*ಸಿದ್ದಾಪುರ,ಜು. 25 : ಕಸವನ್ನು ತಂದು ಅರಣ್ಯ ಪ್ರದೇಶದಲ್ಲಿ ಸುರಿದ ವಾಹನ ಚಾಲಕರಿಂದ ಐದು ಸಾವಿರ ದಂಡ ವಸೂಲಿ ಮಾಡಿದ ಪ್ರಕರಣ ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.

ನೆರೆಯ ರಾಜ್ಯದಿಂದ ಕಲ್ಲಂಗಡಿ ಹಣ್ಣುಗಳನ್ನು ಮಾರಾಟ ಮಾಡಲು ಬಂದಿದ್ದ ವಾಹನದಲ್ಲಿ ಬಾಕಿ ಉಳಿದ ಕೊಳೆತ ಹಣ್ಣುಗಳನ್ನು ಸಮೀಪದ ಮೀನುಕೊಲ್ಲಿ ಮೀಸಲು ಅರಣ್ಯದಲ್ಲಿ ಸುರಿಯುತ್ತಿದ್ದ ಸಂದರ್ಭ ಪತ್ತೆ ಹಚ್ಚಿದ ಜಿಲ್ಲಾ ಜಾಗೃತಿ ಸಮಿತಿಯ ಪ್ರಮುಖರಾದ ಸಿ.ಪಿ.ವಿಜಯ ಜತ್ತ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಭುವನೇಂದ್ರ ಗ್ರಾಮ ಪಂಚಾಯಿತಿಗೆ ಪಾವತಿಸುವಂತೆ ದಂಡವನ್ನು ವಿಧಿಸಿದ್ದಾರೆ.

ಕೋಳಿ ಮಾಂಸದ ಮಾರಾಟ ಗಾರರು ಕೋಳಿ ತ್ಯಾಜಗಳನ್ನು ಅರಣ್ಯ ಪ್ರದೇಶದಲ್ಲಿ ಸುರಿಯುತಿದ್ದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ದಂಡ ವಿಧಿಸುವ ಕ್ರಮಕ್ಕೆ ಮುಂದಾಗಿದ್ದರು ಎನ್ನಲಾಗಿದೆ.

-ವರದಿ:ಅಂಚೆಮನೆ ಸುಧಿ