ವೀರಾಜಪೇಟೆ, ನ. 28: ವೀರಾಜಪೇಟೆ ತಾಲೂಕು ಮೈದಾನದಲ್ಲಿ ಇಂದು ಹಮ್ಮಿಕೊಂಡಿದ್ದÀ ತಾಲೂಕು ಮಟ್ಟದ 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆಯನ್ನು ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ಶಶಿ ಸುಬ್ರಮಣಿ ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು.ಮೆರವಣಿಗೆಯಲ್ಲಿ ಮಂಡ್ಯ ಜಿಲ್ಲೆಯ ಡೊಳ್ಳು ಕುಣಿತ, ಕೆದಮುಳ್ಳೂರಿನ ತೆರೆ, ದೇವಣಗೇರಿ ತಂಡದಿಂದ ಕೊಡವ ವಾಲಗ, ವಿವಿಧ ಸ್ತ್ರೀ ಶಕ್ತಿ ಸಂಘಗಳಿಂದ ಪೂರ್ಣಕುಂಭ ಕಳಸ, ಕಂಡಂಗಾಲ ತಂಡದಿಂದ ಬಾಳೋಪಾಟ್, ಸ್ಕೌಟ್ ಅಂಡ್ ಗೈಡ್ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು, ಪಟ್ಟಣದ ವಿವಿಧ ಶಾಲೆಗಳ ಸ್ತಬ್ಧ ಚಿತ್ರಗಳೊಂದಿಗೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ತಾಲೂಕು ಮೈದಾನಕ್ಕೆ ಸಾಗಿದರು. ಉದ್ಘಾಟನೆಯ ಸಂದÀರ್ಭ ಸಮ್ಮೇಳನಾಧ್ಯಕ್ಷೆ ಕುಲ್ಲಚಂಡ ಚಿಪ್ಪಿ ಕಾರ್ಯಪ್ಪ, ತಹಶೀಲ್ದಾರ್ ಮಹದೇವಸ್ವಾಮಿ, ತಾಲೂಕು ಕಾರ್ಯನಿರ್ವವಹಣಾಧಿಕಾರಿ ಪಡ್ನೇಕರ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲೋಕೇಶ್ ಸಾಗರ್, ತಾಲೂಕು ಅಧ್ಯಕ್ಷ ಮಧೋಶ್ ಪೂವಯ್ಯ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೂತಂಡ ಸಚಿನ್ ಕುಟ್ಟಯ್ಯ ಮತ್ತಿತರರು ಉಪಸ್ಥಿತರಿದ್ದರು.

ದ್ವಾರಗಳ ಉದ್ಘಾಟನೆ

ತಾಲೂಕು ಮೈದಾನದಲ್ಲಿ ಆಯೋಜಿಸಲಾಗಿದ್ದ ಕನ್ನಡ ಸಾಹಿತ್ಯ ಸಮ್ಮೇಳನದ ಪಟ್ಟಣದ ಮುಖ್ಯ ದ್ವಾರಗಳಿಗೆ ಹಾಕಲಾಗಿದ್ದ ವಿವಿಧ ಸಾಹಿತಿಗಳ ದ್ವಾರವನ್ನು ಬೆಳಿಗ್ಗೆ 8.45 ಗಂಟೆಗೆ ಉದ್ಘಾಟಿಸಲಾಯಿತು. ಡಿ.ಜೆ. ಪದ್ಮನಾಭ ದ್ವಾರವನ್ನು ತಾಲೂಕು ಪಂಚಾಯಿತಿ ಸದಸ್ಯ

(ಮೊದಲ ಪುಟದಿಂದ) ಬಿ.ಎಂ ಗಣೇಶ್, ಬಿ.ಡಿ ಗಣಪತಿ ಸ್ಮಾರಕ ದ್ವಾರವನ್ನು ಪಟ್ಟಣ ಪಂಚಾಯಿತಿ ಸದಸದ್ಯ ಟಿ.ಜೆ ಶಂಕರ್, ಮುಲ್ಲೆರ ಜಿಮ್ಮಿ ಅಯ್ಯಪ್ಪ ದ್ವಾರವನ್ನು ತಾಲೂಕು ಪಂಚಾಯಿತಿ ಸದಸ್ಯ ಮಾಳೇಟಿರ ಪ್ರಶಾಂತ್ ಉತ್ತಪ್ಪ, ಡಾ ಮುಕ್ಕಾಟ್ಟಿರ ಚಂಗಪ್ಪ ದ್ವಾರವನ್ನು ತಾಲೂಕು ಪಂಚಾಯಿತಿ ಸದಸ್ಯ ಆಲತಂಡ ಸೀತಮ್ಮ, ನಡಿಕೇರಿಯಂಡ ದ್ವಾರವನ್ನು ಜಿಲ್ಲಾ ಪಂಚಾಯಿತಿ ಸದಸ್ಯರಾದ ಅಚ್ಚಪಂಡ ಮಹೇಶ್, ರಘುನಾಥ್ ನಾಯಕ್ ದ್ವಾರವನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಮೂಕೊಂಡ ವಿಜು ಸುಬ್ರಮಣಿ, ಅಪ್ಪಚ್ಚ ಕವಿ ವೇದಿಕೆಯನ್ನು ತಾಲೂಕು ಪಂಚಾಯಿತಿ ಉಪಾಧ್ಯಕ್ಷ ನೆಲ್ಲಿರ ಚಲನ್ ಉದ್ಘಾಟಿಸಿದರು.

ಧ್ವಜಾರೋಹಣ

ತಾಲೂಕು ಮೈದಾನದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ 7ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಪೂರ್ವಾಹ್ನ 7.15ಕ್ಕೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸಚಿನ್ ಕುಟ್ಟಯ್ಯ ಅವರು ರಾಷ್ಟ್ರದ ಧ್ವಜಾರೋಹಣ ಮಾಡಿ ಚಾಲನೆ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣವನ್ನು ತಾಲೂಕು ಅಧ್ಯಕ್ಷ ಮುಲ್ಲೆಂಗಡ ಮಧೋಶ್ ಪೂವಯ್ಯ, ನಾಡ ಧ್ವಜಾರೋಹಣ ಪಟ್ಟಣ ಪಂಚಾಯತ್ ಉಪಾಧ್ಯಕ್ಷೆ ತಸ್ನೀಮ್ ಅಕ್ತರ್ ನೇರವೇರಿಸಿದರು. ರಾಷ್ಟ್ರಗೀತೆ, ಕನ್ನಡ ನಾಡಗೀತೆಯನ್ನು ಅರಮೇರಿ ಕಳಂಚೇರಿ ಶಾಂತ ಮಲ್ಲ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ನಡೆಯಿತು. ಇದೇ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಲೋಕೇಶ್ ಸಾಗರ್, ನಗರ ಠಾಣಾಧಿಕಾರಿ ಸುಬ್ರಮಣಿ ಸೇರಿದಂತೆ ಕನ್ನಡ ಸಾಹಿತ್ಯ ಪರಿಷತ್‍ನ ಪದಾಧಿಕಾರಿಗಳು ಉಪಸ್ಥಿತರಿದ್ದರು.