ವತಿಯಿಂದ ಆಯೋಜಿಸಲಾಗಿದ್ದ ಪರಿಸರಸ್ನೇಹಿ ಗಣಪ ಕುರಿತು ವಿಚಾರ ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವರ್ಷ ಋತು ಕಾಲವಾದ ಭಾದ್ರಪದ ಮಾಸದಲ್ಲಿಯೇ ಗಣಪತಿ ಪ್ರತಿಷ್ಠಾಪಿಸಿ ಆರಾಧಿಸುವ ಮೂಲಕ ಪ್ರಕೃತಿ ದೇವರಾಗಿರುವ ಗಣೇಶನಿಗೆ ಪೂಜೆ, ಪುನಸ್ಕಾರ ಸಲ್ಲುತ್ತದೆ. ಆದರೆ, ಪ್ಲಾಸ್ಟರ್ ಆಫ್ ಪ್ಯಾರಿಸ್‍ನಿಂದ ತಯಾರಿಸಲ್ಪಟ್ಟ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ ಕೃತಕವಾಗಿ ಗಣಪತಿಯನ್ನು ಪೂಜಿಸುತ್ತಿದ್ದೇವೆ. ಗಣಪತಿ ಮೂರ್ತಿಗೆ ಹಚ್ಚುವ ಬಣ್ಣ ಕೂಡ ಅತ್ಯಂತ ವಿಷಕಾರಿಯಾಗಿರುತ್ತದೆ ಎಂದು ಎಚ್ಚರಿಸಿದರು. ಕೆರೆ, ನದಿಯಲ್ಲಿ ಬೇಕಾ ಬಿಟ್ಟಿಯಾಗಿ ಗೌರಿಗಣೇಶ ಮೂರ್ತಿ ವಿಸರ್ಜಿಸಿ

ದೇವರಿಗೆ ಭಾರಿ ಅಪಚಾರ ಮಾಡಲಾಗುತ್ತಿದೆ ಎಂದು ಟೀಕಿಸಿದ ರಾಮ ದಾಸ್, ನಮ್ಮ ಪೂರ್ವಿಕರು ಮಣ್ಣು, ಸಗಣಿ, ಅರಿಶಿಣದಿಂದ ತಯಾರಿಸಿದ ಗಣಪತಿ ಮೂರ್ತಿಗೆ ಆದ್ಯತೆ ನೀಡುತ್ತಿದ್ದರು. ಆದರೆ ಜೀವನಶೈಲಿ ಬದಲಾಗುತ್ತಿರುವಂತೆಯೇ ಈಗಿನ ಸಮಾಜ ಕೃತಕವಾಗಿ, ರಾಸಾಯನಿಕ ಅಂಶಗಳಿಂದ ತಯಾರಿಸಿದ ದೇವರ ಮೂರ್ತಿಗೆ ಆದ್ಯತೆ ನೀಡುತ್ತಿರುವದು ವಿಷಾದನೀಯ ಎಂದರು.

ಮೊದಲೆಲ್ಲಾ ಗಣೇಶೋತ್ಸವ ಗಳಂದು ಕೇಳಿಬರುತ್ತಿದ್ದ ಭಕ್ತಿಗೀತೆಗಳು, ಹರಿಕಥೆಯಂಥ ಧಾರ್ಮಿಕ ಕಾರ್ಯಕ್ರಮಗಳ ಬದಲಿಗೆ ಡಿ.ಜೆ. ಅಬ್ಬರದಲ್ಲಿ ಇಂದು ಪಾಶ್ಚಾತ್ಯ ಸಂಸ್ಕøತಿಯನ್ನು ಅನುಸರಿಸುತ್ತಿರುವದು ಯಾವ ಸಾರ್ಥಕತೆಗೆ ಎಂದು ಪ್ರಶ್ನಿಸಿದ ರಾಮ ದಾಸ್, ಇಂಥ ಶಬ್ದ ಮಾಲಿನ್ಯವನ್ನೂ ದೇವರು ಕೂಡ ಸಹಿಸಲಾರ ಎಂದು ವ್ಯಂಗ್ಯವಾಡಿದರು.

ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪನೆ ಇಲ್ಲದೇ ಹೋದರೆ ಸಾರ್ವಜನಿಕರು ವಂತಿಕೆ ನೀಡುವದಿಲ್ಲ ಎಂಬ ಪಣ ತೊಟ್ಟರೆ ಮುಂದಿನ ವರ್ಷಗಳಲ್ಲಾದರೂ ಪರಿಸರ ಸ್ನೇಹಿ ಗಣಪನ ಮೂರ್ತಿಗಳ ಪ್ರತಿಷ್ಠಾಪನೆ ಹೆಚ್ಚಾದೀತು ಎಂದು ರಾಮ ದಾಸ್ ಆಶಾಭಾವನೆ ವ್ಯಕ್ತಪಡಿಸಿದರು. ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಮಾತನಾಡಿ, ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಸಂಬಂಧಿತ ಈ ವರ್ಷದಿಂದಲೇ ಮಿಸ್ಟಿ ಹಿಲ್ಸ್ ವತಿಯಿಂದ ಜಾಗೃತಿ ಅಭಿಯಾನ ಪ್ರಾರಂಭಿಸಲಾಗುತ್ತದೆ ಎಂದು ಹೇಳಿದರು.