ಕುಶಾಲನಗರ, ಜೂ. 10: ಕುಶಾಲನಗರ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ಸಾಧಾರಣ ಮಳೆಯಾಗುತ್ತಿದ್ದು ತಂಪಾದ ವಾತಾವರಣ ಸೃಷ್ಟಿಯಾಗಿದೆ. ಕುಶಾಲನಗರ, ಕೊಪ್ಪ ಮೂಲಕ ಹರಿಯುತ್ತಿರುವ ಕಾವೇರಿ ನದಿಯಲ್ಲಿ ನೀರಿನ ಹರಿವು ಏರಿಕೆ ಕಂಡುಬಂದಿದೆ. ಸಂಪೂರ್ಣ ಹರಿವು ಸ್ಥಗಿತಗೊಂಡ ಕಾವೇರಿಯಲ್ಲಿ ಇದೀಗ 1 ಮೀಟರ್ ಪ್ರಮಾಣ ನೀರಿನ ಹರಿವು ಏರಿಕೆಯಾಗಿದೆ.

ಕುಶಾಲನಗರ ವ್ಯಾಪ್ತಿಯಲ್ಲಿ ಎರಡು ದಿನಗಳ ಅವಧಿಯಲ್ಲಿ 34.5 ಮಿಮೀ ಪ್ರಮಾಣದ ಮಳೆ ಸುರಿದಿದೆ. ಕಾವೇರಿ ನದಿ ನೀರಿನ ಬಣ್ಣ ಸಂಪೂರ್ಣ ಕೆಂಪು ವರ್ಣಕ್ಕೆ ತಿರುಗಿದ್ದು ಕಲುಷಿv Àಗೊಂಡಂತೆ ಗೋಚರಿಸಿದೆ. ಹಾರಂಗಿ ಜಲಾಶಯಕ್ಕೆ 108 ಕ್ಯೂಸೆಕ್ಸ್ ಪ್ರಮಾಣದ ನೀರಿನ ಒಳಹರಿವು ಬರುತ್ತಿದ್ದು ಶುಕ್ರವಾರ 6.6 ಮಿಮೀ ಪ್ರಮಾಣದ ಮಳೆಯಾಗಿದೆ.

ಜಲಾಶಯದ ನೀರಿನ ಗರಿಷ್ಠ ಮಟ್ಟ 2859 ಅಡಿಗಳಾಗಿದ್ದು ಶುಕ್ರವಾರ ಸಂಜೆ ವೇಳೆಗೆ 2797.77 ಅಡಿಗಳಷ್ಟು ನೀರಿನ ಸಂಗ್ರಹವಿದ್ದು 1.13 ಟಿಎಂಸಿ ಇರುವ ಬಗ್ಗೆ ಹಾರಂಗಿ ಅಣೆಕಟ್ಟೆ ವಿಭಾಗದ ಮೂಲಗಳು ತಿಳಿಸಿವೆ. ಕಳೆದ ಸಾಲಿನಲ್ಲಿ ಇದೇ ಸಂದರ್ಭ ಜಲಾಶಯದಲ್ಲಿ 1.5 ಟಿಎಂಸಿ ಪ್ರಮಾಣದ ನೀರಿನ ಸಂಗ್ರಹ ಕಂಡುಬಂದಿತ್ತು.