ಗೋಣಿಕೊಪ್ಪಲು, ಜೂ. 12: ಪೊನ್ನಂಪೇಟೆ, ಗೋಣಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳುವದು ನಮ್ಮ ಮೊದಲ ಆದÀ್ಯತೆ ಎಂದು ಗೋಣಿಕೊಪ್ಪ, ಹಾಗೂ ಪೊನ್ನಂಪೇಟೆ ಗ್ರಾಮ ಪಂಚಾಯಿತಿಯ ಅಧ್ಯಕ್ಷ, ಉಪಾಧ್ಯಕ್ಷರು ಭರವಸೆ ನೀಡಿದರು.

ಗೋಣಿಕೊಪ್ಪಲು ಪ್ರೆಸ್ ಕ್ಲಬ್ ವತಿಯಿಂದ ಗೋಣಿಕೊಪ್ಪಲು ಹಾಗೂ ಪೊನ್ನಂಪೇಟೆ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರೊಂದಿಗೆ ನಡೆಸಿದ ಮುಕ್ತ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಸ ವಿಲೇವಾರಿಯಾಗದ ಕಾರಣ ಪಟ್ಟಣದಲ್ಲಿ ದೊಡ್ಡ ಸಮಸ್ಯೆ ಎದುರಾಗಿದೆ. ಈ ಬಗ್ಗೆ ಶೀಘ್ರದಲ್ಲಿ ಸಭೆ ಕರೆದು ಇಂತಿಷ್ಟು ದಿನಗಳಲ್ಲಿ ಪರಿಹಾರ ಕಂಡುಕೊಳ್ಳುವ ಬಗ್ಗೆ ತಿಳಿಸಲಾಗುವದು ಎಂದು ಅಧ್ಯಕ್ಷೆ ಸೆಲ್ವಿ ಹಾಗೂ ಉಪಾಧ್ಯಕ್ಷೆ ಕಾವ್ಯ ಹೇಳಿದರು.

ಕಸ ಸಮಸ್ಯೆ 3 ತಿಂಗಳಲ್ಲಿ ಬಗೆಹರಿಯುವ ಸಾಧ್ಯತೆ ಇದೆ. ಹಳ್ಳಿಗಟ್ಟುವಿನಲ್ಲಿ ನಡೆಯುತ್ತಿರುವ ಕಸ ವಿಲೇವಾರಿ ಜಾಗದಲ್ಲಿ ಕಾಮಗಾರಿ 3 ತಿಂಗಳಿನಲ್ಲಿ ಮುಗಿಯಲಿದೆ ಎಂದು ಪೊನ್ನಂಪೇಟೆ ಗ್ರಾ.ಪಂ. ಅಧ್ಯಕ್ಷೆ ಮೂಕಳೇರ ಸುಮಿತ ಹೇಳಿದರು.

ಬಹುಮತ ಹೊಂದಿರುವ ಕಾಂಗ್ರೆಸ್ ಬೆಂಬಲಿತ ಸದಸ್ಯರು ಬಿಜೆಪಿ ಬೆಂಬಲಿತ ಸದಸ್ಯರಾಗಿರುವ ಅಧ್ಯಕ್ಷ, ಉಪಾಧ್ಯಕ್ಷರಿಗೆ ಬೆಂಬಲ ನೀಡುವ ವಿಶ್ವಾಸ ನಮಗಿದೆ. ಈ ಬಗ್ಗೆ ಅವರು ಕೂಡ ನಮಗೆ ದೃಢsÀಪಡಿಸಿದ್ದಾರೆ. ಧನಾತ್ಮಕ ಚಿಂತನೆ ಅಭಿವೃದ್ಧಿಗೆ ಸಹಕರಿಸಲಿದೆ ಎಂದು ಗೋಣಿಕೊಪ್ಪ ಗ್ರಾ.ಪಂ. ಉಪಾಧ್ಯಕ್ಷೆ ಹೆಮ್ಮಚ್ಚಿಮನೆ ಕಾವ್ಯ ಅಶ್ವತ್ ವಿಶ್ವಾಸ ವ್ಯಕ್ತಪಡಿಸಿದರು.

