ಮಡಿಕೇರಿ, ಜೂ. 9: ತಡವಾಗಿ ಆರಂಭವಾದ ಮುಂಗಾರು ಇದೀಗ ಚೇತರಿಸಿಕೊಂಡಿದ್ದು, ಜಿಲ್ಲೆಗೆ ಮಳೆಗಾಲ ಕಾಲಿಟ್ಟಂತಾಗಿದೆ. ಕಳೆದ ಮೂರು ದಿನಗಳಿಂದ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ಮಳೆಗಾಲ ಆರಂಭಗೊಂಡ ಸೂಚನೆಗಳು ಕಂಡು ಬರುತ್ತಿವೆ.

ಕಳೆದ ಮೂರು ದಿನಗಳಿಂದ ಜಿಲ್ಲೆಯಾದ್ಯಂತ ಎಲ್ಲ ಕಡೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ನಿನ್ನೆ ಮಧ್ಯಾಹ್ನ ನಂತರ ಆರಂಭಗೊಂಡ ಮಳೆ ಇಂದು ಬೆಳಿಗ್ಗೆ ತನಕ ಸುರಿದಿದೆ. ಇಂದೂ ಕೂಡ ಮಧ್ಯಾಹ್ನ ನಂತರ ಮಳೆಯಾಗಿದೆ. ತಾ. 7 ರಿಂದ ಮೃಗಶಿರ ಮಳೆ ಆರಂಭಗೊಂಡಿದ್ದು, ಆರಂಭದಲ್ಲಿಯೇ ತನ್ನ ಬಿರುಸು ತೋರುತ್ತಿದೆ. ತಾ. 21ರವರೆಗೆ ಮೃಗಶಿರ ಸುರಿಯಲಿದ್ದು, 21 ರಿಂದ ಆದ್ರಾ ತನ್ನ ಆರ್ಭಟ ತೋರಲಿದೆ.

ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ತಾ. 10 ರಿಂದ (ಇಂದಿನಿಂದ) ಕೇರಳಕ್ಕೆ ಮುಂಗಾರು ಪ್ರವಶಿಸಲಿದೆ ಎಂದು ಹೇಳಲಾಗಿತ್ತು. ಆದರೆ, ಇದೀಗ ಕೇರಳದಲ್ಲೂ ಮಳೆಯಾಗುತ್ತಿದ್ದು, ಜಿಲ್ಲೆಯಲ್ಲಿ ಮಳೆಗಾಲ ಆರಂಭಗೊಂಡಿದೆ. ಈ ಸಾಲಿನಲ್ಲಿ ಅಧಿಕ ಮಳೆಯಾಗು ವದಾಗಿ ಹವಾಮಾನ ಇಲಾಖೆ ವರದಿ ಹೇಳಿದ್ದು, ಈಗಾಗಲೇ ಇದರ ಮುನ್ಸೂಚನೆ ಗೋಚರಿಸಿದೆ. ಜಿಲ್ಲೆಯಾದ್ಯಂತ ಕಳೆದ 24 ಗಂಟೆಗಳಲ್ಲಿ 1.28 ಇಂಚು ಮಳೆಯಾಗಿದೆ. ಜನವರಿಯಿಂದ ಇಲ್ಲಿಯವರೆಗೆ