ಮಡಿಕೇರಿ, ಜೂ. 9: ಪ್ರವಾಸಿಗರನ್ನು ಕೊಂಡೊಯ್ಯುವ ಕಾರುಗಳಿಗೆ ಸ್ಪೀಡ್ ಗವರ್ನರ್ ಅಳವಡಿಸಬೇಕು ಎಂಬ ಸಾರಿಗೆ ಇಲಾಖೆಯ ಕ್ರಮದ ವಿರುದ್ಧ ಇಂದು ಮಡಿಕೇರಿ ಪ್ರವಾಸಿಗರ ಕಾರು ಮಾಲೀಕರ ಹಾಗೂ ಚಾಲಕರ ಸಂಘ ಸದಸ್ಯರು ಪದಾಧಿಕಾರಿಗಳು ಅಧ್ಯಕ್ಷ ಕುಳಿಯಕಂಡ ಸಂಪತ್ ನೇತೃತ್ವದಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿಗೆ ತೆರಳಿ ಆರ್‍ಟಿಓ ರಾಮಕೃಷ್ಣ ಅಯ್ಯಂಗಾರ್ ಅವರಿಗೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿ ಮಾತನಾಡಿದ ಸಂಪತ್, ಉಪಾಧ್ಯಕ್ಷ ಎನ್. ಜಯಕುಮಾರ್, ಕಾರ್ಯದರ್ಶಿ ಸಂತು ಕಾರ್ಯಪ್ಪ ಹಾಗೂ ಗೌರವಾಧ್ಯಕ್ಷ ಆವಿಸೋನ್ಸ್ ಹಾಗೂ ಪದಾಧಿಕಾರಿಗಳು ಬೆಂಗಳೂರಿನಂತಹ ಮಹಾನಗರಗಳಲ್ಲಿ ಲೈಟ್ ಮೋಟಾರ್ ವಾಹನಗಳಿಗೆ ಸ್ಪೀಡ್ ಗವರ್ನರ್ ಅಳವಡಿಸಬೇಕೆಂಬ ಕಾನೂನು ಇಲ್ಲದಿದ್ದರೂ ಕೊಡಗಿನಲ್ಲಿ ಮಾತ್ರ ಸ್ಪೀಡ್ ಗವರ್ನರ್ ಅಳವಡಿಕೆ ಕಡ್ಡಾಯ ಮಾಡಿರುವದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಎಫ್‍ಸಿ ಮಾಡಿಸಲು ಬರುವ ವಾಹನಗಳಿಗೆ ಸ್ಪೀಡ್ ಗವರ್ನರ್ ಅಳವಡಿಸಿಲ್ಲ ಎಂಬ ಕಾರಣಕ್ಕೆ ತಡೆಯೊಡ್ಡುವದು ಸಮಂಜಸವಲ್ಲ ಆದ್ದರಿಂದ ಈ