ಪೊನ್ನಂಪೇಟೆ ಗ್ರಾ.ಪಂ. ಅಧ್ಯಕ್ಷೆ ಮೂಕಳೇರ ಸುಮಿತ ಮಾತನಾಡಿ, ಪೊನ್ನಂಪೇಟೆ ವ್ಯಾಪ್ತಿಯಲ್ಲಿ ಕುಡಿಯುವ ನೀರು ಹಾಗೂ ಬೀದಿ ದೀಪ ರಿಪೇರಿ ದೊಡ್ಡ ಸಮಸ್ಯೆಯಾಗಿದೆ. ದೀಪ ಹಾಳಾಗುವದಕ್ಕೆ ಕಾರಣ ತಿಳಿದಿಲ್ಲ. ಪಂಚಾಯಿತಿಯಿಂದ ಟ್ಯಾಂಕರ್ ಖರೀದಿಸಿ ನೀರು ಹಂಚುವ ಕೆಲಸಕ್ಕೆ ಮುಂದಾಗಿದ್ದೇವೆ ಎಂದರು.

ಸಿಸಿ ಕ್ಯಾಮೆರಾಯುಕ್ತ ಗೋಣಿಕೊಪ್ಪ ಪಟ್ಟಣ ಎಂಬ ಪೊಲೀಸ್ ಇಲಾಖೆಯ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡಲಾಗುವದು. ಪ್ಲಾಸ್ಟಿಕ್ ಬಳಕೆಯನ್ನು ಸ್ವತಃ ಪಂಚಾಯಿತಿ ಸದಸ್ಯರೇ ತ್ಯಜಿಸುವ ಮೂಲಕ ಸಾರ್ವಜನಿಕರಿಗೆ ಪ್ಲಾಸ್ಟಿಕ್ ಬಳಕೆ ನಿಷೇಧಿಸುವಂತೆ ಕಾರ್ಯಕ್ರಮ ರೂಪಿಸುವದಾಗಿದೆ ಎಂದು ಉಪಾಧ್ಯಕ್ಷೆ ಕಾವ್ಯ ಭರವಸೆ ನೀಡಿದರು.

ಬಸ್ ನಿಲ್ದಾಣದಲ್ಲಿ ತಾತ್ಕಾಲಿಕ ಶೆಟ್ ನಿರ್ಮಾಣ, ಗೂಡಂಗಡಿಗಳಿಂದಾಗುತ್ತಿರುವ ಕಸ ಸಮಸ್ಯೆ ಪರಿಹಾರಕ್ಕೆ ಮುಂದಾಗುವದು. ಹೊಳೆ, ತೋಡುಗಳಿಗೆ ಶೌಚಗೃಹದ ಗಲೀಜನ್ನು ಪೈಪ್ ಮೂಲಕ ಬಿಡುತ್ತಿರುವ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಲಾಗುವದು. ಕಟ್ಟಡ ನಿರ್ಮಾಣ ಸಂದರ್ಭ ಆಯಾಯ ಕಟ್ಟಡದಲ್ಲಿಯೇ ಪಾರ್ಕಿಂಗ್ ವ್ಯವಸ್ಥೆಗೆ ಅವಕಾಶ ನೀಡುವವರಿಗೆ ಮಾತ್ರ ನಿರಾಕ್ಷೇಪಣಾ ಪತ್ರ ನೀಡುವ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಗುವದು ಎಂದು ಸೆಲ್ವಿ ಹೇಳಿದರು.

ಪಂಚಾಯಿತಿ ಸದಸ್ಯರೊಬ್ಬರು ಕಾರ್ಯಕ್ರಮಕ್ಕೆ ತೆರಳಬೇಡಿ ಹಣ ಕೇಳುತ್ತಾರೆ ಎಂದು ತಡೆ ಹಿಡಿದಿರುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸೆಲ್ವಿ, ಅಣ್ಣ ನಿಧನರಾಗಿ ನಾವು ಕಷ್ಟದಲ್ಲಿದ್ದೀವಿ. ಪತ್ರಕರ್ತರ ಕಾರ್ಯಕ್ರಮಕ್ಕೆ ಹಣ ನೀಡುವದೆಂತು ಎಂದು ನನ್ನ ತಾಯಿ ಪ್ರಶ್ನಿಸಿದರು. ಇದರಿಂದಾಗಿ ಹಣ ಕೇಳುತ್ತಾರೋ ಎಂದು ಗೊಂದಲದಲ್ಲಿದ್ದೆ. ಈ ಬಗ್ಗೆ ಪ್ರೆಸ್‍ಕ್ಲಬ್ ಅಧ್ಯಕ್ಷರನ್ನು ವಿಚಾರಿಸಿದಾಗ ಹಣ ನೀಡಬೇಕಾಗಿಲ್ಲ ಎಂದು ಮನವರಿಕೆ ಮಾಡಿದರು ಎಂದು ಸೆಲ್ವಿ ಹೇಳಿದರು.

