ಮಡಿಕೇರಿ, ಜೂ. 18: ಸಮಾಜದ ವಿವಿಧ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ವ್ಯಕ್ತಿಗಳಿಗೆ 2017ನೇ ಸಾಲಿನ ಪದ್ಮ ಶ್ರೇಣಿಯ ಪ್ರಶಸ್ತಿಗಳಾದ ಪದ್ಮ ವಿಭೂಷಣ, ಪದ್ಮ ಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಕಲೆ(ಜನಪ್ರಿಯ ಕಲೆ, ಸಂಗೀತ, ಚಿತ್ರಕಲೆ, ವಾಸ್ತು ಶಿಲ್ಪ, ಶಿಲ್ಪ ಕಲೆ, ಚಲನಚಿತ್ರ, ಛಾಯಾಗ್ರಹಣ ಮತ್ತಿತರ), ಸಮಾಜ ಕಾರ್ಯ (ಸಮಾಜ ಸೇವೆ, ಧರ್ಮಾರ್ಥ ಸೇವೆ, ಸಮುದಾಯ ಯೋಜನೆಯ ನಿಮಿತ್ತದ ಕೊಡುಗೆ ಒಳಗೊಂಡಂತೆ). ಸಾರ್ವಜನಿಕ ವ್ಯವಹಾರ (ಕಾನೂನು ಮತ್ತು ಸಾರ್ವಜನಿಕ ಜೀವನ ರಾಜಕೀಯ ಇತ್ಯಾದಿ), ವಿಜ್ಞಾನ, ತಾಂತ್ರಿಕ, ತಂತ್ರಜ್ಞಾನ ಮತ್ತು ಇತರ ಗೌರವಾನ್ವಿತ ವೃತ್ತಿ (ಬಾಹ್ಯಾಕಾಶ, ಇಂಜಿನಿಯರಿಂಗ್, ಅಣು ವಿಜ್ಞಾನ, ಮಾಹಿತಿ ತಂತ್ರಜ್ಞಾನ, ಸಂಶೋಧನೆ ಇತ್ಯಾದಿ), ವ್ಯಾಪಾರ ಮತ್ತು ಕೈಗಾರಿಕೆ (ಬ್ಯಾಂಕಿಂಗ್, ಆರ್ಥಿಕ ಚಟುವಟಿಕೆ, ಮ್ಯಾನೇಜ್‍ಮೆಂಟ್, ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ವಾಣಿಜ್ಯ ಒಳಗೊಂಡಂತೆ, ವೈದ್ಯಕೀಯ (ವೈದ್ಯಕೀಯ ಸಂಶೋಧನೆ ಆಯುರ್ವೇದದಲ್ಲಿ ಕುಶಲತೆ, ಹೋಮಿಯೋಪತಿ, ಸಿದ್ಧ ಅಲೋಪತಿ, ನ್ಯಾಚುರೋಪತಿ. ಸಾಹಿತ್ಯ ಮತ್ತು ಶಿಕ್ಷಣ (ಪತ್ರಿಕೋದ್ಯಮ, ಬೋಧನೆ, ಪುಸ್ತಕ ಬರೆಯುವಿಕೆ, ಸಾಹಿತ್ಯ, ವೈದ್ಯ, ಶಿಕ್ಷಣ ಅಭಿವೃದ್ಧಿ, ಸುಧಾರಣೆ ಇತ್ಯಾದಿ), ನಾಗರಿಕ ಸೇವೆ (ಆಡಳಿತದಲ್ಲಿ ಸರ್ಕಾರಿ ನೌಕರರು ಸಾಧಿಸಿರುವ ಶ್ರೇಷ್ಠತೆ), ಕ್ರೀಡೆ, ಅಥ್ಲೆಟಿಕ್ಸ್, ಸಾಹಸ ಕ್ರೀಡೆ ಮತ್ತು ಯೋಗ ಹಾಗೂ ಇತರೆ ಕ್ಷೇತ್ರಗಳು ಮಾನವ ಹಕ್ಕುಗಳು ಸಂರಕ್ಷಣೆ, ಭಾರತ ಸಂಸ್ಕøತಿಯ ಪ್ರಚಾರ, ಪರಿಸರ ಸಂರಕ್ಷಣೆ ಮತ್ತು ವನ್ಯಮೃಗ ಸಂರಕ್ಷಣೆ ಒಳಗೊಂಡಂತೆ ಅರ್ಹ ವ್ಯಕ್ತಿಗಳನ್ನು ಪದ್ಮಶ್ರೇಣಿಯ ಪ್ರಶಸ್ತಿಗೆ ಅರ್ಹರಿದ್ದಾರೆ.

ಅರ್ಜಿದಾರರು ತಾ. 30 ರೊಳಗೆ ಜಿಲ್ಲಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್ ತಿಳಿಸಿದ್ದಾರೆ.