ಸೋಮವಾರಪೇಟ / ಮಡಿಕೇರಿ, ಆ. 22: ಪಾಕಿಸ್ತಾನದ ಜನರು ಉತ್ತಮರು ಎಂದು ಶ್ಲಾಘನೀಯ ಮಾತುಗಳನ್ನಾ ಡಿರುವ ಮಾಜಿ ಸಂಸದೆ ಹಾಗೂ ಚಿತ್ರನಟಿ ರಮ್ಯಾ ವಿರುದ್ಧ ಕೊಡಗು ಪ್ರಜಾರಂಗದ ಜಿಲ್ಲಾಧ್ಯಕ್ಷ ಹಾಗೂ ವಕೀಲ ಕಾಟ್ನಮನೆ ವಿಠಲ ಗೌಡ ಅವರು ದೇಶ ದ್ರೋಹ ಮತ್ತು ದೊಂಬಿಗೆ ಪ್ರಚೋದನೆ ನೀಡಿದ ಆರೋಪದಡಿ ಸೋಮವಾರಪೇಟೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಮ್ಯಾ ವಿರುದ್ಧ ನೀಡಿರುವ ದೂರಿನ ವಿಚಾರಣೆ ತಾ. 27 ರಂದು ನಡೆಯಲಿದೆಯೆಂದು ತಿಳಿಸಿದರು. ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಪಾಕಿಸ್ತಾನವನ್ನು ನರಕವೆಂದು ಅಭಿಪ್ರಾಯಪಟ್ಟಿರುವಾಗ ಇದಕ್ಕೆ ವಿರುದ್ಧವಾಗಿ ರಮ್ಯಾ ಶ್ಲಾಘಿಸಿರುವದು 124 ಎ ನಿಯಮದಡಿ ದೇಶ ದ್ರೋಹ ಮತ್ತು ರಮ್ಯಾ ಅವರ ಕ್ರಮವನ್ನು ಖಂಡಿಸಿ ಪ್ರತಿಭಟನೆಗಳು ನಡೆಯುತ್ತಿರುವ ದರಿಂದ ಸೆಕ್ಷನ್ 334ರಡಿ ದೊಂಬಿಗೆ ಪ್ರಚೋದನೆ ನೀಡಿ ದಂತಾಗಿದ್ದು, ಈ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದರು.

ನ್ಯಾಯಾಲಯಕ್ಕೆ ದೃಶ್ಯ ವಾಹಿನಿಗಳಲ್ಲಿ ಪ್ರಸಾರವಾದ ತುಣುಕುಗಳು ಹಾಗೂ ಪತ್ರಿಕೆಗಳನ್ನು ನೀಡಲಾಗಿದೆ ಎಂದರು. ಕನ್ನಡ ಮಾತನಾಡಲು ನಾಚಿಕೆ ಪಡುವ ರಮ್ಯಾ, ಪಾಕಿಸ್ತಾನವನ್ನು ಹೊಗಳಿದ್ದಾರೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗವಾಗಿದೆ. ಭಾರತೀಯ ಸೈನಿಕರನ್ನು ಹತ್ಯೆ ಮಾಡುತ್ತಿರುವ ಮತ್ತು ಬೆನ್ನಿಗೆ ಚೂರಿ ಇರಿಯುತ್ತಿರುವ ಪಾಕಿಸ್ತಾನವನ್ನು ಹಾಡಿ ಹೊಗಳಿರುವದು ರಾಷ್ಟ್ರ ವಿರೋಧಿ ಧೋರಣೆಯಾಗಿದೆ. ದೇಶದ ಜನತೆ ರಮ್ಯಾ ಅವರ ಚಲನಚಿತ್ರಗಳನ್ನು ಬಹಿಷ್ಕರಿಸಬೇಕು ಮತ್ತು ಕಾಂಗ್ರೆಸ್ ಪಕ್ಷ ರಮ್ಯಾ ಅವರನ್ನು ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸ ಬೇಕೆಂದು ವಿಠಲ್ ಗೌಡ ಒತ್ತಾಯಿಸಿದರು.

