ಮಡಿಕೇರಿ, ಆ. 21: ಕೊಡಗು ಜಿಲ್ಲಾ ಸಹಕಾರ ಯೂನಿಯನ್ ವರ್ಷಂಪ್ರತೀ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು ಮತ್ತು ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಚರ್ಚಾ ಸ್ಪರ್ಧೆಯನ್ನು ಏರ್ಪಡಿಸುತ್ತಿದೆ.

ಸದರಿ ಸಾಲಿನಲ್ಲಿ ತಾ. 26 ರಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ‘ರಾಷ್ಟ್ರದ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಸಹಕಾರ ತತ್ವವೊಂದೇ ಪ್ರಮುಖ ಸಾಧನ.’ ‘ಅo-ಔಠಿeಡಿಚಿಣioಟಿ is ಣhe imಠಿoಡಿಣಚಿಟಿಣ ಣooಟ ಣo soಟve ಚಿಟಟ ಣhe ಠಿಡಿobಟems iಟಿ ಣhe ಛಿouಟಿಣಡಿಥಿ’ ವಿಷಯದ ಕುರಿತು ಪ್ರಬಂಧ ಸ್ಪರ್ಧೆಯನ್ನು ಪೂರ್ವಾಹ್ನ 11 ಗಂಟೆಗೆ ಏರ್ಪಡಿಸಲಾಗಿದೆ.

ಚರ್ಚಾ ಸ್ಪರ್ಧೆ

ಅಲ್ಲದೆ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ “ಸಹಕಾರ ಚಳುವಳಿಯಿಂದ ಮಾತ್ರವೇ ಗ್ರಾಮೀಣ ಅಭಿವೃದ್ಧಿ ಸಾಧ್ಯ.” “ಖuಡಿಚಿಟ ಆeveಟoಠಿmeಟಿಣ is ಠಿossibಟe oಟಿಟಥಿ ಣhಡಿough ಅo-ಔಠಿeಡಿಚಿಣive movemeಟಿಣ” ವಿಷಯದ ಕುರಿತು ಚರ್ಚಾ ಸ್ಪರ್ಧೆಯನ್ನು ಅದೇ ದಿನ ಪೂರ್ವಾಹ್ನ 12 ಗಂಟೆಯಿಂದ ಯೂನಿಯನ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ಈ ಸಂಬಂಧ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ಸುತ್ತೋಲೆಯನ್ನು ಕಳುಹಿಸಲಾಗಿರುತ್ತದೆ. ಪ್ರಬಂಧ ಸ್ಪರ್ಧೆಗೆ ಒಂದು ಶಾಲೆಯಿಂದ ಒಬ್ಬ ವಿದ್ಯಾರ್ಥಿಯನ್ನು ಹಾಗೂ ಚರ್ಚಾ ಸ್ಪರ್ಧೆಗೆ ಒಂದು ಶಾಲೆಯಿಂದ ವಿಷಯದ ಪರವಾಗಿ ಒಬ್ಬರು ಮತ್ತು ವಿರುದ್ಧವಾಗಿ ಒಬ್ಬರನ್ನು ಆಯ್ಕೆ ಮಾಡಿ ಕಳುಹಿಸಬೇಕಿದೆ. ಹಾಜರಾಗುವ ವಿದ್ಯಾರ್ಥಿಗಳಿಗೆ ಮಾತ್ರ ಪ್ರಯಾಣ ದರ ಪಾವತಿಸಲಾಗುವದು.