೆ. ಆಗಸ್ಟ್ 22ರಂದು ವಿಚಾರಣೆಗೆ ಹಾಜರಾಗು ವಂತೆ ಸಿಐಡಿ ಅಧಿಕಾರಿಗಳು ಸೂಚಿಸಿದ್ದು, ಪ್ರಕರಣದ ಮಾಹಿತಿ ಪಡೆಯಲಿದ್ದಾರೆ. ಆತ್ಮಹತ್ಯೆಗೆ ಮುನ್ನ ಖಾಸಗಿ ವಾಹಿನಿಗೆ ಸಂದರ್ಶನ ನೀಡಿದ್ದ ಗಣಪತಿ, ಕೆಜೆ ಜಾರ್ಜ್ ಹಾಗೂ ಪ್ರಸಾದ್ ನನಗೆ ಕಿರುಕುಳ ನೀಡಿದ್ದರು. ನನಗೆ ಏನಾದರು ಆದರೆ ಅದಕ್ಕೆ ಅವರೇ ಕಾರಣ ಎಂದು ನೇರ ಆರೋಪ ಮಾಡಿದ್ದರು.