ವೀರಾಜಪೇಟೆ, ಜೂ. 15: ವೀರಾಜಪೇಟೆಯ ಸಾರ್ವಜನಿಕ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವಂತೆ ಕೊಡಗು ಮುಸ್ಲಿಂ ಹಿತರಕ್ಷಣಾ ವೇದಿಕೆ ಆರೋಗ್ಯ ಸಚಿವ ಯು.ಟಿ. ಖಾದರ್ ಅವರಿಗೆ ಮನವಿ ಸಲ್ಲಿಸಿರುವದಾಗಿ ಅಧ್ಯಕ್ಷ ಪಿ.ಎ. ಹನೀಫ್ ತಿಳಿಸಿದ್ದಾರೆ.

ಈಗಿನ ಆಸ್ಪತ್ರೆ ಒಟ್ಟು 240 ಹಾಸಿಗೆಗಳನ್ನು ಹೊಂದಿದೆ. ಸುಮಾರು 15 ವರ್ಷಗಳ ಹಿಂದೆಯೇ ಆಸ್ಪತ್ರೆಯ ಕಟ್ಟಡಗಳು ನವೀಕರಣಗೊಂಡು ಸುಸ್ಥಿಯಲ್ಲಿದೆ. ಇದನ್ನು ಮೇಲ್ದರ್ಜೆ ಗೇರಿಸಿದರೆ ಗ್ರಾಮಾಂತರ ಪ್ರದೇಶ ಗಳಿಂದ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಇನ್ನೂ ಅಧಿಕವಾಗಲಿದೆ. ಎಲ್ಲ ರೋಗಿಗಳಿಗೆ ಆಸ್ಪತ್ರೆಯಲ್ಲಿ ಮೂಲ ಸೌಲಭ್ಯ ದೊರಕಲಿದೆ. ವೈದ್ಯರು, ದಾದಿಯರು, ಸಿಬ್ಬಂದಿಗಳ ಸೇವೆಯು ಮೇಲ್ಮಟ್ಟದಲ್ಲಿ ರೋಗಿಗಳಿಗೆ ದೊರೆಯಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಸಚಿವರಿಗೆ ಮನವಿ ನೀಡುವ ಸಂದರ್ಭ ವೇದಿಕೆಯ ಸಂಘಟನಾ ಕಾರ್ಯದರ್ಶಿ ಎ.ಎ. ಶಫೀಕ್, ಪ್ರಧಾನ ಕಾರ್ಯದರ್ಶಿ ಏಜಾಜ್ ಅಹಮ್ಮದ್, ಕೋಳುಮಂಡ ರಫಿಕ್ ಹಾಜರಿದ್ದರು.