ಮಡಿಕೇರಿ, ಜೂ. 9: ಪಶು ವೈದ್ಯಕೀಯ ಇಲಾಖೆ, ನೆಹರೂ ಯುವ ಕೇಂದ್ರ, ತಾಲೂಕು ಯುವ ಒಕ್ಕೂಟ, ಇವರ ಸಂಯುಕ್ತ ಆಶ್ರಯದಲ್ಲಿ ನೇತಾಜಿ ಯುವಕ ಹಾಗೂ ಯುವತಿ ಮಂಡಲದ ಆಶ್ರಯದಲ್ಲಿ ನೇತಾಜಿ ಯುವ ಮಂಡಲದ ಬೆಳ್ಳಿ ಹಬ್ಬದ ಅಂಗವಾಗಿ ಉಚಿತ ಜಾನುವಾರು ತಪಾಸಣಾ ಶಿಬಿರವನ್ನು ನಡೆಸಲಾಯಿತು.

ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ಮಡಿಕೇರಿ ತಾಲೂಕು ಸಹಾಯಕ ಪಶುಪಾಲನಾ ನಿರ್ದೇಶಕ ಡಾ. ಪ್ರಸನ್ನ ನಾಯಿಗೆ ಲಸಿಕೆ ಹಾಕುವ ಮೂಲಕ ಉದ್ಘಾಟಿಸಿದರು.

ಸಂಪಾಜೆ ಪಶು ಚಿಕಿತ್ಸಾ ಕೇಂದ್ರದ ಡಾ. ಅಶೋಕ್, ನಾಪೋಕ್ಲು ಪಶು ವೈದ್ಯಾಧಿಕಾರಿ ಡಾ. ಬುಳ್ಕಾ ಸಿಬ್ಬಂದಿಗಳೊಂದಿಗೆ ನಾಯಿಗಳಿಗೆ ಹುಚ್ಚು ನಾಯಿ ನಿರೋಧಕ ಹಾಗೂ ಡಿಸ್ಟೆಂಪರ್ ರೋಗ ನಿರೋಧಕ ಲಸಿಕೆಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ ನೇತಾಜಿ ಯುವಕ ಮಂಡಲದ ಅಧ್ಯಕ್ಷ ಎಂ.ಎ. ಮಹಮ್ಮದ್ ರಫೀಕ್, ಯುವತಿ ಮಂಡಳಿ ಅಧ್ಯಕ್ಷೆ ಎ.ಆರ್. ನೇತ್ರಾವತಿ, ಮದೆ ಗ್ರಾಮ ಪಂಚಾಯಿತಿ ಸದಸ್ಯೆ ಗಿರೀಶ್ ತಾಳತ್‍ಮನೆ ಉಪಸ್ಥಿತರಿದ್ದರು.