ಮಡಿಕೇರಿ, ಜೂ. 15: ಜಿಲ್ಲಾಸ್ಪತ್ರೆ ಯಲ್ಲಿ ಹಲವು ಮೂಲಭೂತ ಸೌಲಭ್ಯಗಳ ಸಮಸ್ಯೆ ಕಾಡುತ್ತಿದ್ದು, ಶೀಘ್ರ ಬಗೆಹರಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ. ಮಡಿಕೇರಿಯ ಸರ್ಕಾರಿ ಆಸ್ಪತ್ರೆ ಹೆರಿಗೆ ಮತ್ತು ಮಕ್ಕಳ ವಾರ್ಡಿನ ಕಟ್ಟಡದಲ್ಲಿ ಸಮಸ್ಯೆಯು ತುಂಬಿ ತುಳುಕುತ್ತಿದೆ. ವಾರ್ಡಿನಲ್ಲಿ ಕತ್ತಲೆಯಿಂದ ಕೂರಬೇಕಾದ ಪರಿಸ್ಥಿತಿ ಇದೆ. ಜನರೇಟರ್, ಶೌಚಾಲಯದ ವ್ಯವಸ್ಥೆ ಇಲ್ಲ. ಶೌಚಾಲಯ ಇದ್ದರೂ ಉಪಯೋಗಿಸಲು ಯೋಗ್ಯವಾಗಿಲ್ಲ. ಅಲ್ಲಿ ಗಲೀಜು, ಮದÀ್ಯದ ಬಾಟಲಿಗಳು, ಬೀಡಿ-ಸಿಗರೇಟು, ಗಬ್ಬುವಾಸನೆ ಯಿಂದ ಕೂಡಿದ್ದು, ಶುಚಿತ್ವ ಇಲ್ಲ. ಸೊಳ್ಳೆಗಳ ಕಾಟವೂ ಇದೆ. ಆಸ್ಪತ್ರೆಯ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸುವಂತೆ ಆಗ್ರಹಿಸಿದ್ದಾರೆ. ಸಮಸ್ಯೆ ಬಗೆಹರಿಸ ದಿದ್ದಲ್ಲಿ ಕರ್ನಾಟಕ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಕ.ರ.ವೇ. ಸ್ವಾಭಿಮಾನಿ ಬಣದ ಸೋಮವಾರ ಪೇಟೆ ತಾಲೂಕು ಅಧ್ಯಕ್ಷ ಸಂದೇಶ್ ಜೋಸೆಫ್ ಡಿಸೋಜ ಅವರು ತಿಳಿಸಿದ್ದಾರೆ.