ವೀರಾಜಪೇಟೆ, ಆ. 13 : ಶತಮಾನಗಳ ಹಿಂದಿನಿಂದಲೂ ವಿದ್ಯಾ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ವೀರಾಜಪೇಟೆಯ ಸಂತ ಅನ್ನಮ್ಮ ನವೀಕೃತ ದೇವಾಲಯದ ಉದ್ಘಾಟನೆಯನ್ನು ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ವಂ.ಡಾ.ಥಾಮಸ್ ಆಂಟೋನಿ ವಾಳಪಿಳ್ಳಿ ಹಾಗೂ ಚಿಕ್ಕ ಮಗಳೂರು ಧರ್ಮಕ್ಷೇತ್ರದ ಧರ್ಮಾಧಿಕಾರಿ ವಂ.ಡಾ. ಟಿ. ಅಂತೋಣಿ ಸ್ವಾಮಿ ತಾ. 16ರಂದು ಬೆಳಿಗ್ಗೆ 9-30ಗಂಟೆಗೆ ನೆರವೇರಿಸಿ ಆಶೀರ್ವಚನ ನೀಡಲಿದ್ದಾರೆ ಎಂದು ದೇವಾಲಯದ ಧರ್ಮಾಧಿಕಾರಿ ರೆ.ಫಾ. ಡಾ. ಆರೋಗ್ಯ ಸ್ವಾಮಿ ತಿಳಿಸಿದ್ದಾರೆ.

ಪತ್ರ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಡಾ. ಆರೋಗ್ಯ ಸ್ವಾಮಿ ಅವರು, ಶತಮಾನದ ಹಿಂದೆಯೇ ನಿರ್ಮಾಣಗೊಂಡಿದ್ದ ಸಂತ ಅನ್ನಮ್ಮ ಮಾತೆಯ ದೇವರ ಕೃಪಾಶೀರ್ವಾದಿಂದ ನವೀಕೃತಗೊಂಡ ಭವ್ಯ ದೇವಾಲಯ ಉದ್ಘಾಟನೆಗೆ ಸಿದ್ಧವಿದೆ. ಉದ್ಘಾಟನೆಯ ನಂತರ ಸಂತ ಅನ್ನಮ್ಮ ದೇವಾಲಯದ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಅತಿಥಿಗಳಾಗಿ ಮೈಸೂರು ಧರ್ಮಕ್ಷೇತ್ರದ ಶ್ರೇಷ್ಠ ಗುರು ಡಾ.ಎನ್.ಎಸ್. ಮರಿಜೋಸೆಫ್, ಮಾಜಿ ಸಚಿವರುಗಳಾದÀ ಕೆ.ಜೆ.ಜಾರ್ಜ್, ಟಿ.ಜಾನ್, ಶಾಸಕರುಗಳಾದ ಜೆ.ಆರ್.ಲೋಬೊ, ಐವನ್ ಡಿಸೋಜ, ವಿಶೇಷ ಆಹ್ವಾನಿತರಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸೀತಾರಾಂ, ಸಂಸದ ಪ್ರತಾಪ್ ಸಿಂಹ, ಶಾಸಕ ಕೆ.ಜಿ.ಬೋಪಯ್ಯ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ.ಹರೀಶ್, ಎಂ.ಎಲ್.ಸಿ. ವೀಣಾ ಅಚ್ಚಯ್ಯ, ಶಾಂತಾಮಲ್ಲಿಕಾರ್ಜುನ ಸ್ವಾಮಿ, ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೂತಂಡ ಸಚಿನ್ ಕುಟ್ಟಯ್ಯ, ಮೈಸೂರಿನ ಪ್ರಾಂತ್ಯಾಧಿಕಾರಿ ಸಿಸ್ಟರ್ ಜುಲಿಯಾನ ಡಿಸೋಜ, ಜಿಲ್ಲೆಯ ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಅಧಿಕಾರಿ ಕೆ.ವಿ.ಸುರೇಶ್, ಕಾಫಿ ಪ್ಲಾಂಟರ್ ಸಿ.ಪಿ.ಪ್ರಕಾಶ್ ಪೆರುಂಬಾಡಿಯ ಶಂಸುಲ್ ಉಲಮಾ ಎಜ್ಯುಕೇಷನ್ ಅಕಾಡೆಮಿಯ ಅಧ್ಯಕ್ಷ ಸಿ.ಪಿ.ಎಂ.ಬಶೀರ್ ಹಾಜಿ ಸಂತ ಅನ್ನಮ್ಮ ದೇವಾಲಯ ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಲ್ಲಿರುವ ಸಹಾಯಕ ಗುರುಗಳು, ಕನ್ಯಾಸ್ತ್ರೀಯರು ಹಾಗೂ ಕ್ರೈಸ್ತ ಭಕ್ತಾದಿಗಳು ಭಾಗವಹಿಸಲಿದ್ದಾರೆ ಎಂದರು. ಗೋಷ್ಠಿಯಲ್ಲಿ ಸಹಾಯಕ ಧರ್ಮಗುರುಗಳಾದ ರೆ.ಫಾ. ಮದಲೈಮುತ್ತು ಹಾಗೂ ರೆ.ಫಾ. ಟೆನ್ನಿ ಕುರಿಯನ್ ಉಪಸ್ಥಿತರಿದ್ದರು.