ಮಡಿಕೇರಿ, ಜೂ. 12: ರೈಲು ಮಾರ್ಗ ಕುಶಾಲನಗರದವರೆಗೆ ಸ್ಥಾಪಿಸಲು ಅವಕಾಶ ದೊರೆತೊಡನೆ ಸರಕಾರಗಳು, ರೈಲು ಮಂಡಳಿ ಇದನ್ನು ಮಡಿಕೇರಿ ಮತ್ತು ಜಿಲ್ಲೆಯ ಇತರ ಭಾಗಗಳಿಗೆ ವಿಸ್ತರಿಸುವ ಸಾಧ್ಯತೆ, ಅವಕಾಶಗಳು ಹೆಚ್ಚುತ್ತವೆ. ಜಿಲ್ಲೆಯ ಪರಿಸರ ನಾಶ, ಮರಗಳ ಹನನ, ತೋಟಗಳು ಮಣ್ಣುಪಾಲುಗೊಂಡು ಕೊಡಗಿನ ಜನರ ಸ್ಥಿತಿ ಅಧೋಗತಿ ಯಾಗಲಿದೆ ಎಂದು ಬೆಂಗಳೂರಿನಲ್ಲಿ ವೃತ್ತಿಯಲ್ಲಿರುವ ಪಟ್ಟಮಾಡ ಸುಂದರ್ ಮುತ್ತಣ್ಣ ಅಭಿಪ್ರಾಯಪಟ್ಟಿದ್ದಾರೆ. ಇಂದಿನ ”ಶಕ್ತಿ” ಯಲ್ಲಿ ರೈಲು ಮಾರ್ಗಕ್ಕೆ ವಿರೋಧ ವರದಿ ಪ್ರಕಟಗೊಂಡಿದ್ದು, ಅಂತರ್ಜಾಲದ ಮೂಲಕ ತಾನು ಹುಟ್ಟು ಹಾಕಿದ ಮನವಿ ಆಂದೋಲನದ ಕುರಿತಾದ ಮಾಹಿತಿ ಪ್ರಕಟಣೆಗೆ ಸುಂದರ್ ಮುತ್ತಣ್ಣ ಧನ್ಯವಾದ ಸಲ್ಲಿಸಿದ್ದಾರೆ.

ಆದರೆ, ಈ ಕುರಿತಾಗಿ ಸಮಜಾಯಿಷಿಕೆ ನೀಡಿರುವ ಅವರು, ರೈಲು ಮಾರ್ಗ ಕುಶಾಲನಗರದವರೆಗೆ ಬಂದರೆ, ಮತ್ತೆ ಮಡಿಕೇರಿ ಹಾಗೂ ಜಿಲ್ಲೆಯ ಇತರ ಭಾಗಗಳಿಗೂ ಮುಂದುವರಿಕೆಗೆ ಸರಕಾರಗಳು ಖಂಡಿತ

ಮುನ್ನುಗ್ಗುವ ಅಪಾಯವಿರುವದರಿಂದ ಕೊಡಗಿಗೆ ರೈಲು ಮಾರ್ಗವೇ ಬೇಡ ಎಂಬ ಕರೆ ತಮ್ಮದಾಗಿದ್ದು ಈ ಕುರಿತಾದ ಸಹಸ್ರಾರು ಅಭಿಪ್ರಾಯಗಳನ್ನು ಸರಕಾರಕ್ಕೆ ಮುಟ್ಟಿಸುವ ಕೆಲಸವಾಗುತ್ತಿದೆ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅಂತರ್ಜಾಲ ಸಂಪರ್ಕ ಮೂಲಕ ಅಭಿಪ್ರಾಯ ಚಳುವಳಿಗೆ ಕೊಡಗಿನ ನಾಗರಿಕರು ಕೊಡಗಿಗೆ ರೈಲು ಮಾರ್ಗವೇ ಬೇಡ ಎಂಬ ಅಭಿಪ್ರಾಯದ ಮೂಲಕ ಈ ಪ್ರತಿಭಟನೆಗೆ ಸಹಕರಿಸುವಂತೆ ಅವರು “ಶಕ್ತಿ” ಮೂಲಕ ಕೋರಿದ್ದಾರೆ. ತಮ್ಮ ಅಭಿಪ್ರಾಯಗಳನ್ನು ನಾಗರಿಕರು ಕಳುಹಿಸಬೇಕಾದ ಅಂತರ್ಜಾಲ ಸಂಪರ್ಕ ಹೀಗಿದೆ:-