ಮುಕ್ತ ಮುಕ್ತ: ಕಾರ್ಯಕ್ರಮದಲ್ಲಿ ತಮ್ಮ ಪರಿಚಯದಲ್ಲಿ ಅವರ ರಾಜಕೀಯ ಪ್ರವೇಶದ ಬಗ್ಗೆ ಹಂಚಿಕೊಂಡರು.

ಭಾವನಾತ್ಮಕವಾಗಿ ಹಂಚಿಕೊಳ್ಳುವ ಮೂಲಕ ಸಮಸ್ಯೆ ಪರಿಹಾರ ಕಂಡುಕೊಳ್ಳಬಹುದು. ತಾನು ಎಂಎಸ್‍ಸಿ ಶಿಕ್ಷಣ ಪಡೆದು ಉಪನ್ಯಾಸಕಿಯಾಗಿ ಕೆಲಸ ನಿರ್ವಹಿಸಿದ್ದೇನೆ. ನನ್ನ ಸೋದರ ಮಾವ ಅಮ್ಮತ್ತಿರ ಸುರೇಶ್ ಅವರಿಂದ ರಾಜಕೀಯಕ್ಕೆ ಬಂದೆ. ಶಾಸಕ, ಸಂಸದರ ಬೆಂಬಲದಲ್ಲಿ ಕಸ ಸಮಸ್ಯೆ ನಿವಾರಣೆ ಮಾಡಲಾಗುವದು ಎಂದು ಕಾವ್ಯ ಹೇಳಿದರು.

ಬಿಜೆಪಿ ಪಕ್ಷದ ರಾಜೇಶ್ ಅವರಿಂದ ತಾನು ರಾಜಕೀಯಕ್ಕೆ ಬಂದೆ. ಬಸ್ ನಿಲ್ದಾಣದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯಕ್ಕೆ ವ್ಯವಸ್ಥೆ ಮಾಡುವದು ತನ್ನ ಮೊದಲ ಆದÀ್ಯತೆ ಎಂದು ಅಧ್ಯಕ್ಷೆ ಸೆಲ್ವಿ ಅಭಿಪ್ರಾಯಪಟ್ಟರು.

10 ವರ್ಷ ಮಹಿಳಾ ಸಮಾಜ ಅಧ್ಯಕ್ಷಳಾಗಿ, ವಿಎಸ್‍ಎಸ್‍ಎನ್ ಉಪಾಧ್ಯಕ್ಷಳಾಗಿ ಹಾಗೂ 5 ವರ್ಷ ಗ್ರಾ.ಪಂ. ಸದಸ್ಯಳಾಗಿರುವ ಅನುಭವವಿದೆ. ಸಾರ್ವಜನಿಕರೊಂದಿಗೆ ಒಡನಾಟದ ಮೂಲಕ ಸಮಸ್ಯೆ ಪರಿಹಾರಕ್ಕೆ ಒತ್ತು ನೀಡಲಾಗುವದು ಎಂದು ಅಧ್ಯಕ್ಷೆ ಸಮಿತಾ ವಿಶ್ವಾಸ ವ್ಯಕ್ತಪಡಿಸಿದರು.

ಅಜ್ಜಮಾಡ ಕುಶಾಲಪ್ಪ ಪ್ರಾರ್ಥಿಸಿ, ಹೆಚ್.ಕೆ. ಜಗದೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೆಸ್‍ಕ್ಲಬ್ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಪತ್ರಕರ್ತರುಗಳಾದ ಕುಪ್ಪಂಡ ದತ್ತಾತ್ರಿ, ಅರುಣ್ ಕುಮಾರ್, ಮಂಡೇಡ ಅಶೋಕ್, ರಾಕೇಶ್ ಕೊಡಗು, ಟಿ.ಎಲ್. ಶ್ರೀನಿವಾಸ್, ಉಳುವಂಗಡ ಲೋಹಿತ್ ಭಾಗವಹಿಸಿದ್ದರು.