ಕೂಡಿಗೆ, ಜೂ. 12: ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಜೋಳ ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಈ ವ್ಯಾಪ್ತಿಯ ರೈತರುಗಳು ಭೂಮಿಯನ್ನು ಹದಗೊಳಿಸಿ, ಮುಸುಕಿನ ಜೋಳದ ವಿವಿಧ ಹೈಬ್ರಿಡ್ ತಳಿಗಳನ್ನು ಬಿತ್ತನೆ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ.

ಚಿಕ್ಕತ್ತೂರು, ಸೀಗೆಹೊಸೂರು, ಸಿದ್ದಲಿಂಗಪುರ, ಬಾಣಾವರ, ಹೆಬ್ಬಾಲೆ ವ್ಯಾಪ್ತಿಗಳಲ್ಲಿ ಅತಿ ಹೆಚ್ಚು ಮುಸುಕಿನ ಜೋಳವನ್ನು ಬೆಳೆಯುವ ಪ್ರದೇಶವಾಗಿದ್ದು, ಈ ಪ್ರದೇಶದಲ್ಲಿ ಬಿತ್ತನೆಗೆ ಅನುಕೂಲವಾಗುವ ಮಳೆ ಬಿದ್ದಿರುವದರಿಂದ ರೈತರು ಬಿತ್ತನೆ ಚಟುವಟಿಕೆಯನ್ನು ಚುರುಕು ಗೊಳಿಸಿದ್ದಾರೆ.

ಮಳೆಯ ಪ್ರಮಾಣವು ಜೋಳ ಬಿತ್ತನೆಗೆ ಅಧಿಕವಾಗುವ ಮುನ್ನವೆ ಈ ವ್ಯಾಪ್ತಿಯ ರೈತರು ಜೋಳ ಬಿತ್ತನೆಯಲ್ಲಿ ತೊಡಗಿದ್ದಾರೆ.

-ಕೆ.ಕೆ.ನಾಗರಾಜಶೆಟ್ಟಿ.