ಮಡಿಕೇರಿ, ಜು. 25 : ಎಮ್ಮೆಮಾಡಿನ ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್‍ನ ನೂತನ ಅಧ್ಯಕ್ಷರು ಮತ್ತು ಅವರ ಬೆಂಬಲಿಗರ ಧೋರಣೆಯನ್ನು ತೀವ್ರವಾಗಿ ಖಂಡಿಸಿರುವ ಜಮಾಅತ್‍ನ ಮಾಜಿ ಪದಾಧಿಕಾರಿಗಳು, ಈಗಾಗಲೆ ನಾಪೆÇೀಕ್ಲು ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಪೂರಕವಾಗಿ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಪ್ರತಿಭಟನೆ ನಡೆಸುವದಾಗಿ ಎಚ್ಚರಿಕೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಮಾಅತ್‍ನ ಸದಸ್ಯ ಸಿ.ಎ. ಇಸ್ಮಾಯಿಲ್, ಜಮಾಅತ್‍ನ ನೂತನ ಅಧ್ಯಕ್ಷ ಉಸ್ಮಾನ್ ಹಾಜಿ ಮತ್ತು ಕಾರ್ಯದರ್ಶಿ ಹುಸೈನ್ ಸಖಾಫಿ ಅವರು ನಿಯಮಾವಳಿಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಚುನಾವಣಾ ಸಂದರ್ಭ ಅವರ ವಿರುದ್ಧವಾಗಿ ಮತ ಚಲಾಯಿಸಿದ ಶೇ.43 ರಷ್ಟು ಮಂದಿಯ ಮೇಲೆ ತಮ್ಮ ಬೆಂಬಲಿಗರ ಮೂಲಕ ಹಲ್ಲೆ ನಡೆಸುವ ಪ್ರಯತ್ನಗಳಿಗೆ ಮುಂದಾಗುತ್ತಿರುವದಾಗಿ ಆರೋಪಿಸಿದರು.

ಕಳೆದ ತಾ. 17 ರಂದು ಜಮಾಅತ್ ಸದಸ್ಯರಾದ ಉಮ್ಮರ್, ಅಬ್ದುಲ್ ರಜಾಕ್, ಸೈಯದ್ ಮತ್ತು ಜೌಹರ್ ಎಂಬವರು ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಹೊರಬರುತ್ತಿದ್ದ ಸಂದರ್ಭ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಇದರಿಂದ ಗಾಯಗೊಂಡ ಸೈಯದ್ ಮತ್ತು ಜೌಹರ್ ಮಡಿಕೆÉೀರಿ ಆಸ್ಪತ್ರೆಯಲ್ಲಿ ಮತ್ತು ಉಮ್ಮರ್ ಮತ್ತು ಅಬ್ದುಲ್ ರಜಾಕ್ ಅವರು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಈ ಬಗ್ಗೆ ನಾಪೆÇೀಕ್ಲು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವದಾಗಿ ಮಾಹಿತಿ ನೀಡಿದರು.

ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದರೂ, ಪ್ರಕರಣದ ಆರೋಪಿ ಸ್ಥಾನದಲ್ಲಿರುವ ಜಮಾಅತ್ ಅಧ್ಯಕ್ಷರು ಸೇರಿದಂತೆ ಮೂವರು ವ್ಯಕ್ತಿಗಳು ಎಮ್ಮೆಮಾಡಿನಲ್ಲಿ ನಿರಾತಂಕ ವಾಗಿ ಓಡಾಡಿ ಕೊಂಡಿರುವದಾಗಿ ಇಸ್ಮಾಯಿಲ್ ಆರೋಪಿಸಿ, ಈ ಬಗ್ಗೆ ಪೆÇಲೀಸ್ ಇಲಾಖೆ ಹೆಚ್ಚಿನ ನಿಗಾ ವಹಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಜಮಾಅತ್‍ನ ನೂತನ ಆಡಳಿತ ಮಂಡಳಿಯಿಂದ ಎಲ್ಲರನ್ನು ಒಟ್ಟಾಗಿ ಸೌಹಾರ್ದಯುತವಾಗಿ ಮುನ್ನಡೆಸಿ ಕೊಂಡು ಹೋಗುವ ಪ್ರಯತ್ನಗಳು ಅತ್ಯವಶ್ಯವಾಗಿ ನಡೆಯಬೇಕು. ಆದರೆ, ಪ್ರಸ್ತುತ ನೂತನ ಆಡಳಿತ ಮಂಡಳಿ ಇದಕ್ಕೆ ವಿರುದ್ಧವಾಗಿ ನಡೆದು ಕೊಳ್ಳುತ್ತಿರುವದಾಗಿ ಟೀಕಿಸಿದರು.

ಗೋಷ್ಠಿಯಲ್ಲಿ ಜಮಾಅತ್‍ನ ಮಾಜಿ ಕೋಶಾಧಿಕಾರಿ ಸಿ.ಎ. ಮಾಹಿನ್, ಶಹಿದಿ ಅನಾಥಾಲಯದ ಮಾಜಿ ಕಾರ್ಯದರ್ಶಿ ಪಿ.ವೈ. ಮೊೈದು ಕುಂಞ, ಸದಸ್ಯ ಅಬ್ದುಲ್ ಸಮದ್ ಉಪಸ್ಥಿತರಿದ್ದರು.