ವೀರಾಜಪೇಟೆ, ಜೂ. 9: ಕಾಡು ಬೆಳೆಸಿ-ನಾಡು ಉಳಿಸಲು ಪ್ರತಿಯೊಬ್ಬರು ತಮ್ಮ-ತಮ್ಮ ಮನೆಯ ಆವರಣದಲ್ಲಿ ಗಿಡ ನೆಟ್ಟು ಪೋಷಿಸಿದರೆ ಮಾತ್ರ ನೆಲ-ಜ¯ ರಕ್ಷಣೆ ಹಾಗೂ ಸಾವಯವÀ ಕೃಷಿಗೂ ಉತ್ತಮ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಅಭಿಪ್ರಾಯ ಪಟ್ಟಿದ್ದಾರೆ.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಹಿಳೋದಯ ಮಹಿಳಾ ಒಕ್ಕೂಟ ಓ.ಡಿ.ಪಿ. ಸಂಸ್ಥೆ ವತಿಯಿಂದ ವೀರಾಜಪೇಟೆ ಸಮೀಪದ ಹೆಗ್ಗಳ ಗ್ರಾಮದ ಎಡಮಕ್ಕಿ ಸಮುದಾಯ ಭವನದ ಆವರಣದಲ್ಲಿ ಸ್ವಸಹಾಯ ಸಂಘಗಳಿಗೆ ಗಿಡ ವಿತರಣೆ ಹಾಗೂ ನೆಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಹೇಶ್, ಗಿಡ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಮಾತನಾಡಿ, ಉಸಿರಾಡಲು ಕೂಡ ಗಿಡ-ಮರಗಳ ಅವಶ್ಯಕತೆಯಿದ್ದು, ಕಾಡನ್ನು ರಕ್ಷಿಸಿದರೆ ಮಳೆಯು ಹೆಚ್ಚಾಗಿ ಜೀವರಾಶಿಗಳು, ಕೃಷಿಕರಿಗೂ ಹಾಗೂ ಕುಡಿಯುವ ನೀರಿಗೂ ಅನುಕೂಲವಾಗಲಿದೆ. ಓ.ಡಿ.ಪಿ. ಸಂಸ್ಥೆ ಹಮ್ಮಿಕೊಂಡಿರುವ ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಲಿ ಎಂದರು.

ಓ.ಡಿ.ಪಿ. ಸಂಸ್ಥೆಯ ಮಹಿಳಾ ಅಭಿವೃದ್ಧಿ ಮೈಸೂರು ವಿಭಾಗದ ಸಂಯೋಜಕಿ ಮೋಲಿ ಪುಡ್ತಾದೊ ಮಾತನಾಡಿ, ಕೊಡಗಿನಲ್ಲಿ ಹೆಚ್ಚು ಅರಣ್ಯಗಳಿದ್ದು ಇಲ್ಲಿನ ಜನರು ಅದೃಷ್ಟವಂತರು. ಆದರೆ ದೊಡ್ಡ ನಗರಗಳಲ್ಲಿ ಗಿಡ ನೆಡುವದಕ್ಕಾಗಲಿ ಮರ ಬೆಳೆಸಬೇಕಾದರೂ ಕಷ್ಟಕರ ಎಂದರಲ್ಲದೆ ನಮ್ಮ ಪೂರ್ವಜರು ಉಳಿಸಿರುವಂತ ಪರಿಸರವನ್ನು ಉಳಿಸಿ ಬೆಳೆಸಬೇಕು. ಹಾಗೆ ಮಳೆಯ ನೀರನ್ನು ಹರಿಯಲು ಬಿಡದೆ ಇಂಗು ಗುಂಡಿಯನ್ನು ತೋಡಿ ನೀರಿನ ಸಂರಕ್ಷಣೆಗಾಗಿ ಒತ್ತು ನೀಡಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಓ.ಡಿ.ಪಿ. ಸಂಸ್ಥೆಯ ಜಿಲ್ಲಾ ಸಂಯೋಜಕಿ ಜಾಯ್ಸ್ ಮೆನೆಜಸ್ ಮಾತನಾಡಿ, ಈ ಗ್ರಾಮದಲ್ಲಿ 20 ಮಹಿಳಾ ಸ್ವಸಹಾಯ ಸಂಘಗಳಿಗೆ ಗಿಡಗಳನ್ನು ವಿತರಣೆ ಮಡಲಾಗಿದ್ದು, ಪರಿಸರ ಉಳಿಸುವದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.

ಈ ಸಂದರ್ಭ ಬೇಟೋಳಿ ಗ್ರಾಮ ಪಂಚಾಯಿತಿ ಸದಸ್ಯೆ ಟಿ.ಎನ್. ಲೀಲಾವತಿ, ಕೇಂದ್ರ ಸಮಿತಿ ಅಧ್ಯಕ್ಷೆ ಮಂಜುಳಾ, ಓ.ಡಿ.ಪಿ. ಕಾರ್ಯಕರ್ತೆ ರೀಟಾ ಜೋಸೆಫ್ ಮಾತನಾಡಿದರು. ಒಕ್ಕೂಟದ ಸದಸ್ಯೆ ಶಾಲಿನಿ ಸ್ವಾಗತಿಸಿದರೆ, ರೀಟಾ ವಂದಿಸಿದರು.