ಯುವ ಸಮೂಹ ರಮ್ಯಾರಂತಹ ದೇಶ ದ್ರೋಹಿಗಳನ್ನು ರೋಲ್ ಮಾಡೆಲ್ ಮಾಡಿಕೊಳ್ಳದೆ ಆದರ್ಶ ವ್ಯಕ್ತಿತ್ವದ ಸುಧಾಮೂರ್ತಿ ಯವರನ್ನು ರೋಲ್ ಮಾಡೆಲ್ ಮಾಡಿಕೊಳ್ಳಲೆಂದು ಕರೆ ನೀಡಿದರು. ಉನ್ನತ ವ್ಯಾಸಂಗ ಮಾಡಿದವರಿಗೆ ರಾಜಕೀಯ ಕ್ಷೇತ್ರದಲ್ಲಿ ಯಾವದೇ ಅವಕಾಶಗಳು ದೊರೆಯುತ್ತಿಲ್ಲ. ಅವಿದ್ಯಾವಂತರು ಹಾಗೂ ಸಾಮಾನ್ಯ ಜ್ಞಾನ ಇಲ್ಲದವರು ರಾಜಕೀಯ ನಾಯಕರು ಗಳಾಗುತ್ತಿದ್ದು, ಯುವ ಸಮೂಹ ಎಚ್ಚೆತ್ತುಕೊಳ್ಳಬೇಕಿದೆ ಎಂದು ವಿಠಲ್ ಗೌಡ ಕರೆ ನೀಡಿದರು.

ಸೋಮವಾರಪೇಟೆ ವರದಿ : ಇಲ್ಲಿನ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳಿಗೆ ಸೋಮವಾರ ಖಾಸಗಿ ದೂರು ಸಲ್ಲಿಸಿರುವ ವಿಠಲ್ ಗೌಡ ಅವರು, ರಾಷ್ಟ್ರದ್ರೋಹ, ಶಾಂತಿಭಂಗಕ್ಕೆ ಪ್ರಚೋಧನೆಗೆ ಸಂಬಂಧಪಟ್ಟಂತೆ ಐಪಿಸಿ 124(ಎ), 344, 511 ಸೆಕ್ಷನ್‍ಗಳನ್ನು ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಅರ್ಜಿಯಲ್ಲಿ ತಿಳಿಸಿದ್ದಾರೆ. “ಪಾಕಿಸ್ತಾನ ಪಾಪಿಸ್ತಾನ ಅಲ್ಲ, ನರಕವೂ ಅಲ್ಲ, ಅದೊಂದು ಒಳ್ಳೆಯ ದೇಶ, ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿರುವಂತೆ ಪಾಕಿಸ್ತಾನಕ್ಕೆ ಹೋದರೆ ನರಕ ಎಂಬದು ಶುದ್ಧ ಸುಳ್ಳು, ಅಲ್ಲಿರುವ ಜನ ನಮ್ಮ ತರಹ ಇದ್ದಾರೆ. ಚೆನ್ನಾಗಿ ಮಾತನಾಡಿಸುತ್ತಾರೆ” ಎಂಬ ಹೇಳಿಕೆ ದೇಶಪ್ರೇಮಿ ಗಳನ್ನು ಅವಮಾನ ಮಾಡುವಂತಿದೆ. ಈ ಹೇಳಿಕೆ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಗಳೂ ನಡೆದಿವೆ. ಇಂತಹ ಹೇಳಿಕೆ ರಾಷ್ಟ್ರದ್ರೋಹ, ಶಾಂತಿಭಂಗಕ್ಕೆ ಪ್ರಚೋದನೆ ನೀಡುವಂತಿದೆ. ಈ ಹಿನ್ನೆಲೆ ರಮ್ಯ ಅಲಿಯಾಸ್ ದಿವ್ಯ ಸ್ಪಂದನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ವಿಠಲ್‍ಗೌಡ ಅವರ ದೂರು ಸ್ವೀಕರಿಸಿರುವ ನ್ಯಾಯಾಧೀಶರಾದÀ ಶ್ಯಾಂ ಪ್ರಕಾಶ್ ಅವರು ವಿಚಾರಣೆ ಯನ್ನು ತಾ.27ಕ್ಕೆ ನಿಗದಿಪಡಿಸಿದ್ದು, ಅರ್ಜಿ ವಿಚಾರಣೆಗೆ ಹಾಜರಾಗುವಂತೆ ದೂರುದಾರರಿಗೆ ತಿಳಿಸಿದ್ದಾರೆ.